ಬೆಳೆಸುವ ಗುಣ ದುರ್ಗದ ಮಣ್ಣಿಗಿದೆ

ಚಿತ್ರದುರ್ಗದಲ್ಲಿ ಭಾನುವಾರ ಸಂಶೋಧಕ ಡಾ. ಲಕ್ಷ÷್ಮಣ ತೆಲಗಾವಿ ಅವರಿಗೆ ಚಿದಾನಂದ ಪ್ರಶಸ್ತಿಯನ್ನು ಡಾ.ಡಿ.ವಿ. ಪರಮಶಿವಮೂರ್ತಿ ಪ್ರದಾನ ಮಾಡಿದರು. ಡಾ.ಬಿ.ಎಲ್. ವೇಣು, ಕುಮಾರ್ ಬಡಪ್ಪ, ಡಾ.ಸಿ.ಯು. ಮಂಜುನಾಥ್, ಡಾ.ಎನ್.ಎಸ್. ಮಹಂತೇಶ, ವೈ. ಗುಣವತಿ ಮಹಾಂತೇಶ್ ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಸಂಶೋಧಕ ಡಾ. ಲಕ್ಷ÷್ಮಣ ತೆಲಗಾವಿ ಅವರಿಗೆ ಚಿದಾನಂದ ಪ್ರಶಸ್ತಿಯನ್ನು ಡಾ.ಡಿ.ವಿ. ಪರಮಶಿವಮೂರ್ತಿ ಪ್ರದಾನ ಮಾಡಿದರು. ಡಾ.ಬಿ.ಎಲ್. ವೇಣು, ಕುಮಾರ್ ಬಡಪ್ಪ, ಡಾ.ಸಿ.ಯು. ಮಂಜುನಾಥ್, ಡಾ.ಎನ್.ಎಸ್. ಮಹಂತೇಶ, ವೈ. ಗುಣವತಿ ಮಹಾಂತೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲಕ್ಷ÷್ಮಣ ತೆಲಗಾವಿಗೆ ಚಿದಾನಂದ ಪ್ರಶಸ್ತಿ ಸ್ವಾಗತಾರ್ಹ
  • ಕಾದಂಬರಿಕಾರ ಡಾ.ಬಿ.ಎಲï. ವೇಣು ಹೇಳಿಕೆ
  • ರೇಣುಕಾ ಪ್ರಕಾಶನ
ಚಿತ್ರದುರ್ಗ : ಎಲ್ಲರಿಂದಲೂ ಬರೆಸುವ ಶಕ್ತಿ, ಬೆಳೆಸುವ ಗುಣ ಚಿತ್ರದುರ್ಗದ ಮಣ್ಣಿಗಿದೆ ಎಂದು ಕಾದಂಬರಿಕಾರ ಡಾ.ಬಿ.ಎಲï. ವೇ ಣು ಹೇಳಿದರು.
ಇಲ್ಲಿನ ಐಎಂಎ ಹಾಲ್‌ನಲ್ಲಿ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ, ರೇಣುಕಾ ಪ್ರಕಾಶನ ಭಾನುವಾರ ಆಯೋಜಿಸಿದ್ದದಿಂದ ಸಂ ಶೋಧಕ ಡಾ. ಲಕ್ಷ÷್ಮಣ ತೆಲಗಾವಿ ಅವರಿಗೆ ಚಿದಾನಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಂಶೋಧನೆ, ಸಾಹಿತ್ಯ ಚಳವಳಿಯಲ್ಲಿ ತೊಡಗಿಸಿಕೊಂಡ ಮೇರು ಪರ್ವತ ಚಿದಾನಂದಮೂರ್ತಿ ಹೆಸರಿನಲ್ಲಿ ಪ್ರಶಸ್ತಿ ದೊರಕಿರು ವುದು ಡಾ. ಲಕ್ಷ÷್ಮ್ಮಣ ತೆಲಗಾವಿ ಅವರ ಪುಣ್ಯ. ಹುಲ್ಲೂರು ಶ್ರೀನಿವಾಸ ಜೋಯಿಸರ ಲೇಖನಗಳಿಗೆ ಮೆರಗು ತಂದ ಹೆಗ್ಗಳಿಕೆ ಅವರದ್ದಾಗಿದೆ.
ನಾನು ಐತಿಹಾಸಿಕ ಕಾದಂಬರಿಗಳನ್ನು ಬರೆದು ಖ್ಯಾತಿ ಗಳಿಸುವುದರ ಹಿಂದೆಯೂ ಅವರಿದ್ದಾರೆ. ಪ್ರಶಸ್ತಿಗಳು ಬರವಣಿಗೆಗೆ ಶಕ್ತಿ ತುಂಬಲಿವೆ ಎಂದು ಹೇಳಿದರು.
ಇತಿಹಾಸ ವಿದ್ವಾಂಸ ಡಾ. ಲಕ್ಷ÷್ಮಣ ತೆಲಗಾವಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಪಾದಾರ್ಪಣೆ ಮಾಡಿದ ಚಿದಾನಂದಮೂರ್ತಿ ಅವರಲ್ಲಿ ಗಟ್ಟಿತನವಿತ್ತು. ಕನ್ನಡ ಪ್ರೀತಿ ರಕ್ತಗತವಾಗಿತ್ತು. ಆದರೀಗ ಗಟ್ಟಿ ಸಂಶೋಧನೆಗಳು ನಡೆಯುತ್ತಿಲ್ಲ. ಕಾವ್ಯಗಳ ಮೂಲಕ ಹೊಸತನ್ನು ಸೃಷ್ಟಿಸುವ ಪ್ರಯತ್ನವಾಗಬೇಕಿದೆ ಎಂದು ಸಲಹೆ ನೀಡಿದರು.
ಕೊನೆ ಉಸಿರು ಇರುವ ತನಕ ಚಿತ್ರದುರ್ಗಕ್ಕಾಗಿ ಕೆಲಸ ಮಾಡುತ್ತೇನೆ. ಆಸಕ್ತರ ಮನೆ-ಮನೆಗೆ ಪುಸ್ತಕಗಳನ್ನು ತಲುಪಿಸುತ್ತೇನೆ. ಜನ ಓದಿ ಇತಿಹಾಸ ತಿಳಿದುಕೊಳ್ಳಬೇಕೆಂಬುದು ನನ್ನ ಆಸೆ. ಚಿದಾನಂದಮೂರ್ತಿ, ಹುಲ್ಲೂರು ಶ್ರೀನಿವಾಸ ಜೋಯಿಸರ ಕೊಡುಗೆ ಅಪಾರ. ಅವರು ಹಾಕಿದ ಅಡಿಗಲ್ಲಿನ ಮೇಲೆ ಭದ್ರ ಕೋಟೆ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.
ಅಸ್ತಿತ್ವಕ್ಕೆ ಅರ್ಥ, ವ್ಯಕ್ತಿತ್ವಕ್ಕೆ ಬೆಲೆ, ವಿಚಾರಕ್ಕೆ ಮಾನ್ಯತೆ ಈ ಮೂರು ಚಿದಾನಂದಮೂರ್ತಿ ಅವರಲ್ಲಿತ್ತು. ಕನ್ನಡ ವಿಶ್ವವಿದ್ಯಾಲಯ ಆರಂಭಕ್ಕೂ ಅವರು ಕಾರಣರು. ಅವರಲ್ಲಿದ್ದ ನಿರಂತರ ಅಧ್ಯಯನ ನಿಷ್ಠೆಯನ್ನು ನಾವು ಪಾಲಿಸೋಣ. ನನಗೆ ಸಿಕ್ಕಿರುವ ಈ ಗೌರ ವ ಚಿತ್ರದುರ್ಗದ ಜನತೆಗೆ ಅರ್ಪಿಸುತ್ತೇನೆ ಎಂದರು.
ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಸಂಶೋಧನಾ ಬರಹ ಹೇಗಿರಬೇಕೆಂದು ಮಾರ್ಗ ದರ್ಶನ ನೀಡಿದವರು ಚಿದಾನಂದಮೂರ್ತಿ. ಅವರು ನನಗೆ ಕೇವಲ ಗುರು ಮಾತ್ರವಲ್ಲ. ಬದುಕಿಗೆ ದಾರಿದೀಪವಾದವರು ಎಂದು ಹೇಳಿದರು.
ಸ್ಥಳೀಯ ಇತಿಹಾಸ ಗೌರವಿಸುವ ತೆಲಗಾವಿ ಅವರಲ್ಲಿ ಅಹಂ ಇಲ್ಲ. ವಿದ್ವತ್ತಿನ ಜೊತೆ ಸಂಯಮವಿದೆ. ಸಣ್ಣ ಆಕರವನ್ನು ಕೂಡ ನಿರ್ಲಕ್ಷಿಸಿದವರಲ್ಲ. ಹೀಗಾಗಿ ಈ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದರು.
ರಾಜಾವೀರ ಮದಕರಿನಾಯಕ ಟ್ರೇಡರ್ಸ್ನ ಮಾಲೀಕ ಕುಮಾರ್ ಬಡಪ್ಪ, ಇತಿಹಾಸ ಸಂಶೋಧಕ ಡಾ.ಎನ್.ಎಸ್. ಮಹಂತೇಶ, ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಡಾ.ಸಿ.ಯು. ಮಂಜುನಾಥ್, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ. ಗುಣವತಿ ಮಹಾಂತೇಶ್, ಜಾನಪದ ತಜ್ಞ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net