ಸಂಘಟನೆ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬಿಳೂರ್ ಮಾತನಾಡಿ, ಮೇ ೩ರಂದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆಗಿ ಟೆಲಿಗ್ರಾಮ್‌ನಲ್ಲಿ ಹರಿದಾಡಿತ್ತು. ಆದರೂ, ಪರೀಕ್ಷೆ ನಡೆಸಿದ್ದ ಎನ್‌ಟಿಎ ಬಳಿಕ ರದ್ದುಗೊಳಿಸಿತ್ತು. ಇದರಿಂದ ವಿದ್ಯಾರ್ಥಿಗಳ ವರ್ಷದ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.