ಚಿತ್ರದುರ್ಗ: ಆಟೋಮೋಟಿವ್ ಉದ್ಯಮ ಮೆಕ್ಯಾನಿಕಲ್ ಇಂಜಿನಿಯರಿAಗ್‌ಗೆ ಸೀಮಿತವಾಗದೆ, ಎಲೆಕ್ಟಿçಕಲ್, ಎಲೆಕ್ಟಾçನಿಕ್ಸ್ ಹಾಗೂ ನೆಟ್‌ವರ್ಕ್ ತಂತ್ರ ಜ್ಞಾನದ ಸಂಗಮವಾಗಿದೆ ಎಂದು ನಗರದ ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಹೇಳಿದರು.
ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ `ಆಟೋಮೋಟಿವ್ ಇಂಡಸ್ಟಿç ಓವರ್ ವ್ಯೂ-ರೋಡ್ ಮ್ಯಾಪ್ ಟೂ ನೆಟ್‌ವರ್ಕ್ ಇಂಜಿನಿಯರಿAಗ್' ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಅಟೋಮೋಟಿವ್ ಕ್ಷೇತ್ರವು ಹಸಿರು ಇಂಧನ, ಸ್ವಯಂಚಾಲಿತ ವಾಹನಗಳ ಕಡೆ ಮುಖ ಮಾಡಿದೆ. ಎಲೆಕ್ಟಾçನಿಕ್ಸ್ ತಂತ್ರ ಜ್ಞಾನ ಬಳಕೆಯಲ್ಲಿರುವ ಕಾರಣ ನೆಟ್‌ವರ್ಕ್ ಇಂಜಿನಿಯರ್‌ಗಳ ಅಗತ್ಯತೆ ಆಟೋಮೋಟಿವ್ ಕ್ಷೇತ್ರಕ್ಕಿದೆ. ಮುಂದಿನ ದಿನಗಳಲ್ಲಿ ಆಟೋ ಗ್ಯಾರೇಜ್‌ಗಳು ನವೀನ ರೂಪ ಪಡೆದು ನೆಟ್‌ವರ್ಕ್ ಸರ್ವರ್ ರೂಮ್‌ಗಳಾಗಲಿವೆ. ಮುಂದಿನ ಪೀಳಿಗೆಗೆ ಅಟೋ ಮೊಬೈಲ್ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಕಾದಿವೆ ಎಂದರು.
ಸAಪನ್ಮೂಲ ವ್ಯಕ್ತಿಗಳಾದ ಕೊಯಮತ್ತೂರಿನ ರಾಬರ್ಟ್ ಬೋಷ್‌ನ ಸೀನಿಯರ್ ಸಾಪ್ಟ್ವೇರ್ ಇಂಜಿನಿಯರ್ ಎಲ್.ಎಂ. ದೀಕ್ಷಿತ್, ಬೆಂಗಳೂರು ಎಚ್‌ಪಿ ಕಂಪನಿ ಟೆಕ್ನಿಕಲ್‌ಸ್ಟಾಪ್ ಚಂದನ್ ಬಣಕಾರ್ ಉಪನ್ಯಾಸ ನೀಡಿದರು.
ಡಾ.ಕೆ.ಬಿ. ಸಿದ್ದೇಶ್, ಪ್ರೊ.ಬಿ.ಎ. ಪರ್ಜಾನಾ ಪರ್ವೀನ್, ಪ್ರೊ.ಟಿ. ತನುಜಾ ಇತರರು ಇದ್ದರು. ಕೆ.ಪ್ರಣತಿ ಪ್ರಾರ್ಥಿಸಿದರು. ಶುಭಾ, ಚಿನ್ಮಯಿ ನಿರೂಪಿಸಿ ಆರ್. ಸುಷ್ಮಾ ವಂದಿಸಿದರು.