ಆಧುನಿಕ ಭಾರತದ ಸಮಗ್ರ ಬೆಳವಣಿಗೆಗೆ ಶಕ್ತಿಯಾಗಿ ನಿಂತ ಅಂಬೇಡ್ಕರ್

 ಚಿತ್ರದುರ್ಗ ಭೋವಿಗುರುಪೀಠದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಮಾಚಿದೇವ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಬಸವ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವ ಬÊಂಗೇಶ್ವರ ಸ್ವಾಮೀಜಿ ಇದ್ದರು.
ಚಿತ್ರದುರ್ಗ ಭೋವಿಗುರುಪೀಠದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಮಾಚಿದೇವ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಬಸವ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವ ಬÊಂಗೇಶ್ವರ ಸ್ವಾಮೀಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
  • ಸಮಾನತೆ ಮತ್ತು ನ್ಯಾಯದ ತತ್ವ
  • ದಲಿತರ ಹಕ್ಕುಗಳಿಗಾಗಿ ಹೋರಾಟ
ಚಿತ್ರದುರ್ಗ: ಬಹುಮುಖ ಪ್ರತಿಭೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದು ಜಾತಿ, ಕ್ಷೇತ್ರಕ್ಕೆ ಸೀಮಿತವಾಗದೆ ಆಧುನಿಕ ಭಾರತದ ಸಮಗ್ರ ಬೆಳವಣಿಗೆಗೆ ಶಕ್ತಿಯಾಗಿ ನಿಂತವರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀ ಪೀಠದಲ್ಲಿ ಮಂಗಳವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತ್ಯುತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಅಂಬೇ ಡ್ಕರ್ ವ್ಯಕ್ತಿತ್ವವು ನಾನಾ ಕ್ಷೇತ್ರಗಳಿಗೆ ವ್ಯಾಪಿಸಿದೆ. ಅವರು ರಾಷ್ಟಿçÃಯವಾದಿಯಾಗಿ ದೇಶದ ಏಕತೆಗೆ ಶ್ರಮಿಸಿದರೆ, ಕಾನೂನು ತಜ್ಞರಾಗಿ ಸಮಾನತೆ ಮತ್ತು ನ್ಯಾಯದ ತತ್ವಗಳನ್ನು ಸ್ಥಾಪಿಸಿದರು. ರಾಜಕೀಯ ನಾಯಕರಾಗಿ ಜನತಾಂತ್ರಿಕ ಮೌಲ್ಯಗಳನ್ನು ಬಲಪಡಿಸಿದರು. ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರಾಗಿ ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು.
ಇತಿಹಾಸಕಾರ, ತತ್ವ್ವಜ್ಞಾನಿ, ಮಾನವಶಾಸ್ತಜ್ಞ ಹಾಗೂ ಅರ್ಥಶಾಸ್ತಜ್ಞರಾಗಿ ಭಾರತದ ಸಾಮಾಜಿಕ ಮತ್ತು ಆರ್ಥಿಕ ರಚನೆ ಗಳನ್ನು ವಿಶ್ಲೇಷಿಸಿದರು. ಅನೇಕ ಮಹತ್ವದ ಕÊತಿಗಳನ್ನು ಅವರು ರಚಿಸಿದ್ದಾರೆ. ಭಾಷಣಗಳ ಮೂಲಕ ಜನರಲ್ಲಿ ಜಾಗÊತಿ ಮೂಡಿಸಿದ್ದಾರೆ. ಕ್ರಾಂತಿಕಾರಿಯಾಗಿ ಅನ್ಯಾಯಗಳ ವಿರುದ್ಧ ಹೋರಾಡಿದ್ದಾರೆ. ಸಮಾನತೆಗಾಗಿ ಬದ್ಧತೆ ಪ್ರದರ್ಶಿಸಿದ್ದಾರೆ ಹಾಗೂ ಸಂವಿಧಾನದ ಶಿಲ್ಪಿಯಾಗಿ ಅವರು ದೇಶಕ್ಕೆ ಬಲವಾದ ಅಡಿಪಾಯ ನಿರ್ಮಿಸಿದ್ದಾರೆ ಎಂದು ಹೇಳಿದರು.
ಹೊಸದುರ್ಗ ಕುಂಚಿಟಿಗ ಮಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಅವರು ಮಾತನಾಡಿ, ಅಂಬೇಡ್ಕರ್ ಅವರ ಸಂದೇಶವನ್ನು ಇತಿಹಾಸದ ಭಾಗವಾಗಿ ನೋಡದೆ, ಪ್ರಾಯೋಗಿಕವಾಗಿ ಅನುಸರಿಸುವುದು ಇಂದಿನ ಸಮಾಜದ ಅಗತ್ಯವಾಗಿದೆ. ಅಂಬೇಡ್ಕರ್ ಅವರು ಸಾರಿದ ಸಾಮಾನತೆ ತತ್ವಗಳು ಇಂದಿಗೂ ದೇಶದ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತಿವೆ ಎಂದರು.
ಮಡಿವಾಳ ಗುರುಪೀಠದ ಮಾಚಿದೇವ ಶ್ರೀಗಳು ಮಾತನಾಡಿ, ಅಂಬೇಡ್ಕರ್ ಅವರ ಜೀವನವೇ ಶಿಕ್ಷಣದ ಶಕ್ತಿಗೆ ಜೀವಂತ ಉದಾಹರ ಣೆ. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಘೋಷಣÉ ಮೂಲಕ ಶಿಕ್ಷಣದ ಮಹತ್ವವನ್ನು ಜನ ಸಾಮಾನ್ಯರಿಗೆ ಸಾರಿದ್ದಾರೆ ಎಂದರು.
ಶಿಕಾರಿಪುರ ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಕೊರಟಗೆರೆ ಶ್ರೀಕಾಶಿ ಅನ್ನಪೂಣÉÃðಶ್ವರಿ ಮಠದ ಬಸವ ಮಹಾಲಿಂಗ ಸ್ವಾಮೀಜಿ, ಹೆಳವ ಗುರುಪೀಠದ ಬಸವ ಬÊಂಗೇಶ್ವರ ಸ್ವಾಮೀಜಿ ಮಾತನಾಡಿದರು.
ಎಸ್‌ಜೆಎಂಐಟಿ: ಚಿತ್ರದುರ್ಗದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜನ್ಮ ದಿನ ಆಚರಿಸಲಾಯಿತು. ಪ್ರಾಚಾರ್ಯ ಡಾ.ಪಿ.ಬಿ. ಭರತ್ ಮಾತನಾಡಿದರು. ಡಾ.ಟಿ.ವಿ. ಅರವಿಂದ್, ಡಾ.ಎಚ್.ಜೆ. ಲೋಕೇಶ್, ಡಾ.ಕೆ. ಕುಮಾರಸ್ವಾಮಿ, ಜೆ.ಬಿ. ಸುನಿಲ್, ಡಾ.ಜೆ. ಸತೀಶ್, ಎಂ. ಪಲ್ಲವಿ, ಎಂ.ಕೆ. ಸುದರ್ಶನ್, ಡಾ.ಕೆ. ಕುಮಾರಸ್ವಾಮಿ ಇತರರು ಇದ್ದರು.
ಡಯಟ್: ಚಿತ್ರದುರ್ಗದ ಡಯಟ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಲ್ಲಿ ಪ್ರಾಚಾರ್ಯ ಎಂ. ನಾಸಿರುದ್ದೀನ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಉಪ ಪ್ರಾಚಾರ್ಯ ನಾಗಭೂಷಣ್, ಹಿರಿಯ ಉಪನ್ಯಾಸಕರಾದ ಅಶ್ವಥ್‌ನಾರಾಯಣ, ಎಸ್.ಸಿ. ಪ್ರಸಾದ್, ತಿಪ್ಪೇಸ್ವಾಮಿ, ಜ್ಞಾನೇಶ್ವರಿ, ಉಪನ್ಯಾಸಕರಾದ ರಾಮಚಂದ್ರಪ್ಪ, ಎಸ್. ಬಸವರಾಜು, ಎಲ್. ರೇವಣ್ಣ, ರಾಮಣ್ಣ, ಶಿವಲೀಲಾ, ಪದ್ಮ, ಮಂಜುಳ, ಶಂಕರನಾಯ್ಕ, ರಂಗಸ್ವಾಮಿ, ಅವಿನಾಶ್, ಭ್ರಮರಾ, ಗಿರೀಶ್, ಚಂದ್ರಶೇಖರ್, ಅಶ್ವಿನಿ, ವಿನಯ್, ಹೇಮಲತಾ, ಪುರುಷೋತ್ತಮ, ಬೋಸಯ್ಯ, ಮಂಜುಳಾ, ಯುವರಾಜ್, ಗೀತಮ್ಮ, ನಿರ್ಮಲಾ, ಝಾನ್ಸಿರಾಣಿ ಇತರರು ಇದ್ದರು.
ನಿವೃತ್ತ ನೌಕರರ ಸಂಘ: ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಶಾಖೆಯಲ್ಲಿ ಮಂಗಳವಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ ಆಚರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಪ್ರೇಮನಾಥ್ ಮಾತನಾಡಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಟಿ. ತಿಮ್ಮಪ್ಪ, ಖಂಜಾಚಿ ಎನ್.ಆರ್. ಭೈಯಣ್ಣ, ನಿರ್ದೆಶಕರಾದ ಆರ್.ರಂಗಪ್ಪರೆಡ್ಡಿ, ವೈ.ಚಂದ್ರಶೇಖರ್‌ಯ್ಯ, ಟಿ.ಆರ್.ಮಂಜುನಾಥ್, ಬಿ. ಮಂಜುನಾಥ್,ಟಿ.ಪಿ.ಜ್ಞಾನಮೂರ್ತಿ, ಡಿ.ಟಿ.ನಾಗರಾಜ್,ಎಂ.ಎಸ್.ಜಗದೀಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net