ಜಿಲ್ಲೆಯಲ್ಲಿ ಕೊಲೆ, ಕಳ್ಳತನ, ದರೋಡೆ ಮತ್ತಿತರ ಅಪರಾಧ ಪ್ರಕರಣಗಳು ೨೦೨೩-೨೦೨೫ರ ನಡುವಿನ ಮೂರು ವರ್ಷಗಳ ಅವಽಯಲ್ಲಿ ಕ್ರಮೇಣ ಕಡಿಮೆಯಾಗಿವೆ. ರಸ್ತೆ ಅಪಘಾತಗಳು, ಅವುಗಳಿಂದಾಗುತ್ತಿರುವ ಜೀವ ಹಾನಿ ಕೂಡ ಕಡಿಮೆ ಆಗುತ್ತಿವೆ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿವೆ. ಬಾಲ್ಯವಿವಾಹ, ಅಪ್ರಾಪ್ತ ಗರ್ಭಿಣಿಯರಿಂದಾಗಿ ಜಿಲ್ಲೆ ಯಲ್ಲಿ ೨೦೨೪ ರಲ್ಲಿ ದಾಖಲಾಗಿದ್ದ ೧೫೦ ಪೋಕ್ಸೋ ಪ್ರಕರಣಗಳ ಸಂಖ್ಯೆ ೨೦೨೫ರಲ್ಲಿ ೧೬೮ಕ್ಕೆ ಏರಿಕೆಯಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.