ಜಿಲ್ಲಾದ್ಯಂತ ಸೂಕ್ಷ÷್ಮ್ಮ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಿಎಂಗೆ ಮನವಿ
ಚಿತ್ರದುರ್ಗದಲ್ಲಿ ಗುರುವಾರ ಡಿಸಿ ಟಿ. ವೆಂಕಟೇಶ್ ಹೊಳಲ್ಕೆರೆ ಭಾಗದ ರೈತರ ಸಮಸ್ಯೆಗಳ ಕುರಿತಂತೆ ಸಭೆ ನಡೆಸಿದರು. ಭದ್ರಾ ಮೇಲ್ದಂಡೆ ಯೋಜನೆ ಅಽಕಾರಿಗಳಾದ ಹರೀಶ್, ಹರ್ಷ, ನಾಗರಾಜ್, ಈಚಘಟ್ಟದ ಸಿದ್ದವೀರಪ್ಪ ಇತರರು ಇದ್ದರು.
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಯಾವುದೇ ಪ್ರದೇಶಗಳು ಬಿಟ್ಟು ಹೋಗದಂತೆ, ಜಿಲ್ಲೆಯಲ್ಲಿ ಸೂಕ್ಷ÷್ಮನೀರಾವರಿ ಯೋಜನೆ ಅನುಷ್ಠಾನ ಮಾಡುವಂತೆ ಶನಿವಾರ ಬೆಂಗಳೂರಲ್ಲಿ ನಡೆಯಲಿರುವ ಮುಖ್ಯಮಂತ್ರಿ ಸಭೆಯಲ್ಲಿ ಜಿಲ್ಲೆಯ ರೈತರ ಪರ ವಾಗಿ ಮನವಿ ಮಾಡುವುದಾಗಿ ಜಿಲ್ಲಾಽಕಾರಿ ಟಿ. ವೆಂಕಟೇಶ್ ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತಂತೆ ಹೊಳಲ್ಕೆರೆ ಭಾಗದ ರೈತರ ಸಮಸ್ಯೆಗಳ ಕು ರಿತ ಸಭೆಯಲ್ಲಿ ಮಾತನಾಡಿ, ಪ್ರತಿ ತಾಲೂಕುವಾರು ಸೂಕ್ಷ÷್ಮ್ಮ ಹಾಗೂ ಹನಿ ನೀರಾವರಿ ಯೋಜನೆಯಡಿ ಕೈಬಿಟ್ಟ ಪ್ರದೇಶ ಮ ತ್ತು ಕೆರೆ ತುಂಬಿಸುವ ಯೋಜನೆಯಡಿ ಒಳಪಡದ ಕೆರೆಗಳ ವಿವರಗಳನ್ನು ಅಽಕಾರಿಗಳು ನೀಡಿದರೆ, ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ತರುತ್ತೇನೆ. ಲಭ್ಯವಿರುವ ನೀರಿನ ಹಂಚಿಕೆ ಹಾಗೂ ಹೆಚ್ಚುವರಿ ನೀರಿನ ಬೇಡಿಕೆ ಆಧರಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಜಿಲ್ಲೆಯ ಎಲ್ಲ ಭಾಗಗಳಿಗೂ ನೀರು ಲಭ್ಯವಾದರೆ ಜಿಲ್ಲೆಯ ರೈತರ ಶೇ.೯೦ ಸಮಸ್ಯೆಗಳು ಇತ್ಯರ್ಥವಾಗಲಿವೆ. ಅಂರ್ತಜಲ ಬಳಕೆ ಮೇಲಿನ ಒತ್ತಡ ಕಡಿಮೆಯಾಗಲಿದೆ. ಇದರೊಂದಿಗೆ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ವೆಂಕಟೇಶ್ ಹೇಳಿದರು.
ರಾಜ್ಯಾದ್ಯಂತ ಒಣಭೂಮಿ ಹಾಗೂ ನೀರಾವರಿ ವ್ಯಾಪ್ತಿಗೆ ಒಳಪಡದ ಪ್ರದೇಶಗಳನ್ನು ಗುರುತಿಸಿ, ನೀರಾವರಿ ವ್ಯಾಪ್ತಿಗೆ ತರಲು ಸ ರ್ಕಾರ ತಜ್ಞರ ಸಮತಿ ರಚಿಸಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ವಂಚಿತವಾಗಿರುವ ಒಣಭೂಮಿ ವಿಸ್ತೀ ರ್ಣ ಹಾಗೂ ಕೆರೆಗಳ ಕುರಿತು ತಾಲೂಕುವಾರು ಮಾಹಿತಿಯನ್ನು ಸಮಿತಿಗೆ ಸಲ್ಲಿಸಲಾಗಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆ ಅಽÃಕ್ಷಕ ಇಂಜಿನಿಯರ್ ಹರೀಶ್ ಹೇಳಿದರು.
ಹೊಳಲ್ಕರೆ ತಾಲೂಕಿನ ಅಂದಾಜು ೫೧,೨೬೧ ಹೆಕ್ಟೇರ್ ಪ್ರದೇಶ ಒಣಭೂಮಿಯಾಗಿದೆ. ೨೫ ಕೆರೆಗಳು ತುಂಬಿಸುವುದು ಬಾಕಿ ಉಳಿದಿದ್ದು, ಭಾಗಕ್ಕೆ ಸೂಕ್ಷ÷್ಮ್ಮ ನೀರಾವರಿ ಕಲ್ಪಿಸಲು ಹೆಚ್ಚುವರಿಯಾಗಿ ೫.೧ ಟಿಎಂಸಿ ನೀರು ಬೇಕಾಗುತ್ತದೆ. ಇದೇ ಮಾದರಿ ಚಿತ್ರದುರ್ಗ ತಾಲೂಕಿನ ೩೨,೨೦೦ ಹೆಕ್ಟೇರ್ ಹಾಗೂ ೧೩ ಕೆರೆ, ಚಳ್ಳಕೆರೆ-೫೦೦೦೦ ಹೆಕ್ಟೇರ್.
ಮೊಳಕಾಲ್ಮೂರು-೪೦೦೦೦ ಹೆಕ್ಟೇರ್-೨೫ ಕೆರೆ, ಹಿರಿಯೂರು-೨೨೦೦೦ ಹೆಕ್ಟೇರ್-೧೫ ಕೆರೆ ಹಾಗೂ ಹೊಸದುರ್ಗ ತಾಲೂಕಿನ ೩೦,೯೫೪ ಹೆಕ್ಟೇರ್ ಪ್ರದೇಶ ಹಾಗೂ ೧೦ ಕೆರೆ ತುಂಬಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ೨,೨೬,೪೧೫ ಹಕ್ಟೇರ್ ಒಣ ಭೂಮಿಯನ್ನು ಸೂಕ್ಷ÷್ಮ್ಮ ನೀರಾವರಿ ಯೋಜನೆಗೆ ಒಳಪಡಿಸಲು ಹಾಗೂ ೮೮ ಕೆರೆ ತುಂಬಿಸಲು ೨೧.೭೩ ಟಿಎಂಸಿ ನೀರಿನ ಅಗತ್ಯವಿದೆ ಎಂದು ಅಽÃಕ್ಷಕ ಇಂಜಿನಿಯರ್ ಹರೀಶ್ ಮಾಹಿತಿ ನೀಡಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಇಇ ಹರ್ಷ, ಎಇ ನಾಗರಾಜ್, ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಈಚಘ ಟ್ಟದ ಸಿದ್ದವೀರಪ್ಪ, ರಂಗಸ್ವಾಮಿ, ಜಯಣ್ಣ, ತುಂಗಪ್ಪ, ಪ್ರಸನ್ನ, ಭಾನವೇಂದ್ರ, ಮಲ್ಲಿಕಾರ್ಜುನ, ಸಿದ್ದೇಶಿ ಮತ್ತಿತರ ರೈತ ಮುಖಂಡರು ಇದ್ದರು.
೧೯೯೭ರಿಂದಲೂ ಹೋರಾಟ
ಜಿಲ್ಲಾದ್ಯಂತ ನೀರಾವರಿ ಸೌಲಭ್ಯ ಕಲ್ಪಿಸಲು ೧೯೯೭ರಿಂದಲೂ ಹೋರಾಟ ನಡೆಸಲಾಗುತ್ತಿದೆ. ಆರಂಭದಲ್ಲಿ ೭೦ ಟಿಎಂಸಿ ನೀರಿನ ಹಂಚಿಕೆಗೆ ಬೇಡಿಕೆ ಇಡಲಾಗಿತ್ತು ಎಂದು ಸಿದ್ದವೀರಪ್ಪ ಹೇಳಿದರು.
ಆದರೆ, ಜಿಲ್ಲೆಗೆ ಲಭಿಸಿದ ೨೯.೯೧ ಟಿಎಂಸಿ ನೀರಿಗೆ ಒಪ್ಪಿ, ಯೋಜನೆ ಜಾರಿಯಾಗಿದ್ದರೂ ಇಂದಿಗೂ ಯೋಜನೆ ಪೂರ್ಣಗೊಂಡಿಲ್ಲ. ಕೆಲಸ ಮುಗಿದು ಹೊಳಲ್ಕೆರೆ ತಾಲೂಕಿಗೆ ನೀರು ಹರಿಯಲು ೬ ತಿಂಗಳಾಗಬಹುದು.
ಸರ್ಕಾರ ಯಾವುದೇ ತಾರತಮ್ಯ ತೊರದೇ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಶೇ.೧೦೦ ನೀರು ತಲುಪಿಸಿ ನೀರಾವರಿ ಯೋಜನೆ ಪೂರ್ಣ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.