ಕಾರ್ಮಿಕ ಸೆಸ್ ಬಾಕಿ ತಕ್ಷಣ ಜಮಾಕ್ಕೆ ಎಡಿಸಿ ತಾಕೀತು

ಚಿತ್ರದುರ್ಗದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಸುಂಕ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಅನಿಲ ಬಾಲಚಂದ್ರ ಬಗಟಿ, ಎಂ. ಬಾಬು, ರಾಜಣ್ಣ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಸುಂಕ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಅನಿಲ ಬಾಲಚಂದ್ರ ಬಗಟಿ, ಎಂ. ಬಾಬು, ರಾಜಣ್ಣ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್‌ಟಿಜಿಎಸ್ ಮೂಲಕ ನೇರ ಮಂಡಳಿಗೆ ಪಾವತಿಸಿ
  • ಜಿಲ್ಲೆಗೆ ೩ ಕಾರ್ಮಿಕ ವಸತಿ ಶಾಲೆಗಳ ಮಂಜೂರು
  • ೪ ಆರೋಗ್ಯ ತಪಾಸಣಾ ಘಟಕಗಳ ನಿಯೋಜನೆ
ಚಿತ್ರದುರ್ಗ: ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ ಆಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಿಂದ ಕಡಿತಗೊಳಿಸಿರುವ ಕಾರ್ಮಿಕ ಕಲ್ಯಾಣ ಸೆಸ್ ಬಾಕಿಯನ್ನು ತಕ್ಷಣವೇ ಕಾರ್ಮಿಕ ಕಲ್ಯಾಣ ಮಂಡಳಿಗೆ ಜಮಾ ಮಾಡುವಂತೆ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಸುಂಕ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸೆಸ್ ಸಂಗ್ರಹ ಹಾಗೂ ಜಮೆಗೆ ಸಂಬAಽಸಿದAತೆ ವಿವಿಧ ಇಲಾಖೆಗಳು ನಮೂನೆಯಲ್ಲಿ ಕೇಳಲಾಗುವ ಮಾಹಿತಿ ಒದಗಿಸಲು ತೊಂದರೆಯಾಗಬಾರದು.
ಇದಕ್ಕಾಗಿ ಇಲಾಖೆಗಳಿಗೆ ಪೂರಕÀ ಹಾಗೂ ಸರಳ ನಮೂನೆ ಸಿದ್ಧಪಡಿಸಿಕೊಡಬೇಕು. ಇದರಿಂದ ಅಽಕಾರಿಗಳಿಗೆ ಮಾಹಿತಿ ಸಲ್ಲಿಸುವುದು ಸುಲಭವಾಗುತ್ತದೆ ಎಂದು ಕಾರ್ಮಿಕ ಇಲಾಖೆ ಅಽಕಾರಿಗಳಿಗೆ ತಿಳಿಸಿದರು.
ಜಿಪಂ ಸೇರಿ ಎಲ್ಲ್ಲ ಇಲಾಖೆಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಬರುವ ಎ,ಬಿ,ಸಿ ವರ್ಗದ ಕಾಮಗಾರಿಗಳ ಸೆಸ್‌ನ್ನು ಕಡ್ಡಾಯ ವಾಗಿ ಜಮೆ ಮಾಡಬೇಕು. ಗ್ರಾಪಂಗಳು ಮತ್ತು ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಸೆಸ್ ಮೊತ್ತವನ್ನು ಈ ಹಿಂದಿದ್ದAತೆ ಚೆಕ್ ಮೂಲಕ ಜಮಾ ಮಾಡುವ ಬದಲು ಇನ್ನು ಮುಂದೆ ಆರ್‌ಟಿಜಿಎಸ್ ಮೂಲಕ ನೇರ ಕಾರ್ಮಿಕ ಕಲ್ಯಾಣ ಮಂಡಳಿ ಖಾತೆಗೆ ಜಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಜಿಲ್ಲೆಯ ಗ್ರಾಪಂ ವ್ಯಾಪ್ತಿಗಳಲ್ಲಿ ಖಾಸಗಿ ಹಾಗೂ ಉದ್ಯಮ ಸಂಸ್ಥೆಗಳಿAದ ದೊಡ್ಡ ಪ್ರಮಾಣದಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇದರ ಸಿವಿಲ್ ಕಾಮಗಾರಿ ಆರಂಭಿಸುವ ಮುನ್ನವೇ ಗ್ರಾಪಂನಿAದ ಪರವಾನಗಿ ಪಡೆಯುವ ಸಂದರ್ಭ ದಲ್ಲಿ ನಿಯಮಾನುಸಾರ ಶೇ.೧ ಕಾರ್ಮಿಕ ಕಲ್ಯಾಣ ಉಪಕರವನ್ನು ಕಡ್ಡಾಯವಾಗಿ ಕಡಿತಗೊಳಿಸಿ ಮಂಡಳಿಗೆ ಪಾವತಿಸಬೇಕು.
ಈ ಮೊತ್ತ ಕಾರ್ಮಿಕರ ಕಲ್ಯಾಣ ಯೋಜನೆಗಳು, ಅವರ ಮಕ್ಕಳ ಶೈಕ್ಷಣಿಕ ನೆರವಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಎಡಿಸಿ ಹೇಳಿದರು. ಕಾರ್ಮಿಕ ಅಽಕಾರಿ ಅನಿಲ ಬಾಲಚಂದ್ರ ಬಗಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಳೆದ ೨೦೦೭ರಿಂದ ಈವರೆಗೆ ಸಂಗ್ರಹಿಸಿರುವ ೧೪೭.೫೦ ಕೋಟಿ ರೂ. ಸೆಸ್‌ನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಜಮೆ ಮಾಡಲಾಗಿದೆ. ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳಿAದ ಬರಬೇಕಿರುವ ಸೆಸ್ ಬಾಕಿ ವಸೂಲಿಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ೩ ಕಾರ್ಮಿಕ ವಸತಿ ಶಾಲೆಗಳು ಮಂಜೂರಾಗಿವೆ. ಕಾರ್ಮಿಕರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದ್ದು, ಜಿಲ್ಲೆಗೆ ಒಟ್ಟು ೪ ಸಂಚಾರಿ ಆರೋಗ್ಯ ಘಟಕಗಳನ್ನು ನಿಯೋಜಿಸಲಾಗಿದೆ. ಈ ಘಟಕಗಳು ಜಿಲ್ಲೆಯ ವಿವಿಧೆಡೆ ಕಾರ್ಯನಿರ್ವಹಿಸಲಿವೆ.
ಮೊದಲ ಘಟಕ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕು, ೨ನೇ ಘಟಕ ಹೊಸದುರ್ಗ ಮತ್ತು ಹೊಳಲ್ಕೆರೆ, ೩ನೇ ಘಟಕ ಹಿರಿಯೂರು ತಾಲೂಕು ಹಾಗೂ ೪ನೇ ಘಟಕ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿ ಒಳಗೊಂಡಿರುತ್ತದೆ. ಈ ಸಂಚಾರಿ ಆರೋಗ್ಯ ಘಟಕಗಳಲ್ಲಿ ನುರಿತ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಇರಲಿದ್ದು, ಇವರು ನೇರವಾಗಿ ಕಟ್ಟಡ ನಿರ್ಮಾಣ ಸ್ಥಳಗಳು ಹಾಗೂ ಕಾರ್ಮಿಕರ ಲೇಔಟ್‌ಗಳಿಗೆ ತೆರಳಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧೋಪಚಾರ ಒದಗಿಸಲಿದ್ದಾರೆ.
ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಗಟಿ ಮಾಹಿತಿ ನೀಡಿದರು.
ಜಿಪಂ ಡಿಎಸ್ ಎಂ. ಬಾಬು, ಕಾರ್ಮಿಕ ನಿರೀಕ್ಷಕರಾದ ರಾಜಣ್ಣ, ಅಲ್ಲಾಭಕ್ಷಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ. ಸತೀಶ್‌ಕುಮಾರ್, ಫೀಲ್ಡ್ ಇನ್ಸ್ಪೆಕ್ಟರ್ ಮಾಳಪ್ಪ, ಕಟ್ಟಡ ಕಾರ್ಮಿಕ ಮತ್ತು ಕಲ್ಯಾಣ ಮಂಡಳಿಯ ಕಾ ರ್ಯನಿರ್ವಾಹಕ ಎಸ್.ವಿ. ಪ್ರಸಾದ್, ವಿಷಯ ನಿರ್ವಾಹಕ ರಾಜೀವ್ ಹಿರೇಮಠ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net