ಘನತಾಜ್ಯ ವೈಜ್ಞಾನಿಕ ವಿಲೇವಾರಿಗೆ ಎಡಿಸಿ ತಾಕೀತು

 ಚಿತ್ರದುರ್ಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಘನತಾಜ್ಯ ವಸ್ತುಗಳ ನಿರ್ವಹಣೆ ನಿಯಮ- ೨೦೨೬ರ ಅನುಷ್ಠಾನ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಕೆ.ಜಯಲಕ್ಷಿ÷್ಮÃ, ಎಚ್.ವಿ.ಪಲ್ಲವಿ, ಎಸ್.ಲಕ್ಷಿ÷್ಮÃ, ಡಾ.ನಾಗವೇಣಿ ಇತರರಿದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಘನತಾಜ್ಯ ವಸ್ತುಗಳ ನಿರ್ವಹಣೆ ನಿಯಮ- ೨೦೨೬ರ ಅನುಷ್ಠಾನ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಕೆ.ಜಯಲಕ್ಷಿ÷್ಮÃ, ಎಚ್.ವಿ.ಪಲ್ಲವಿ, ಎಸ್.ಲಕ್ಷಿ÷್ಮÃ, ಡಾ.ನಾಗವೇಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಸ ಎಸೆಯುವವರಿಗೆ ಬೀಳಲಿದೆ ದಂಡ
  • ಅಪರ ಜಿಲ್ಲಾಽಕಾರಿ ಕುಮಾರಸ್ವಾಮಿ ಎಚ್ಚರಿಕೆ
  • ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಸಿಸಿಟಿವಿ ಅಳವಡಿಕೆ
ಚಿತ್ರದುರ್ಗ: ನಗರಸಭೆ ಸೇರಿ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅಽಕಾರಿಗಳಿಗೆ ತಾಕೀತು ಮಾಡಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ, ಘನತಾಜ್ಯ ವಸ್ತುಗಳ ನಿರ್ವಹಣೆ ನಿಯಮ-೨೦೨೬ರ ಅನುಷ್ಠಾನ ಸಭೆಯಲ್ಲಿ ಮಾತನಾಡಿ, ಕಸ ಎ ಸೆಯುವ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ, ನಿಯಮ ಮೀರಿ ಕಸ ಹಾಕುವವರಿಂದ ದಂಡ ವಸೂಲಿ ಮಾಡ ಬೇಕು ಎಂದರು.
ಆರAಭದ ಹಂತದಲ್ಲೇ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ವ್ಯವಸ್ಥಿತವಾಗಿರಬೇಕು. ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪತ್ತಿ ಮಾಡುವ ಸಂ ಸ್ಥೆಗಳು ತಮ್ಮ ಆವರಣದಲ್ಲೇ ಕಸ ವಿಲೇವಾರಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶ ನೀಡುವುದರೊಂದಿಗೆ ಅವ ರಿಗೆ ನೆರವಾಗಬೇಕು ಎಂದು ತಿಳಿಸಿದರು.
ನಿಗದಿತ ಸಮಯದಲ್ಲಿ ಸ್ವಂತ ವ್ಯವಸ್ಥೆ ಮಾಡಿಕೊಳ್ಳದಿದ್ದರೆ ದಂಡದೊAದಿಗೆ ಇತರ ನಾಗರಿಕ ಸೌಲಭ್ಯಗಳನ್ನು ಕಡಿತಕ್ಕೆ ಕೋರ್ಟ್ ನಿರ್ದೇಶನಕ್ಕೆ ಕ್ರಮವಹಿಸಬೇಕು.
ಈ ಕುರಿತು ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಬೇಕು. ಮನೆ, ವಾಣಿಜ್ಯ ಮಳಿಗೆಗಳಿಂದ ಹಸಿ, ಒಣ ಕಸವೆಂದು ಮೂಲದಲ್ಲೇ ಪ್ರತ್ಯೇಕ ಸಂಗ್ರಹಿಸಬೇಕು. ಘನತ್ಯಾಜ್ಯ ಕಾಯ್ದೆ ಅನುಷ್ಠಾನದಲ್ಲಿ ಕರ್ತವ್ಯ ಲೋಪವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂ ದು ಅಽಕಾರಿಗಳನ್ನು ಎಡಿಸಿ ಎಚ್ಚರಿಸಿದರು.
ಕಸ ನಿರ್ವಹಣೆ ವರದಿಗಳನ್ನು ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸಲಿವೆ. ಸ್ಥಳೀಯ ಸಂಸ್ಥೆಗಳ ಮೂಲ ಕರ್ತವ್ಯ ಸ್ವಚ್ಛತೆ ಕಾಪಾಡುವುದಾಗಿದೆ. ವಾಹನ, ಸಿಬ್ಬಂದಿ ಕೊರತೆಯಿದ್ದರೆ, ಅನುದಾನಕ್ಕೆ ಕಾಯದೆ ಸ್ಥಳೀಯ ಸಂಸ್ಥೆಗಳ ಸ್ವಂತ ನಿಽ/೧೫ನೇ ಹಣ ಕಾಸು ಯೋಜನೆಯಡಿ ಅಗತ್ಯ ಸೌಕರ್ಯಗಳನ್ನು ಬಲಪಡಿಸಿಕೊಂಡು ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಲಭ್ಯವಿರುವ ಕಸ ಮರುಬಳಕೆ ಏಜೆನ್ಸಿಗಳು ಸ್ಥಳೀಯವಾಗಿ ಇಲ್ಲದಿದ್ದರೆ, ನೆರೆ ಜಿಲ್ಲೆಗಳ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ನಗರದ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
ಸಿಬ್ಬಂದಿ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಬೇಕು. ಘಟಕದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ,ದÊಶ್ಯಾವಳಿಗಳನ್ನು ಅಽಕಾರಿಗಳು ಗಮನಿಸಬೇಕೆಂದು ಎಡಿಸಿ ನಿರ್ದೇಶಿಸಿದರು.
ಲೆಗಸಿ ವೇಸ್ಟ್
ಚಿತ್ರದುರ್ಗ ಸೇರಿದಂತೆ ವಿವಿಧೆಡೆ ಸಂಗ್ರಹವಾಗಿರುವ ಲೆಗಸಿ ವೇಸ್ಟ್ ವಿಲೇವಾರಿಗೆ ಗುತ್ತಿಗೆ ನೀಡಲಾಗಿದೆ. ಆದರೆ ವಿಲೇವಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಎಡಿಸಿ ಅಸಮಾಧಾನ ವ್ಯಕ್ತಪಡಿಸಿದರು. ಸರಿಯಾಗಿ ಕಾರ್ಯನಿರ್ವಹಿಸದ ಏಜೆನ್ಸಿಗೆ ತಕ್ಷಣ ನೋಟಿಸ್ ಜಾರಿ ಮಾಡಬೇಕು ಎಂದರು.
ಜಿಪA ಯೋಜನಾ ನಿರ್ದೇಶಕಿ ಕೆ.ಜಯಲಕ್ಷಿ÷್ಮÃ, ಪರಿಸರ ಅಽಕಾರಿ ಎಚ್.ವಿ.ಪಲ್ಲವಿ, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ÷್ಮÃ, ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ.ನಾಗವೇಣಿ ಇತರ ಅಽಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net