ಆದರ್ಶಗಳನ್ನು ಹೊಂದಿದ ಸಂಘಟನೆ ಆರೋಗ್ಯಕರ ಸಮಾಜಕ್ಕೆ ಅಗತ್ಯ Club

ಹೊಸದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹೊಸದುರ್ಗ ಫ್ರೆಂಡ್ಸ್ ಕ್ಲಬ್‌ಗೆ ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಚಾಲನೆ ನೀಡಿದರು. ಹರೀಶ್‌ಬಾಬು, ರೇವಣಸಿದ್ದಪ್ಪ, ರವಿಕುಮಾರ್, ರಾಘವೇಂದ್ರ ಗುಜ್ಜಾರ್, ಜ್ಞಾನೇಶ ಕಬ್ಬಳ, ಶ್ರೀನಿವಾಸ ಇತರರಿದ್ದರು. Club
ಹೊಸದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹೊಸದುರ್ಗ ಫ್ರೆಂಡ್ಸ್ ಕ್ಲಬ್‌ಗೆ ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಚಾಲನೆ ನೀಡಿದರು. ಹರೀಶ್‌ಬಾಬು, ರೇವಣಸಿದ್ದಪ್ಪ, ರವಿಕುಮಾರ್, ರಾಘವೇಂದ್ರ ಗುಜ್ಜಾರ್, ಜ್ಞಾನೇಶ ಕಬ್ಬಳ, ಶ್ರೀನಿವಾಸ ಇತರರಿದ್ದರು. Club
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಹೇಳಿಕೆ
  • ಹೊಸದುರ್ಗ ಪ್ರೆಂಡ್ಸ್ ಕ್ಲಬ್ ಅಸ್ತಿತ್ವಕ್ಕೆ
ಹೊಸದುರ್ಗ: ಸಮಾಜಮುಖಿ ಚಿಂತನೆ, ಉತ್ತಮ ಆದರ್ಶಗಳಿರುವ ಸಂಘಟನೆಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯ ಎಂದು ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಹೇಳಿದರು. Club
ಪಟ್ಟಣದ ಟೌನ್ ಕ್ಲಬ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಹೊಸದುರ್ಗ ಪ್ರೆಂಡ್ಸ್ ಕ್ಲಬ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಂಘಟನೆಗಳು ಸ್ವಾರ್ಥ ಹಾಗೂ ಅಧಿಕಾರ ರಹಿತ ಮನಸ್ಥಿತಿ ಹೊಂದಿರುವ ಸದಸ್ಯರನ್ನು ಹೊಂದಿರಬೇಕು. ಸಂಘ ಸಂಸ್ಥೆಗಳು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಹಾಗೂ ಲಾಭಕ್ಕೆ  ಸೀಮಿತವಾಗದೆ ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು. ಉತ್ತಮ ಉದ್ದೇಶ ಹಾಗೂ ಪರಸ್ಪರ ಸಹಕಾರದಿಂದ ನಡೆಯುವ ಸಂಸ್ಥೆಗಳು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯುತ್ತವೆ. ಸಂಘಟನೆ ಸದಸ್ಯರು ಸ್ವಂತ ಹಿತಾಸಕ್ತಿಗಳನ್ನು ಬಿದಿಗಿಟ್ಟು ಸಾಮೂಹಿಕ ಸಂಕಲ್ಪದೊಂದಿಗೆ ನಡೆಯಬೇಕು ಎಂದರು.
ದಿ. ಮುರಳೀಧರ ಪಟ್ಟಣದ ಗೆಳೆಯರನ್ನು ಒಟ್ಟುಗೂಡಿಸಿ ಮುಸ್ಸಂಜೆ ಬಳಗ, ಪ್ರೆಂಡ್ಸ್ ಕ್ಲಬ್ ಹೆಸರಿನಲ್ಲಿ ಸದಭಿರುಚಿಯ ಕಾರ್ಯಕ್ರಮ ರೂಪಿಸುವ ಕೆಲಸ ಮಾಡುತ್ತಿದ್ದರು. ಸಮಾನ ಮನಸ್ಕ ಸ್ನೇಹಿತರು ಉತ್ತಮ ಉದ್ದೇಶದೊಂದಿಗೆ ಹೊಸದುರ್ಗ ಪ್ರೆಂಡ್ಸ್ ಕ್ಲಬ್ ಆರಂಭಿಸಿದ್ದಾರೆ. ಸಂಘಟನೆ ಕಾರ್ಯಚಟುವಟಿಕೆ ವ್ಯಾಪ್ತಿ ಪಟ್ಟಣಕ್ಕೆ ಸೀಮಿತವಾಗದೆ ತಾಲೂಕಿನಾದ್ಯಂತ ವಿಸ್ತರಿಸಬೇಕು. ಸಮಾಜದಲ್ಲಿ ಬದುಕುವ ನಾವು ಸಂಘ ಜೀವಿಗಳಾಗಿರಬೇಕು ಎಂದು ತಿಳಿಸಿದರು. 
ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್‌ಬಾಬು ಮಾತನಾಡಿ, ಸಂಘಟನೆಯಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಸಾಮಾಜಿಕ ಕಾರ್ಯಗಳು ಒತ್ತಡದ ಬದುಕಿನ ತಲ್ಲಣಗಳನ್ನು ದೂರ ಮಾಡುತ್ತವೆ. ದುಡಿಮೆಯ ಅಲ್ಪ ಭಾಗವನ್ನು ಸಮಾಜ ಸೇವೆಗೆ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಂಘಟನೆಯಲ್ಲಿರುವ ಸದಸ್ಯರು ಪರಸ್ಪರ ಸೌಹಾರ್ದಯುತ ಸಂಬಂಧ ಹೊಂದಿದ್ದರೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು. 
ಟೌನ್‌ಕ್ಲಬ್ ಪದಾಧಿಕಾರಿಗಳು: ಹೊಸದುರ್ಗ ಟೌನ್ ಕ್ಲಬ್ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ರಾಘವೇಂದ್ರ ಗುಜ್ಜಾರ್, ಉಪಾಧ್ಯಕ್ಷ ಮಂಜುನಾಥ,  ಕಾರ್ಯದರ್ಶಿ ಎಚ್.ಇ. ಮಂಜುನಾಥ , ಖಂಜಾಚಿ ಶ್ರೀನಿವಾಸ್, ನಿರ್ದೇಶಕರಾಗಿ ಜ್ಞಾನೇಶ್‌ಕಬ್ಬಳ, ಎಚ್.ಎಂ.ಎಂ. ಹರ್ಷ, ದಾಳಿಂಬೆ ಗಿರೀಶ, ರವಿಕುಮಾರ್ ಬಲ್ಲಾಳ ಸಮುದ್ರ, ಶಿವಕುಮಾರ, ಶಿವನೆಕಟ್ಟೆ ಶಶಿ, ನಾಗಶೇಖರ್, ಹಿತೇಂದ್ರ, ಎಂ. ಯೋಗೀಶ ಆಯ್ಕೆಯಾಗಿದ್ದಾರೆ. 
ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಎಚ್.ಬಿ. ರವಿಕುಮಾರ್, ರೇವಣಸಿದ್ದಪ್ಪ, ಡಾ. ರವಿ, ಚೇತನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net