ರಸಗೊಬ್ಬರ ಖರೀದಿಗೂ ಆ್ಯಪ್

ರಸಗೊಬ್ಬರ
ರಸಗೊಬ್ಬರ
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ
  • ಅಽಕಾರಿಗಳಿಗೆ ತರಬೇತಿ
  • ಕ್ಯೂಆರ್ ಕೋಡ್
ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ರೈತರು ಇನ್ನು ಮನೆಯಿಂದಲೇ ಅಗತ್ಯ ರಸಗೊಬ್ಬರ ಖರೀದಿಸುವುದು ಸಾಧ್ಯವಾಗಲಿದೆ! ಹೌದು,ಇದಕ್ಕಾಗಿ ಕೇಂದ್ರ
ಸರ್ಕಾರ `ಫರ್ಟಿಲೈರ‍್ಸ್ ಸೇಲ್ಸ್ ಅಫ್ಲಿಕೇಷನ್ ಸಿಸ್ಟಮ್' ಜಾರಿಗೊಳಿಸಿದ್ದು,ಫರ್ಟಿಲೈಸರ್ ಬುಕ್ಕಿಂಗ್ ಆ್ಯಪ್
ಫಾರ್ ಫಾಮರ‍್ಸ್ ಆ್ಯಪ್ ಬಿಡುಗಡೆ ಮಾಡಲಿದೆ.
ಕೃಷಿ ಇಲಾಖೆ ಅಽಕಾರಿಗಳ ಪ್ರಕಾರ ಅಡುಗೆ ಅನಿಲ ಬುಕ್ಕಿಂಗ್ ಮಾದರಿಯಲ್ಲೇ ಗೊಬ್ಬರ ಖರೀದಿಸಬಹುದು. ಈ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ದೇಶದ ಎಲ್ಲ ರಾಜ್ಯಗಳ ಆಯ್ದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಮುಂಗಾರು ಹಂಗಾಮಿನಲ್ಲಿ ಜಾರಿ ಗೊಳಿಸಲಿದೆ.
ಇದಕ್ಕೆ ಸಂಬAಽಸಿದAತೆ ಅಽಕಾರಿಗಳಿಗೆ ತರಬೇತಿ ನೀಡಲಾಗಿದೆ. ನಮ್ಮ ರಾಜ್ಯದ ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಅನುಷ್ಠಾನವಾಗುತ್ತಿದೆ. ರೈತರು ಆಂಡ್ರಾಯ್ಡ್ ಫೋನ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ಆಧಾರ್ ಸಂಖ್ಯೆ ನಮೂದಿಸಿದರೆ ಎಫ್‌ಐಡಿ, ಹಿಡುವಳಿ ವಿಸ್ತೀರ್ಣ ಇತ್ಯಾದಿ ಮಾಹಿತಿ ಲಭ್ಯವಾಗಲಿದೆ.
ಮೊಬೈಲ್‌ಗೆ ಒಟಿಪಿ ಬಂದ ಬಳಿಕ ೨-೩ ದಿನಗಳ ಅವಽಯೊಳಗೆ ಗೊಬ್ಬರ ಖರೀದಿಸಲು ಸಮಯವಿರುತ್ತದೆ. ಮೊಬೈಲ್‌ಗೆ ಬುಕ್ಕಿಂಗ್ ನಂತರ ಬರುವ ಕ್ಯೂಆರ್ ಕೋಡ್ ಅನ್ನು ಗೊಬ್ಬರದ ಅಂಗಡಿ ಮಾಲೀಕ ಸ್ಕ್ಯಾನ್ ಮಾಡಿ ಗೊಬ್ಬರ ಕೊಡುತ್ತಾರೆ. ಒಂದು ವೇಳೆ ರೈತರಿಗೆ ಖುದ್ದಾಗಿ ಅಂಗಡಿಗೆ ಹೋಗಲು ಸಾಧ್ಯವಾಗದಿದ್ದರೆ ಆಥರೈಸೇಷನ್ ಕೊಡಬಹುದು.
ಬುಕ್ಕಿಂಗ್ ಮಾಡಿದ ರೈತನ ಪರ ಬರುವ ವ್ಯಕ್ತಿ ಒಟಿಪಿ, ಕ್ಯೂಆರ್ ಕೋಡ್ ಹಾಗೂ ತನ್ನ ಆಧಾರ್ ಕಾರ್ಡ್ನ್ನು ಅಂಗಡಿಗೆ ಕೊಂಡೊ ಯ್ಯಬೇಕಾಗುತ್ತದೆ. ಹಣವನ್ನು ಯುಪಿಐ ಮೂಲಕ ಪಾವತಿಸುವ ಅವಕಾಶವೂ ಇದೆ ಎನ್ನಲಾಗಿದೆ. ದೇವರ ಜಮೀನು, ಬಗರ್‌ಹುಕುಂ ಸಾಗುವಳಿದಾರರು ಮತ್ತಿತರ ರೈತರಿಗೂ ಆ್ಯಪ್ ಮೂಲಕ ಖರೀದಿಸಲು ಅನುಕೂಲವಿದೆ ಎನ್ನುತ್ತಾರೆ ಅಽಕಾರಿಗಳು.
ಅಂಗಡಿ ಮಾಲೀಕರಿಗೆ ಏನು ಪ್ರಯೋಜನ?
ಗೊಬ್ಬರದ ಬೇಡಿಕೆ ಎಷ್ಟು ಎಂಬುದು ಗೊತ್ತಾಗಲಿದ್ದು, ದಾಸ್ತಾನಿಗೆ ಅನುಕೂಲ ಪ್ರತಿ ವಹಿವಾಟು ಡಿಜಿಲೀಕರಣ ರೂಪದಲ್ಲಿದ್ದು, ಕಾ ಗದದ ದಾಖಲೆಗಳಿರುವುದಿಲ್ಲ.
ಪಾರದರ್ಶಕತೆ ಮತ್ತು ಮಾರಾಟದ ನಿಖರ ಲೆಕ್ಕ ಅರ್ಹ ರೈತರ ಮಾಹಿತಿ ಇರುವುದರಿಂದ ಅನಗತ್ಯ ವಿವಾದಗಳಿಗೆ ಬ್ರೇಕ್ ಸರ್ಕಾ ರಗಳಿಗೂ ಅನುಕೂಲ ಸರ್ಕಾರಗಳು ಅಗತ್ಯ ಸಮಯದಲ್ಲಿ ಗ್ರಾಮಮಟ್ಟದಿಂದ ರಾಷ್ಟçಮಟ್ಟದವರೆಗೆ ಗೊಬ್ಬರದ ಬೇಡಿಕೆ ತಿಳಿಯ ಬಹುದಾಗಿದೆ ಯೋಜಿತ ಬೇಡಿಕೆಯೊಂದಿಗೆ ದೇಶಾದ್ಯಂತ ಗೊಬ್ಬರ ಸ್ಥಿರ ಪೂರೈಕೆ ಸಾಧ್ಯವಾಗಲಿದ್ದು, ಉತ್ತಮ ಆಹಾರ ಭದ್ರತೆ ನೆರವಾಗಲಿದೆ.
ರೈತರಿಗೆ ಆಗುವ ಅನುಕೂಲ

* ಗೊಬ್ಬರ ಸಿಗುವುದೊ ಇಲ್ಲವೋ ಎಂಬ ಧಾವಂತದಿAದ
ಅAಗಡಿಗೆ ಹೋಗುವುದು ತಪ್ಪಲಿದೆ.
* ಬುಕ್ಕಿಂಗ್ ಮಾಡಿದಲ್ಲಿ ಗೊಬ್ಬರ ರಿಸರ್ವ್ ಇರುತ್ತದೆ.
* ಉದ್ದನೆ ಸರತಿ ಸಾಲಿನಲ್ಲಿ ನಿಲ್ಲುವುದು, ಸಮಯ ವ್ಯರ್ಥ,
ಅಂಗಡಿಯಿAದ ಅಂಗಡಿಗೆ ಅಲೆದಾಟ ತಪ್ಪಲಿದೆ.
* ಆ್ಯಪ್ ಮೂಲಕ ಸಮೀಪದ ಗೊಬ್ಬರದ ಅಂಗಡಿಯಲ್ಲಿ
ಖರೀದಿಸಬಹುದು, ಆಧಾರ್ ಆಧರಿತ ಕೋಟಾದ
ಗೊಬ್ಬರ ಅನ್ಯರ ಪಾಲಾಗುವುದಿಲ್ಲ

"

ಖರೀದಿಯಿಂದ ರೈತರಿಗೆ ಅನುಕೂಲವಾಗಲಿದೆ.ಕೈಗಾರಿಕೆ ಉದ್ದೇಶ ಸಹಿತ ಯೂರಿಯಾಮತ್ತಿತರ ಗೊಬ್ಬರಗಳ ದುರ್ಬಳಕೆಗೆ ಹಾಗೂಕಾಳಸಂತೆ ಮಾರಾಟಕ್ಕೆ ಈ ಪಾರದರ್ಶಕಹೊಸ ವ್ಯವಸ್ಥೆಯಿಂದ ಕಡಿವಾಣ ಬೀಳಲಿದೆ.

— | ಬಿ. ಮಂಜುನಾಥ್ ಜAಟಿ ನಿರ್ದೇಶಕ ಕೃಷಿ ಇಲಾಖೆ ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net