`ಗ್ರೂಪ್‌ಟಾಕ್'ಮೂಲಕ ರೈತರ ಜಾಗೃತಿಗೆ ಕೃಷಿ ಇಲಾಖೆ ಒತ್ತು

ಎಐ ಚಿತ್ರ
ಎಐ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇ-ಆಡಳಿತದ ಸವಲತ್ತು ಬಳಕೆ|
  • ಸಾವಿರಾರು ಜನರಿಗೆ ಏಕಕಾಲಕ್ಕೆ ಮಾಹಿತಿ ತಿಳಿಸುವ ಅವಕಾಶ
  • ಇ-ಆಡಳಿತ
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ವಿವಿಧ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಇ-ಆಡಳಿತ `ಗ್ರೂಪ್ ಟಾಕ್' ಸವಲತ್ತನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಒದಗಿಸಿದೆ. ಈಗ್ಗೆ ಆರೇಳು ವರ್ಷಗಳಿಂದ ಜಾರಿಯಲ್ಲಿರುವ ಈ ಸೌಲಭ್ಯದ ಸದ್ಬಳಕೆಯಲ್ಲಿ ಕೃಷಿ ಇಲಾಖೆ ಮುಂದಿದೆ ಎನ್ನಲಾಗಿದೆ.
ಏಕಕಾಲಕ್ಕೆ ಸಾವಿರಾರು ಜನರೊಂದಿಗೆ ಮಾತನಾಡುವ ಈ ದೂರವಾಣಿ ಕರೆಯ ಅವಕಾಶದ ಮೂಲಕ ಕೋಟ್ಯಂತರ ರೈತರಿಗೆ ನಾನಾ ಮಾಹಿತಿ ತಲುಪಿಸಲು ಹಾಗೂ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಒತ್ತು ಕೊಟ್ಟಿದೆ.
ಪಿಎಂ ಕಿಸಾನ್ ಮತ್ತಿತರ ಸವಲತ್ತುಗಳಿಗೆ ಸಂಬAಽಸಿದAತೆ ಸೆಂಟ್ರಲ್ ಐಡಿಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇದ ರೊಂದಿಗೆ ರಸಗೊಬ್ಬರ ಖರೀದಿಗೆ ಪ್ರತ್ಯೇಕ ಆ್ಯಪ್‌ನ್ನು ಕೇಂದ್ರ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಚಿತ್ರದುರ್ಗ, ತುಮಕೂರು ಜಿಲ್ಲೆ ಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ.
ಮುಂಗಾರು ಹಂಗಾಮಿನ ಈ ಸಂದರ್ಭದಲ್ಲಿ ಚಿತ್ರದುರ್ಗ ಕೃಷಿ ಇಲಾಖೆಯಿಂದ ಏಕ ಕಾಲಕ್ಕೆ ಸಾವಿರಾರು ರೈತರಿಗೆ ಕರೆ ಮಾಡ ಲಾಗುತ್ತಿದೆ. ರಸಗೊಬ್ಬರ ಖರೀದಿ ಆ್ಯಪ್, ಪಿಎಂ-ಕಿಸಾನ್ ಯೋಜನೆಗೆ ನೋಂದಣಿ, ಬೆಳೆ ವಿಮೆ ಯೋಜನೆಗಳ ಸೌಲಭ್ಯ, ಇಲಾಖೆ ವಿವಿಧ ಸಬ್ಸಿಡಿಗಳು, ಬಿತ್ತನೆ ಬೀಜ, ರೈತರಿಗೆ ನೀಡುವ ಸರ್ಕಾರದ ಅನುದಾನ ಮತ್ತು ಯೋಜನೆಗಳ ಲಾಭ, ಪರಿಹಾರ, ಕೆವೈಸಿ ಇತ್ಯಾದಿ ಮಾಹಿತಿ ತಿಳಿಸಲಾಗುತ್ತಿದೆ.
`ಗ್ರೂಪ್‌ಟಾಕ್'ನಲ್ಲಿ ಮಾತನಾಡುವ ಅಽಕಾರಿಯೊಂದಿಗೆ ರೈತರು/ಸಾರ್ವಜನಿಕರು ಪ್ರಶ್ನೆಗಳನ್ನೂ ಕೇಳಬಹುದಾಗಿದೆ. ಒಮ್ಮೆ ಕರೆ ಮಾಡಿದರೆ ಎಲ್ಲರೂ ಕರೆ ಸ್ವೀಕರಿಸುತ್ತಾರೆ ಎಂದಲ್ಲ. ೩-೪ ಸಾವಿರ ಜನರಾದರೂ ಕರೆ ಸ್ವೀಕರಿಸಿ ಮಾಹಿತಿ ಪಡೆಯುತ್ತಿದ್ದಾರೆ. ಅಗತ್ಯ ಬಿದ್ದರೆ ತಮ್ಮ ಅನುಮಾನಗಳನ್ನು ಈ ವೇಳೆ ಬಗೆಹರಿಸಿಕೊಳ್ಳಬಹುದಾಗಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಕೃಷಿ ಇಲಾಖೆ ವಿವಿಧ ಸವಲತ್ತುಗಳಿಗೆ ಸಂಬAಽಸಿದAತೆ ಫ್ರೂಟ್ಸ್ ಐಡಿ(ಊZ್ಟಞಛ್ಟಿ ್ಕಛಿಜ ಜಿoಠ್ಟಿZಠಿಜಿಟ್ಞ Z್ಞb ಖ್ಞಿಜ್ಛಿಜಿಛಿb ಆಛ್ಞಿಛ್ಛಿಜ್ಚಿಜಿZ್ಟqs ಐ್ಞ್ಛಟ್ಟಞZಠಿಜಿಟ್ಞ ಖqsoಠಿಛಿಞ ಎಂಬ ವಿಶಿಷ್ಟ ಗುರುತಿನ ಸಂಖ್ಯೆ ಯನ್ನು ಕಡ್ಡಾಯಗೊಳಿಸಿದೆ. ಈಗ ಪಿಎಂ ಕಿಸಾನ್ ನೋಂದಣಿಗೆ ಸೆಂಟ್ರಲ್ ಐಡಿ ಕಡ್ಡಾಯವಾಗಿದೆ.
ಎಫ್-ಐಡಿಯಲ್ಲಿ ರೈತರ ಹೆಸರು, ಪಹಣಿ, ಆಧಾರ್‌ಕಾರ್ಡ್, ಬ್ಯಾಂಕ್ ಖಾತೆ,ದೂರವಾಣಿ ಸಂಖ್ಯೆ ಮೊದಲಾದ ಮಾಹಿತಿ ಇದ್ದು, ಇದಲ್ಲಿರುವ ದೂರವಾಣಿ ಸಂಖ್ಯೆಗೆ ಕರೆ ಹೋಗುತ್ತದೆ. ಕೃಷಿ ಇಲಾಖೆಯೊಂದಿಗೆ ಕಂದಾಯ, ಶಿಕ್ಷಣ, ಇಡಿಸಿಎಸ್(ಗ್ರಾಮ ಒನ್)ಮತ್ತಿತರ ಇಲಾಖೆಗಳಿಗೂ ಈ ಸೌಲಭ್ಯವನ್ನು ಇ-ಆಡಳಿತ ಒದಗಿಸುತ್ತಿದೆ. ಕಂದಾಯ ಇಲಾಖೆಯ ತಹಸೀಲ್ದಾರ್, ಎಸಿ, ಎಡಿ
ಎನ್.ಚಂದ್ರ
ಕುಮಾರ್
ಸಿ, ಡಿಸಿ ಮೊದಲಾದ ಅಽಕಾರಿಗಳು ಗ್ರೂಪ್ ಟಾಕ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬಹುದಾಗಿದೆ.
ಶಿಕ್ಷಣ ಇಲಾಖೆ ಡಿಡಿಪಿಐ, ಬಿಇಒ, ಸಿಆರ್‌ಪಿ, ಬಿಆರ್‌ಸಿ, ಮುಖ್ಯಶಿಕ್ಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡಲು ಅವಕಾಶವಿದೆ. ರಜೆ ದಿನಗಳನ್ನು ಹೊರತುಪಡಿಸಿ ನಿತ್ಯ ಬೆಳಗ್ಗೆ ೧೦ ರಿಂದ ಸಂಜೆ ೬ವರೆಗೆ ಇ-ಆಡಳಿತ ಈ ಸೇವೆ ಒದಗಿಸುತ್ತಿದೆ. ರಾಜ್ಯ ಸರ್ಕಾರದ ಉನ್ನತ ಅಽಕಾರಿಗಳ ವಿಡಿಯೊ ಕಾನರೆನ್ಸ್ ಇದ್ದಾಗ ಗ್ರೂಪ್‌ಟಾಕ್‌ಗೆ ಅವಕಾಶವಿರುವುದಿಲ್ಲ. ಆದರೆ ವಿವಿಧ ಇಲಾಖೆಗಳ ಕೋರಿಕೆ ಆಧರಿಸಿ ಇ-ಆಡಳಿತದಿಂದ ಮೊದಲೇ ಸಮಯವನ್ನು ನಿಗದಿ ಪಡಿಸಲಾಗುತ್ತದೆ.
"

ನಮ್ಮ ಜಿಲ್ಲೆಯಲ್ಲಿ ೩,೭೨,೨೦೫ ಹಾಗೂ ಹೊಳಲ್ಕೆರೆ ತಾಲೂಕಿನ ೫೭,೬೮೫ ರೈತರಿಗೆ ಎಫ್‌ಐಡಿ ಇದೆ. ಇ-ಆಡಳಿತದ ಸೌಲಭ್ಯ ಬಳಸಿಕೊಂಡು ಇಲಾಖೆ ಮಾಹಿತಿಯನ್ನು ರೈತರಿಗೆ ತಿಳಿಸಲಾಗುತ್ತಿದೆ. ವರ್ಷದಲ್ಲಿ ಕನಿಷ್ಠ ೩-೪ ಬಾರಿಯಾದರೂ ಗ್ರೂಪ್‌ಟಾಕ್ ಸೌಲಭ್ಯ ಬಳಕೆಯಾಗುತ್ತಿದೆ.

— ಎನ್. ಚಂದ್ರಕುಮಾರ್, ಸಹಾಯಕ ಕೃಷಿ ನಿರ್ದೇಶಕ, ಹೊಳಲ್ಕೆರೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net