ಶಿಕ್ಷಕರು, ಮಕ್ಕಳ ಹಾಜರಾತಿಗೆ ಎಐ ಹದ್ದಿನಕಣ್ಣು

 ಪಠ್ಯಪುಸ್ತಕ
ಪಠ್ಯಪುಸ್ತಕ
Published on

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಆ್ಯಪ್‌ನಲ್ಲಿ ಲೊಕೇಶನ್, -ೆÇÃಟೋ ಸಹಿತ ಅಟೆಂಡೆನ್ಸ಼್
  • ೧೫೩ ಗಣಿಬಾಽತ ತಾಲೂಕುಗಳಲ್ಲಿ ದ್ವಿಭಾಷಾ ಶಾಲೆ
  • ರಾಜ್ಯದ ಸರ್ಕಾರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ
ವಿಜಯವಾಣಿ ವಿಶೇಷ ಚಿತ್ರದುರ್ಗ
ರಾಜ್ಯದ ಸರ್ಕಾರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಜೂನ್ ೧ ರಿಂದ ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ನೆರವೇರಲಿದ್ದು, ಶಿಕ್ಷಣ ಇಲಾಖೆ ಸರ್ವಸನ್ನದ್ಧವಾಗಿದೆ. ಈ ಬಾರಿಯ ಶೈಕ್ಷಣಿಕ ವರ್ಷವು ಕೇವಲ ಸಾಂಪ್ರದಾಯಿಕ ತರಗತಿಗಳಿಗೆ ಸೀಮಿತವಾಗಿರದೆ, ತಂತ್ರಜ್ಞಾನ ಮತ್ತು ಭಾಷಾ ಮಾಧ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ.
ಪ್ರಮುಖವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೈನಂದಿನ ಹಾಜರಾತಿ ಉಸ್ತುವಾರಿಗೆ ಕÊತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನವನ್ನು ಇಲಾಖೆ ಅಽಕÊತವಾಗಿ ಜಾರಿಗೊಳಿಸುತ್ತಿದೆ.
ಮುಖ ಗುರುತಿಸುವ ಎಐ ತಂತ್ರಜ್ಞಾನ
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಿರಂತರ ಹಾಜರಾತಿ ಮೇಲ್ವಿಚಾರಣೆಗಾಗಿ ಇಲಾಖೆಯು ಸ್ಟೂಡೆಂಟ್ಸ್ -ÉÃಶಿಯಲ್ ರೆಕಗ್ನಿಷನ್ ಅಟೆಂಡೆನ್ಸ್ ಮಾನಿಟರಿಂಗ್ ಸಿಸ್ಟಮ್ ಹಾಗೂ ಕರ್ನಾಟಕ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಕೆಎಎಂಸಿ) ಅನ್ನು ಜಾರಿಗೆ ತಂದಿದೆ.
ಮೇ ೨೯ ರಿಂದಲೇ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇ ಕಾಗಿದ್ದು, ಅಂದಿನಿAದಲೇ ಮೊಬೈಲ್ ಆ್ಯಪ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಶಿಕ್ಷಕರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಶಾಲಾ ಆವರಣದಿಂದಲೇ ತಮ್ಮ ಲೊಕೇಶನ್ ಹಾಗೂ ಭಾವಚಿತ್ರವಿರುವ ಹಾಜರಾತಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೂ ಈ ಎಐ ಆಧಾರಿತ ಮುಖ ಗುರುತಿಸುವಿಕೆ ಹಾಜರಾತಿ ಪದ್ಧತಿ ವಿಸ್ತರಣೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಈಗಾಗಲೇ ಕಾಮ್ಸ್ ಮೂಲಕ ಅಽಕಾರಿಗಳ ಹಾಜರಾತಿ ನಡೆದಿದೆ.
೧೫೩ ತಾಲೂಕುಗಳಲ್ಲಿ ದ್ವಿಭಾಷಾ ಶಾಲೆಗಳ ಕ್ರಾಂತಿ
ಗ್ರಾಮೀಣ ಭಾಗದ ಮಕ್ಕಳನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ರಾಜ್ಯದ ೧೫೩ ಗಣಿಬಾಽತ ತಾಲೂಕುಗಳಲ್ಲಿ ಈ ಶೈಕ್ಷಣಿಕ ವರ್ಷದಿಂದ ೧ ರಿಂದ ೫ನೇ ತರಗತಿವರೆಗೆ ದ್ವಿಭಾಷಾ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಇಲ್ಲಿ ಕನ್ನಡ-ಇಂಗ್ಲಿಷ್ ಹಾ ಗೂ ಉರ್ದು-ಇಂಗ್ಲಿಷ್ ಮಾಧ್ಯಮಗಳಲ್ಲಿ ಬೋಧನೆ ನಡೆಯಲಿದ್ದು, ಪಾಲಕರಲ್ಲಿ ಭಾರಿ ಭರವಸೆ ಮೂಡಿಸಿದೆ.
ಹಬ್ಬದ ವಾತಾವರಣದಲ್ಲಿ ಸ್ವಾಗತ
ಜೂನ್ ೧ ರಂದು ಶಾಲಾ ಆವರಣವನ್ನು ತಳಿರು ತೋರಣ, ರಂಗೋಲಿಗಳಿAದ ಆಕರ್ಷಕವಾಗಿ ಅಲಂಕರಿಸಲಾಗುತ್ತದೆ. ಸ್ಥಳೀಯ ಜನಪ್ರತಿನಿಽಗಳು, ಅಽಕಾರಿಗಳು ಹಾಗೂ ಎಸ್‌ಡಿಎಂಸಿ ಪ್ರಮುಖರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಗುತ್ತದೆ. ಅಂದೇ ಮಕ್ಕಳಿಗೆ ಬಿಸಿಯೂಟದ ಜತೆಗೆ ಸಿಹಿ ವಿತರಿಸಲು ಇಲಾಖೆ ಸಿದ್ಧತೆ ನಡೆಸಿದೆ.
ಮೊದಲ ದಿನವೇ ಕೈ ಸೇರಲಿವೆ ಪುಸ್ತಕ, ಸಮವಸ್ತ್ರ
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲೆಯ ಮೊದಲ ದಿನವೇ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಮವಸ್ತ್ರದ ಬಟ್ಟೆಗಳು ರಾಜಸ್ಥಾನದಿಂದ ಮೇ ೨೭ ಅಥವಾ ೨೮ರೊಳಗೆ ಕರ್ನಾಟಕಕ್ಕೆ ತಲುಪಲಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ೧೬೧೯ ಸರ್ಕಾರಿ ಪ್ರಾಥಮಿಕ ಹಾಗೂ ೧೧೫ ಪ್ರೌಢಶಾಲೆಗಳು ಹಾಗೂ ೨೦೪ ಅನುದಾನಿತ ಪ್ರಾಥಮಿಕ ಹಾಗೂ ೭೧ ಪ್ರೌಢಶಾಲೆಗಳಿವೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ೧೦೬೭೭೫ ಇತ್ತು. ಈ ಬಾರಿ ಶೇ. ೫ ರಷ್ಟು ಪ್ರಗತಿ ನಿರೀಕ್ಷಿಸಿ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ಉಚಿತ ವಿತರಣೆಗೆ ೧೭೩೮೩೨೦ ಹಾಗೂ ಮಾರಾಟಕ್ಕೆ ೭೪೪೫೮೪ ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಉಚಿತ ವಿತರಣೆಗಾಗಿ-೧೩೭೭೩೬೬(ಶೇ.೭೯.೨೪) ಹಾಗೂ ಮಾರಾಟಕ್ಕಾಗಿ-೬೫೦೮೦೯(ಶೇ.೮೦.೪೧) ಪಠ್ಯಪುಸ್ತಕಗಳು ಮೇ ೨೫ರಂದು ಜಿಲ್ಲೆಗೆ(ಶೇ.೭೦)ಸರಬರಾಜಾಗಿವೆ.
ಇನ್ನು ರಾಜ್ಯಾದ್ಯಂತ ಬೋಧನೆಗೆ ತೊಂದರೆಯಾಗದAತೆ ೪೦ ಸಾವಿರ ಪ್ರಾಥಮಿಕ ಹಾಗೂ ೧೧ ಸಾವಿರ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ.
ಕಲಿಕಾ ನ್ಯೂನತೆ ಸರಿದೂಗಿಸಲು ಸೇತುಬಂಧ
ಕಳೆದ ತರಗತಿಗಳ ಕಲಿಕಾ ಕೊರತೆಯನ್ನು ನೀಗಿಸಲು ಜೂನ್ ತಿಂಗಳಲ್ಲಿ ವಿಶೇಷ ಸೇತುಬಂಧ ಕಾರ್ಯಕ್ರಮ ಆಯೋಜಿಸಲಾ ಗಿದೆ. ೧ ರಿಂದ ೩ನೇ ತರಗತಿ ಮಕ್ಕಳಿಗೆ ಒಂದು ತಿಂಗಳ ಕಾಲ ಹಾಗೂ ೪ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ೧೫ ದಿನ ಗಳ ಕಾಲ ಈ ವಿಶೇಷ ತರಬೇತಿ ನಡೆಯಲಿದೆ.
ಇದೇ ವೇಳೆ ಇಡೀ ತಿಂಗಳು ಶಿಕ್ಷಣ ಇಲಾಖÉ ಅಽಕಾರಿಗಳು ಶಾಲೆಗಳಿಗೆ ಮಿಂಚಿನ ಸಂಚಾರ ನಡೆಸಿ ತಪಾಸಣೆ ನಡೆಸಲಿದ್ದಾರೆ. ಮಕ್ಕಳ ದಾಖಲಾತಿ, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಸಮರ್ಪಕವಾಗಿದೆಯೇ? ಶಿಕ್ಷಕರ ವೇಳಾಪಟ್ಟಿ ಮತ್ತು ವಾರ್ಷಿಕ ಕ್ಯಾಲೆಂಡ ರ್ ಪಾಲನೆಯಾಗುತ್ತಿದೆಯೇ? ಹಾಗೂ ಬಿಸಿಯೂಟದ ಗುಣಮಟ್ಟ ಹೇಗಿದೆ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿದ್ದಾರೆ.
ಒಟ್ಟಾರೆ, ಈ ಬಾರಿ ಸರ್ಕಾರಿ ಶಾಲೆಗಳು ಹೈಟೆಕ್ ಸ್ಪರ್ಶ ಹಾಗೂ ಕಟ್ಟುನಿಟ್ಟಿನ ಶಿಸ್ತಿನೊಂದಿಗೆ ಆರಂಭಗೊಳ್ಳುತ್ತಿರುವುದು ಹೊಸ ಆಶಾಕಿರಣ ಮೂಡಿಸಿದೆ.
"

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಾಜರಾತಿಗೆ ಇಲಾಖೆ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಶಾಲಾ ಆರಂಭದೊಳಗೆ ಪಠ್ಯಪುಸ್ತಕ ಸರಬರಾಜು ಪೂರ್ಣವಾಗಲಿದೆ. ಸಮವಸ್ತçವೂ ಶೀಘ್ರ ಪೂರೈಕೆ ಆಗುತ್ತಿದೆ. ಶಾಲಾ ಪ್ರಾರಂಭೋತ್ಸವಕ್ಕೂ ಸಿದ್ಧತೆ ನಡೆದಿದೆ.

— ಎಂ.ಆರ್. ಮಂಜುನಾಥ್, ಡಿಡಿಪಿಐ, ಚಿತ್ರದುರ್ಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net