ನಗರದ ಎಸ್‌ಜೆಎಂ ತಾಂತ್ರಿಕಚಿತ್ರದುರ್ಗ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟೀಯ ತಾಂತ್ರಿಕ ದಿನಾಚರಣೆಯನ್ನು ಪ್ರಾಚರ‍್ಯ ಡಾ.ಪಿ.ಬಿ.ಭರತ್ ಉದ್ಘಾಟಿಸಿದರು.
ಚಿತ್ರದುರ್ಗ: ದೇಶ ನಿರ್ಮಾಣದಲ್ಲಿ ಭಾರತೀಯ ವಿಜ್ಞಾನಿಗಳು,ಇಂಜಿನಿಯರ್‌ಗಳು ಮತ್ತು ನವೋದ್ಯಮಿಗಳ ಕೊಡುಗೆ ಅಪಾರವಾಗಿದೆ ಎಂದು ಎಸ್‌ಜೆಎಂಐಟಿ ಪ್ರಾಚರ‍್ಯ ಡಾ.ಪಿ.ಬಿ.ಭರತ್ ಹೇಳಿದರು.
ಸಮಗ್ರ ಬೆಳವಣಿಗೆಗೆ ಜವಾಬ್ದಾರಿಯುತ ನಾವೀನ್ಯತೆ ಎಂಬ ಧ್ಯೇಯ ವಾಕ್ಯದೊಂದಿಗೆ ನಗರದ ಎಸ್‌ಜೆಎಂ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟೀಯ ತಾಂತ್ರಿಕ ದಿನಾಚರಣೆ ಉದ್ಘಾ ಟಿಸಿ ಮಾತನಾಡಿದ ಅವರು,ದೇಶದ ಭವಿಷ್ಯ ನಿರ್ಮಾಣ ದಲ್ಲಿ ಹಾಗೂ ಸಮಾಜದ ಸಬಲೀಕರಣದಲ್ಲಿ ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸಿದೆ.
ಶಿಕ್ಷಣ,ಆರೋಗ್ಯ,ಕÊಷಿ, ಸಂವಹನ ಹಾಗೂ ಕೈಗಾರಿಕೆ ಸಹಿತ ನಾನಾ ಕ್ಷೇತ್ರಗಳ ಸರ್ವತೋಮುಖ ಪ್ರಗತಿಗೆ ನೆರವಾಗಿದೆ.
ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸಂಶೋಧನೆ, ನವೀನತೆ, ಉದ್ಯಮಶೀಲತೆ ಮತ್ತು ಕೌಶಲಾಭಿವÊದ್ಧಿಗೆ ಒತ್ತು ನೀಡಿ ಜಾಗತಿಕ ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕು.
ಸಮಾಜದ ಒಳಿತಿಗಾಗಿ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿ ತಾಂತ್ರಿಕವಾಗಿ ಶಕ್ತಿಶಾಲಿ ಭಾರತದ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಧ್ಯಾಪಕ ಪ್ರೊ.ಬಿ.ಇ. ರಮೇಶ್ ಮಾತನಾಡಿ, ವಿದ್ಯಾರ್ಥಿ ಗಳು ಆಧುನಿಕ ತಂತ್ರಜ್ಞಾನದೆಡೆಗೆ ಆಸಕ್ತಿ ಬೆಳಸಿಕೊಳ್ಳ ಬೇಕು. ಪ್ರಸ್ತುತ ತಂತ್ರಜ್ಞಾನಕ್ಕೆ ಅನುಗುಣವಾಗಿ ಕೌಶಲ ಹಾಗೂ ತರಬೇತಿ ಇದ್ದರೆ ಯಶಸ್ಸು ಸಾಧ್ಯವೆಂದರು.
ಡಾ.ಕೆ.ಆರ್.ಕÊಷ್ಣಾರೆಡ್ಡಿ,ಡಾ.ಕೆ.ಬಿ.ಸಿದ್ದೇಶ್,ಡಾ.ಟಿ.ವಿ.ಅರವಿAದ,ಡಾ.ಎಸ್.ಪಿ.ಶಿವಕುಮಾರ್,ಎಚ್.ಜೆ.ಡಾ.ಲೋಕೇಶ್,ಪ್ರೊ.ಎ. ಪಿ.ಶಶಿಧರ್,ಡಾ.ಎಸ್.ಸಿ.ಮಂಜುನಾಥ್,ಡಾ.ಎಸ್.ಚೇತನ್,ಡಾ.ಜಿ.ಎA.ಅವಿನಾಶ್ ಇದ್ದರು.
ಪ್ರಬಂಧ ಸ್ಪರ್ಧೆ ವಿಜೇತರು
ಕರ‍್ಯಕ್ರಮದ ಅಂಗವಾಗಿ ಆಯೋಜಿಸಿ ದ್ದ ಪ್ರಬಂಧ ಸ್ಪರ್ಧೆಯಲ್ಲಿ ಎಂ.ಅನನ್ಯ(ಪ್ರ),ರಿಯಾ ಅಮೀನಾ(ದ್ವಿ),ಎಸ್.ಗಾಯತ್ರಿ(ತÊ)ಹಾ ಗೂ ಭಾಷಣ ಸ್ಪರ್ಧೆಯಲ್ಲಿ ಡಿ.ಎಸ್.ಸಿದ್ದೇಶ್(ಪ್ರ),ರಾಘವೇಂದ್ರ(ದ್ವಿ),ಡಿ.ಎA.ಮಹಮ್ಮದ್‌ಅದೀಬ್(ತÊ)ಸ್ಥಾನ ಪಡೆದರು. ಪಿ.ವರ್ಷಾ ಪ್ರಾರ್ಥಿಸಿದರು. ಆರ್.ಎಸ್.ಅನುಷಾ ಸ್ವಾಗತಿಸಿ,ಶುಭಾ,ಚಿನ್ಮಯಿ ನಿರೂಪಿಸಿ ವಂದಿಸಿದರು.