ದುರ್ಗದ ಪೊಲೀಸ್ ಪಡೆಗೆ ಮೊಬೈಲ್ ಫೋರೆನ್ಸಿಕ್ ವ್ಯಾನ್ ಸೇರ್ಪಡೆ

 ಚಿತ್ರದುರ್ಗ ಪೊಲೀಸ್ ಪಡೆಗೆ ಹೊಸದಾಗಿ ಸೇರ್ಪಡೆ ಆಗಿರುವ ಮೊಬೈಲ್ ಫೋರೆನ್ಸಿಕ್ ವ್ಯಾನ್.
ಚಿತ್ರದುರ್ಗ ಪೊಲೀಸ್ ಪಡೆಗೆ ಹೊಸದಾಗಿ ಸೇರ್ಪಡೆ ಆಗಿರುವ ಮೊಬೈಲ್ ಫೋರೆನ್ಸಿಕ್ ವ್ಯಾನ್.
Published on

ಪ್ರಮುಖ ಮುಖ್ಯಾಂಶಗಳು

  • ತನಿಖಾ ಕಿಟ್‌
  • ಸಾಕ್ಷ್ಯ ಸಂಗ್ರಹ
  • ಸೋಕೋ ಅಽಕಾರಿ

ಚಿತ್ರದುರ್ಗ:

ಅಪರಾಧ ಕೃತ್ಯಗಳ ತ್ವರಿತ ತನಿಖೆ, ವಿಚಾರಣೆ ಹಾಗೂ ಕೋರ್ಟಿಗೆ ಶೀಘ್ರಗತಿಯಲ್ಲಿ ಜಾರ್ಜ್ಶೀಟ್ ಸಲ್ಲಿಕೆಗೆ ಪೂರಕ ವಾಗಿ ರಾಜ್ಯ ಸರ್ಕಾರ ಈಚೆಗೆ ಎಲ್ಲ ಜಿಲ್ಲೆಗಳಿಗೂ ಮೊಬೈಲ್ -ೆÇರೆನ್ಸಿಕ್ ವೆಹಿಕಲ್‌ಗಳನ್ನು ಮಂಜೂರು ಮಾಡಿದ್ದು, ಚಿತ್ರದುರ್ಗ ಜಿಲ್ಲಾ ಪೊಲೀಸ್ ಪಡೆಗೂ ಈ ವಾಹನ ಸೇರ್ಪಡೆ ಆಗಿದೆ.

ಕೊಲೆ, ಸುಲಿಗೆ, ದರೋಡೆ ಇತ್ಯಾದಿ ಅತ್ಯಂತ ಹೀನ ಅಪರಾಧ ಕೃತ್ಯಗಳು ಸೇರಿ ನಾನಾ ಪ್ರಕರಣಗಳು, ಅಪಘಾತ ಸ್ಥಳಕ್ಕೆ ಪೊಲೀಸ್ ಪಡೆಯಲ್ಲಿರುವ ಖ್ಚಛ್ಞಿಛಿ ಟ್ಛ ಇ್ಟಜಿಞಛಿ u್ಛ್ಛಜ್ಚಿಛ್ಟಿo(ಖuಇu) ತನಿಖಾ ಕಿಟ್‌ಗಳೊಂದಿಗೆ ಧಾವಿಸಿ ವೈಜ್ಞಾನಿಕವಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಬಳಿಕ ಅವುಗಳನ್ನು ದಾವಣಗೆರೆ, ಹುಬ್ಬಳ್ಳಿ ಅಥವಾ ಬೆಂಗಳೂರು ಮೊದಲಾದ ವಿಽ ವಿಜ್ಞಾನ ಪ್ರಯೋಗಾಲಯಗಳಿಗೆ ಕಳಿಸುತ್ತಿದ್ದಾರೆ.
ಅಪರಾಧ ಸ್ಥಳಕ್ಕೆ ತನಿಖಾ ಕಿಟ್‌ಗಳೊಂದಿಗೆ ಪೊಲೀಸ್ ವೆಹಿಕಲ್‌ನಲ್ಲಿ ಧಾವಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಿತ್ತು. ಆದರೆ, ಈಗ ಮಂಜೂರಾಗಿರುವ ಎಂಎಫ್‌ವಿನಲ್ಲಿ ಹಲವು ಬಗೆಯ ಸುಧಾರಿತ ಅಪರಾಧ ತನಿಖಾ ಕಿಟ್‌ಗಳು ಮತ್ತು ಅಪರಾಧ ಸ್ಥಳಗಳಲ್ಲಿ ವೈಜ್ಞಾನಿಕ ಪರಿಶೀಲನೆ ಹಾಗೂ ಸಾಕ್ಷ್ಯ ಸಂಗ್ರಹಣÉಗೆ ಅಗತ್ಯವಿರುವ ವಸ್ತುಗಳಿವೆ. ಇದರಿಂದ ಪ್ರಕರಣವನ್ನು ಮತ್ತಷ್ಟು ಶೀಘ್ರಗತಿಯಲ್ಲಿ ಭೇದಿಸಲು ಅನುಕೂಲವಾಗಲಿದೆ.
ಫೋರೆನ್ಸಿಕ್‌ವ್ಯಾನ್ ಮತ್ತು ಅದರಲ್ಲಿರುವ ಸುಧಾರಿತ ತನಿಖಾ ಕಿಟ್‌ಗಳ ಕುರಿತಂತೆ ಆಯಾ ಜಿಲ್ಲೆಗಳ ಸೋಕೋ ಅಽಕಾರಿಗಳಿಗೆ ಬೆಂಗಳೂರು ಮಡಿವಾಳದಲ್ಲಿರುವ ರಾಜ್ಯ ವಿಽ ವಿಜ್ಞಾನಗಳ ಪ್ರಯೋಗಾಲಯದಲ್ಲಿ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ಕೊಡಲಾಗಿದೆ. ಅಪರಾಧ ಸ್ಥಳದ ಪರಿಶೀಲನೆಯ ಸಮಯದಲ್ಲಿ ಕಿಟ್‌ಗಳ ಬಳಕೆ ಪರಿಣಾಮಕಾರಿಯಾಗಿರಬೇಕು ಎಂದು ನಿರ್ದೇಶಿಸಲಾಗಿದೆ.

ಅಪರಾಧ ಸ್ಥಳದ ರಕ್ಷಣೆ, ಸಾಮಾನ್ಯ ತನಿಖೆ, ಸಾಕ್ಷ÷್ಯಸಂಗ್ರಹ ಮತ್ತು ಪ್ಯಾಂಕಿಂಗ್, ಕಂಪ್ಲಿಟ್ ಫಿಂಗರ್‌ಪ್ರಿಂಟ್ಸ್, ಪಾದದ ಗುರುತು, ವಾಹನ ಗಳ ಟಯರ್ ಗುರುತು ಸಂಗ್ರಹ ಇತ್ಯಾದಿಗಳಿಗೆ ಸಂಬಂಽಸಿದಂತೆ ೧೦ ಬಗೆಯ ಪ್ರತ್ಯೇಕ ಕಿಟ್‌ಗಳನ್ನು ಪ್ರತಿವ್ಯಾನ್‌ಗೆ ಒದಗಿ ಸಲಾಗಿದೆ.

ಇವುಗಳೊಂದಿಗೆ ಲ್ಯಾಪ್‌ಟಾಪ್, ಪ್ರಿಂಟರ್, ವೆಹಿಕಲ್‌ಗೆ ಸಿಸಿಟಿವಿ ಕ್ಯಾಮರಾ, ಡಿಎಸ್‌ಎಲ್‌ಆರ್ ಕ್ಯಾಮರಾ, ಎಲ್‌ಇಡಿ ಪರದೆ, ಶರೀರದ ಮೇಲೆ ಧರಿಸುವ ಕ್ಯಾಮರಾ, ರಿಸರ್ಜ್ ಸ್ಟಿರಿಯೊ ಮೈಕ್ರೋಸ್ಕೋಪ್, ಪಬ್ಲಿಕ್‌ಅನೌನ್ಸ್ಮೆಂಟ್ ಸಿಸ್ಟಮ್ ಮೊದಲಾದ ಅಗತ್ಯ ಉಪಕರಣಗಳನ್ನೂ ಒದಗಿಸಲಾಗಿದೆ.
"

ಚಿತ್ರದುರ್ಗ ಜಿಲ್ಲಾ ಪೊಲೀಸ್ ಪಡೆಯಲ್ಲಿ ಪ್ರಸ್ತುತ ಐವರು ಅಽಕಾರಿಗಳಿರುವ ಸೋಕೋ ತಂಡವಿದೆ. ಈಗ ಹೊಸದಾಗಿ ಒದಗಿಸಿರುವ ಮೊಬೈಲ್ ಫೋರೆನ್ಸಿಕ್ ವ್ಯಾನ್‌ನಿಂದ ಸಾಕ್ಷ್ಯಾಧಾರಗಳನ್ನು ತ್ವರಿತಗತಿಯಲ್ಲಿ ಸಂಗ್ರಹಿಸಿ ಸುರಕ್ಷಿತವಾಗಿ ಪ್ರಯೋಗಾಲಯಗಳಿಗೆ ತಲುಪಿಸಲು ಇನ್ನಷ್ಟು ಅನುಕೂಲವಾಗಲಿದೆ.

— ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ, ಚಿತ್ರದುರ್ಗ.

ಪೊಲೀಸ್ ಇಲಾಖೆಗೆ ಹೊಸ

ಜೀಪ್‌

ತುರ್ತು ಸಂದರ್ಭ ಹಾಗೂ ತೊಂದರೆಯಲ್ಲಿರುವವರ ನೆರವಿಗಾಗಿ ಪೊಲೀಸ್ ಇಲಾಖÉಗೆ ತಮ್ಮ ಶಾಸಕರ ಅನುದಾನದಲ್ಲಿ ೧೪ ಲಕ್ಷ ರೂ.ಮೌಲ್ಯದ ಜೀಪ್‌ನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿರುವುದಾಗಿ ಎಂಎಲ್‌ಸಿ ಕೆ.ಎಸ್. ನವೀನ್ ಹೇಳಿದರು.

ಜಿಲ್ಲಾ ರಕ್ಷಣಾಽಕಾರಿ ಕಚೇರಿ ಆವರಣದಲ್ಲಿ ಸೋಮವಾರ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರಿಗೆ ವಾಹನದ ಕೀ ಹಸ್ತಾಂತರಿಸಿ ಮಾತನಾಡಿ, ಎಸ್‌ಪಿ ಅವರ ಕೋರಿಕೆಯಂತೆ ಅನುದಾನ ಮಂಜೂರು ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಎಸ್‌ಪಿ ಅವರು, ನವೀನ್ ಅವರನ್ನು ಹೊಸ ವಾಹನದಲ್ಲಿ ಕೂರಿಸಿಕೊಂಡು ಖುದ್ದು ಚಲಾಯಿಸಿದರು.
ಪರಶುರಾಮ್, ಧನಂಜಯ್, ಚೇತನ್, ಯಶವಂತ್, ಕಿರಣ್, ಓಬಳೇಶ್, ನಾಗರಾಜ್ ಬೇದ್ರೆ ಮತ್ತಿತರ ಬಿಜೆಪಿ ಪ್ರಮುಖರು, ಮಹೇಂದ್ರ ಕಂಪನಿಯ ಮಧು ಇದ್ದರು.

ಹೆಲ್ಮೆಟ್ ಧರಿಸಿ ವಾಹನ

ಚಲಾಯಿಸಿ

ಹೆಲ್ಮೆಟ್ ಧರಿಸಿ ಮೋಟಾರ್ ದ್ವಿಚಕ್ರ ವಾಹನ ಚಲಾಯಿಸುವಂತೆ ವಾಹನ ಸವಾರರ ಜಾಗೃತಿಗೆ ಮುಂದಾಗಿರುವ ಪೊಲೀಸರು ಆ.೧೫ ರ ನಂತರ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ದಂಡ ಖಚಿತ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.
ನಗರದ ಗಾಂಽ ವೃತ್ತದಲ್ಲಿ ಸೋಮವಾರ ಸಂಚಾರ ಠಾಣೆ ಪೊಲೀಸರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರನ್ನು ತಡೆದು, ಅವರಲ್ಲಿ ಹೆಲ್ಮೆಟ್ ಧರಿಸಿಕೊಂಡು ಮುಂದೆ ಹೋಗಲು ತಿಳಿಸುತ್ತಿದ್ದಾರೆ. ಹೊಸದನ್ನು ಖರೀದಿಸುವವರೆಗೆ ವಾಹನ ಬಿಡುವುದಿಲ್ಲ, ಇಲ್ಲವೇ ದಂಡ ಕಟ್ಟಿ ಎಂದು ಸೂಚಿಸುತ್ತಿದ್ದಾರೆ.

ಪಿಎಸ್‌ಐ ಬಸವರಾಜ್ ಮತ್ತಿತರ ಸಂಚಾರಿ ಠಾಣೆ ಅಽಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net