ಎನ್‌ಎಚ್, ಎಸ್‌ಎಚ್‌ಗಳ ೬೦ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಹದ್ದಿನ ಕಣ್ಣು
ಸ್ಥಳ ಗುರುತಿಸುವಿಕೆ ಕರ‍್ಯ ಪ್ರಗತಿಯಲ್ಲಿ
ಸಾರಿಗೆ ಇಲಾಖೆ
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಸಾರಿಗೆ ಇಲಾಖೆ ರಾಜ್ಯದ ಆಯ್ದ ಹತ್ತು ಜಿಲ್ಲೆಗಳಲ್ಲಿ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎಐ ಆಧಾರಿತ ಸ್ಮಾರ್ಟ್ ಎನ್-ೆÆÃ ರ್ಸ್ಮೆಂಟ್ ಯೋಜನೆ ಜಾರಿಗೆ ಮುಂದಾಗಿದೆ.
ಅತಿ ಹೆಚ್ಚು ಅಪಘಾತಗಳೊಂದಿಗೆ ಸಾವು-ನೋವುಗಳಿಗೆ ಕಾರಣವಾಗುತ್ತಿರುವ ರಾಜ್ಯದ ೧೦ ಜಿಲ್ಲೆಗಳ ಆಯ್ದ ರಾಷ್ಟಿçÃಯ ಹೆದ್ದಾ ರಿ ಮತ್ತು ರಾಜ್ಯಹೆದ್ದಾರಿಗಳ ಒಟ್ಟು ೬೦ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲು ಸ್ಥಳ ಗುರುತಿಸಲು ಸಾರಿಗೆ ಇ ಲಾಖೆ ಕರ‍್ಯದರ್ಶಿಗಳು ವಿಡಿಯೊ ಕಾನರೆನ್ಸ್ ಮೂಲಕ ಜಿಲ್ಲಾಮಟ್ಟದ ಅಽಕಾರಿಗಳೊಂದಿಗೆ ಸಭೆ ಮಾಡಿದ್ದಾರೆ.
ರಾಜ್ಯದಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,೨೦೨೫-೨೬ರ ಬಜೆಟ್‌ನಲ್ಲಿ ಪ್ರ ಮುಖ ರಸ್ತೆ ಸುರಕ್ಷತೆ ಉಪಕ್ರಮವನ್ನು ಘೋಷಿಸಿದ್ದರು. ಇದರ ಅಂಗವಾಗಿ ಪದೇ ಪದೆ ಅಪಘಾತಗಳಾಗುವಂಥ ಸ್ಥಳಗಳಲ್ಲಿ ಕ್ಯಾ ಮರಾಗಳ ಅಳವಡಿಕೆಗೆ ಇಲಾಖೆ ಮುಂದಾಗಿದೆ. ಇದಕ್ಕಾಗಿ ಅಽಕಾರಿಗಳು ಸ್ಥಳ ಗುರುತಿಸಿ ಅಂತಿಮಗೊಳಿಸುವ ಕರ‍್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲಾಡಳಿತ, ಪೊಲೀಸ್, ಸಾರಿಗೆ, ಲೋಕೋಪಯೋಗಿ ಇಲಾಖೆಗಳು ಮತ್ತು ರಾಷ್ಟಿçÃಯ ಹೆದ್ದಾರಿ ಪ್ರಾಽಕಾರ ಅಽಕಾರಿಗಳ ಸಮನ್ವಯ ತಂಡದ ಜಂಟಿ ಸಮೀಕ್ಷೆಯ ಸ್ಥಳ ಗುರುತಿಸುವಿಕೆ ಕರ‍್ಯ ಪ್ರಗತಿಯಲ್ಲಿದೆ. ಇದರ ನೆರವಿಗೆ ಖಾಸಗಿ ಕಂಪನಿಯೊAದು ವೆಂಡರ್ ಸಂಸ್ಥೆಯಾಗಿ ನಿಯೋಜಿತವಾಗಿದೆ.
ಒಂದು ಜಿಲ್ಲೆಯಲ್ಲಿ ಗರಿಷ್ಠ ೬ ಸ್ಥಳಗಳಲ್ಲಿ,ಒಂದು ಸ್ಥಳಗಳಲ್ಲಿ ೪ ಕ್ಯಾಮರಾಗಳನ್ನು(೨-ಆರ್‌ಎಚ್‌ಎಸ್ ಮತ್ತು ೨ ಎಲ್‌ಎಚ್‌ಎಸ್) ಅ ಳವಡಿಸಲಾಗುತ್ತಿದೆ. ಇದರೊಂದಿಗೆ ಎರಡು ಐಟಿಎಂಎಸ್ ಕ್ಯಾಮ ರಾಗಳು, ೨ ರಾಡಾರ್‌ಗನ್‌ಗಳಿರುತ್ತವೆ.
೧೦೦ ಮೀಟರ್ ಉದ್ದದವರೆಗೆ ನೇರ ಮತ್ತು ಸ್ಪಷ್ಟವಾಗಿ ಕ್ಯಾಮರಾಗಳಿಗೆ ಕಾಣಿಸುವಂತೆ ಗುರುತಿಸಿದ ಸ್ಥಳವಿರಬೇಕು. ಇದರ ಸ ಮೀಪ ಯಾವುದೇ ಹಂಪ್ಸ್ ಇತ್ಯಾದಿಗಳಿರಬಾರದು. ನಿರಂತರ ಜ್ಯೋತಿಯಡಿ ಕ್ಯಾಮರಾಗಳಿಗೆ ವಿದ್ಯುತ್ ಪೂರೈಸಲು ಎಸ್ಕಾಂ ಕಂಪನಿಗಳು ಸ್ಪಷ್ಟ ಭರವಸೆ ಒದಗಿಸಬೇಕಿದ್ದು, ಕ್ಯಾಮರಾಗಳ ಸಂಪರ್ಕ ಬೆಂಗಳೂರಲ್ಲಿ ಸ್ಥಾಪಿಸಲಿರುವ ಕಮಾಂಡ್ ಸೆಂಟರ್‌ಗೆ ಜೋಡಣೆ ಆಗಿರುತ್ತದೆ.
ವಾಹನಗಳ ಅತೀ ವೇಗಕ್ಕೆ ಕಡಿವಾಣ ಹಾಕುವ ಮೂಲಕ ಅಪಘಾತಗಳ ನಿಯಂತ್ರಣದ ಮುಖ್ಯ ಉದ್ದೇಶದಿಂದ ಸರ್ಕಾರ ಮತ್ತು ಸಾರಿಗೆ ಇಲಾಖೆ ಈ ಯೋಜನೆ ಜಾರಿಗೊಳಿಸುತ್ತಿದೆ. ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರು ಸಾರಿಗೆ/ಪೊಲೀಸ್ ಇಲಾಖೆ ವಿಽಸುವ ದಂಡದಿAದ ತಪ್ಪಿಸಿಕೊಳ್ಳಲು ಸಾಧ್ಯವಾಗದೆಂಬ ಭರವಸೆ ವ್ಯಕ್ತವಾಗಿದೆ.
ಈಗಾಗಲೇ ಹಲವು ಹೆದ್ದಾರಿಗಳಲ್ಲಿ ಪೊಲೀಸ್ ಇಲಾಖೆ ವಾಹನಗಳ ವೇಗ ನಿಯಂತ್ರಣಕ್ಕೆ ಇತ್ಯಾದಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬAಽಸಿದAತೆ ತನ್ನ ಜಿಲ್ಲಾ ವ್ಯಾಪ್ತಿಯಲ್ಲಿ ದಂಡ ವಿಽಸುತ್ತಿದೆ.
ಯಾವ ಜಿಲ್ಲೆ, ಯಾವ ಹೆದ್ದಾರಿ?
ಚಿತ್ರದುರ್ಗ ಜಿಲ್ಲೆ - ಎನ್‌ಎಚ್-೪೮, ಎನ್‌ಎಚ್-೩೬೯, ಎನ್‌ಎಚ್-೧೫೦ಎ, ಎನ್‌ಎಚ್-೫೦, ಎನ್ ಎಚ್-೧೭೩ ಹಾಗೂ ರಾಜ್ಯಹೆದ್ದಾರಿ (ಎಸ್‌ಎಚ್)-೪೮.
ದಾವಣಗೆರೆ - ಎನ್‌ಎಚ್-೪೮, ಎನ್‌ಎಚ್-೩೬೯, ಎಸ್‌ಎಚ್-೨೫, ಎಸ್‌ಎಚ್-೬೫ ಹಾಗೂ ಎಸ್‌ಎಚ್- ೭೬.
ಹಾವೇರಿ- ಎನ್ ಎಚ್-೪೮, ಎನ್‌ಎಚ್-೭೬೬ಇ.
ಧಾರವಾಡ- ಎನ್‌ಎಚ್-೪೮, ಎನ್‌ಎಚ್-೬೭, ಎನ್‌ಎಚ್-೫೨ ಹಾಗೂ ಎಸ್ ಎಚ್-೭೩.
ದಕ್ಷಿಣ ಕನ್ನಡ -ಎನ್‌ಎಚ್-೬೬, ಎನ್‌ಎಚ್-೧೬೯, ಎನ್‌ಎಚ್-೭೩, ಎನ್‌ಎಚ್-೭೫, ಎನ್‌ಎಚ್-೨೭೫ ಹಾಗೂ ಎಸ್‌ಎಚ್-೭೦
ದಂಡ ಕಟ್ಟಲು ನಿರಾಸಕ್ತಿ
ಈಚೆಗೆ ಸಾರಿಗೆ ಇಲಾಖೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರಿಗೆ ದಂಡದಲ್ಲಿ ಶೇ.೫೦ನ್ನು ಪಾವತಿಸುವಂತೆ ಕಳೆದ ಜೂನ್ ೨೬ರಿಂದ ಜು.೧೦ರವರೆಗೆ ಕಾಲಾವಕಾಶ ನೀಡಿತ್ತು. ಚಿತ್ರದುರ್ಗ ಜಿಲ್ಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬAಽಸಿದAತೆ ೧೯೯೧ರಿಂದ ೨೦೨೨ವರೆಗಿನ ಅವಽಯಲ್ಲಿ ವಿಽಸಿದ್ದ ದಂಡದ ೨೨೩೩ ಪ್ರಕರಣಗಳ ಪೈಕಿ ೯ ಪ್ರಕರಣಗಳಡಿ ೪೨೮೦೦ ರೂ.ದಂಡ ಪಾವತಿ ಆಗಿದೆ. ಇದು ಶೇ.೦.೪೦ ಪ್ರಗತಿಯಾಗಿದೆ.
"
ದಂಡ ಕಟ್ಟ ಬೇಕಿರುವ ಅನೇಕ ಮಾಲೀಕರ ಬಳಿ ದಂಡಕ್ಕೆ ಕಾರಣವಾದ ವಾಹನಗಳೇ ಇಲ್ಲದಿರುವುದು,ಇದ್ದರೂ ಅವುಗಳನ್ನು ದುರಸ್ತಿ ಗೊಳಿಸಿ ಸಂಚಾರಕ್ಕೆ ಸಜ್ಜುಗೊಳಿಸುವುದು, ವಿಳಾಸ ತಪ್ಪಾಗಿರುವುದು ಮೊದಲಾದ ಕಾರಣಗಳಿಂದಾಗಿ ಮಾಲೀಕರ ನಿರಾಸಕ್ತಿಗೆ ಕಾರಣವಾಗಿ ದೆ. ಸದ್ಯದಲ್ಲಿ ಚಿತ್ರದುರ್ಗ ಜಿಲ್ಲೆಯ ವಿವಿಧ ಹೆದ್ದಾರಿಗಳಲ್ಲಿ ಎಐ ಆಧಾರಿತ ಕ್ಯಾಮರಾಗಳ ಅಳವಡಿಕೆ ಆಗಲಿದೆ.