ಅನುದಾನ ಹಂಚಿಕೆ ಕುರಿತು ಶ್ವೇತಪತ್ರ ಹೊರಡಿಸಲಿ

ಸಂಸದ ಗೋವಿಂದ ಎಂ. ಕಾರಜೋಳ, ಎಂಎಲ್‌ಸಿ ಕೆ.ಎಸ್. ನವೀನ್, ಶಾಸಕ ಡಾ.ಎಂ. ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಹನುಮಂತೇಗೌಡ, ಎನ್.ಆರ್. ಲಕ್ಷ್ಮೀಕಾಂತ್, ಡಾ. ಸಿದ್ದಾರ್ಥ ಗುಂಡಾರ್ಪಿ, ಮಾಧುರಿ ಗಿರೀಶ್ ಉಪಸ್ಥಿತರಿದ್ದರು.
ಸಂಸದ ಗೋವಿಂದ ಎಂ. ಕಾರಜೋಳ, ಎಂಎಲ್‌ಸಿ ಕೆ.ಎಸ್. ನವೀನ್, ಶಾಸಕ ಡಾ.ಎಂ. ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಹನುಮಂತೇಗೌಡ, ಎನ್.ಆರ್. ಲಕ್ಷ್ಮೀಕಾಂತ್, ಡಾ. ಸಿದ್ದಾರ್ಥ ಗುಂಡಾರ್ಪಿ, ಮಾಧುರಿ ಗಿರೀಶ್ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ ಸಿದ್ದರಾಮಯ್ಯ
  • ಪ್ರತಿಪಕ್ಷ ನಾಯಕ ಆರ್. ಅಶೋಕ್ ಸವಾಲು
  • gst
ಚಿತ್ರದುರ್ಗ: ಕೇಂದ್ರದಿAದ ತೆರಿಗೆ ಪಾಲು, ಅನುದಾನ ಹಂಚಿಕೆ ಕುರಿತಂತೆ ಶ್ವೇತಪತ್ರ ಹೊರಡಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ೧೦ ವರ್ಷಗಳ ಆಡಳಿತಾವಽಯಲ್ಲಿ ಜಿಎಸ್‌ಟಿ ಸಹಿತ ತೆರಿಗೆ, ಸಾರಿಗೆ, ರೈಲ್ವೆ ಇತರ ಇಲಾಖೆಗಳಿಂದ ರಾಜ್ಯಕ್ಕೆ ಸಿಕ್ಕಿರುವ ಅನುದಾನ, ತೆರಿಗೆ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಮೋದಿ ಆಡಳಿತದಲ್ಲಿ ಹಂಚಿಕೆ ಕಡಿಮೆಯಾಗಿದೆ, ಅನ್ಯಾಯವಾಗಿದೆ ಎಂದಾದರೆ ನಾನು ಬಹಿರಂಗ ಕ್ಷಮೆ ಯಾಚಿಸುವೆ, ಇಲ್ಲದಿದ್ದರೆ ಸಿಎಂ ಕ್ಷಮೆ ಯಾಚಿಸಬೇಕು, ಎಂದು ಸವಾಲೆಸೆದರು.
ಸಾಧನೆ ಸಮಾವೇಶಕ್ಕೆ ವ್ಯಂಗ್ಯ:
ಜಿಎಸ್‌ಟಿ, ನೀತಿ ಆಯೋಗ ಹಾಗೂ ಪ್ರಧಾನಿ ಕರೆಯುವ ಸಭೆಗಳಿಗೆ ಹಾಜರಾಗದೇ ಕೇವಲ ಮಾತನಾಡುವುದರಿಂದ ಪ್ರಯೋಜನವಾಗದೆ, ಏನು ಸಾಽಸಿದ್ದೀರಿ ಎಂದು ಸಾಧನೆಗಳ ಸಮಾವೇಶ ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದರು.
ಸುದೀರ್ಘಾವಽ ಆಡಳಿತ ನಡೆಸಿದ, ೧೭ನೇ ಬಜೆಟ್ ಮಂಡಿಸಲು ಮುಂದಾಗಿರುವ ಸಿದ್ದರಾಮಯ್ಯ ನಿಜಕ್ಕೂ ಗ್ರೇಟ್, ಎಂದು ವ್ಯಂಗ್ಯವಾಡಿದ ಅಶೋಕ್, ಸ್ವಾತಂತ್ರ÷್ಯ ನಂತರದ ಎಲ್ಲ ಸಿಎಂಗಳಿಗಿAತ ಸಿದ್ದರಾಮಯ್ಯ ಅತಿ ಹೆಚ್ಚು ಸಾಲ (೩ ಲಕ್ಷ ಕೋಟಿ ರೂ.) ಮಾಡಿದ್ದಾರೆ. ನಿಜಕ್ಕೂ ಇವರ ಆಡಳಿತ ಉತ್ತಮವಾಗಿ ಇದ್ದಿದ್ದರೆ ವಿಜಯನಗರ ಸಾಮ್ರಾಜ್ಯದಂತೆ ರಾಜ್ಯ ಸಮೃದ್ಧವಾಗಿ ರಬೇಕಿತ್ತು, ಎಂದರು.
ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ:
ಹಣದ ಲಾಭಕ್ಕೆ ಮಣಿದು ಬೆಂಗಳೂರಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅವಕಾಶ ನೀಡಲಾಗಿದೆ. ಕಾಲ್ತುಳಿತ ತಪ್ಪನ್ನು ಬೇರೊಬ್ಬರ ಮೇಲೆ ಹಾಕಲು ನ್ಯಾಯಮೂರ್ತಿ ಡಿ' ಕುನ್ಹಾ ಕಮಿಟಿ ರಚಿಸಿದ್ದ ಈ ಸರ್ಕಾರ, ಪಂದ್ಯಾವಳಿ ಆರಂಭಕ್ಕೆ ಸಂಬAಽಸಿದAತೆ ಕುನ್ಹಾ ಅವರ ಸಲಹೆಗಳ ಅನುಷ್ಠಾನಕ್ಕೆ ಯಾಕೆ ಮುಂದಾಗಿಲ್ಲವೆAದು ಪ್ರಶ್ನಿಸಿದರು.
ಮರಳು ದಂಧೆ ಸರ್ಕಾರಕ್ಕೆ ಎಟಿಎಂ ಆಗಿದೆ. ರೈತರು, ಅಽಕಾರಿ, ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಶೇ.೮೦ ಕಮಿಷನ್ ಸರ್ಕಾರವಾಗಿದೆ. ಅಬಕಾರಿ ಇಲಾಖೆಯಲ್ಲಿ ೬ ಸಾವಿರ ಕೋಟಿ ರೂ. ಹಗರಣವಾಗಿದೆ. ಸಾವಿರ ದಿನಗಳ ಆಡಳಿತ ನಡೆಸಿರುವ ಸಿದ್ದು ಕೊರಳಿಗೆ ಸಾವಿರಾರು ಹಗರಣಗಳ ಸರಮಾಲೆ ಸುತ್ತಿಕೊಂಡಿದೆ. ಅವರೇ ಭ್ರಷ್ಟಾಚಾರದ ಮೂಲ ಪುರುಷ. ಕುರ್ಚಿ ಉಳಿಸಿಕೊಳ್ಳಲು ಮಂತ್ರಿಗಳು, ಮುಖ್ಯಮಂತ್ರಿ ಲೂಟಿ ಹೊಡೆಯುತ್ತಿದ್ದು, ಇದೊಂದು ಲೂಟಿ ಸರ್ಕಾರವಾಗಿದೆ. ಹೈ ಕಮಾಂ ಡ್‌ಗೆ ಕರ್ನಾಟಕದಿಂದ ಹಣ ಹೋಗುತ್ತಿದೆ ಎಂದು ಆರೋಪಿಸಿದರು.
ಯೋಜನೆಗಳ ವೈ-Àಲ್ಯ:
ಗೃಹಲಕ್ಷ್ಮಿಯ ೫ ಸಾವಿರ ಕೋಟಿ ರೂ. ಎಲ್ಲಿ? ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಕಡಿತಗೊಳಿಸಲಾಗುತ್ತಿದೆ. ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಹೊರಟಿದೆ. ಒಂದು ತಿಂಗಳ ಅನ್ನಭಾಗ್ಯದ ಹಣ ವಿತರಿಸಿಲ್ಲ. ಸರ್ಕಾರದ ಕುಮ್ಮಕ್ಕಿನಿಂದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಸಹಿತ ಅನೇಕ ಹಗರಣಗಳಾಗುತ್ತಿವೆ.
ಮುಡಾ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸಹಿತ ಕಳೆದ ಎರಡೂವರೆ ವರ್ಷಗಳಲ್ಲಿ ಆಗಿರುವ ನಾನಾ ಹಗರಣಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಬಿಜೆಪಿ, ಸಮಯ ನೋಡಿಕೊಂಡು ಹೋರಾಟ ತೀವ್ರಗೊಳಿಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಲವ್ ಜಿಹಾದ್, ಹಾಡಹಗಲೇ ಬ್ಯಾಂಕ್ ದರೋಡೆ ಸಹಿತ ಅಪರಾಧ ಪ್ರಕರಣಗಳ ಉದಾಹರಿಸಿದ ಅವರು, ಪೊಲೀಸರೇ ಕಳ್ಳರಾಗುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಸಿಎಂ, ಡಿಸಿಎಂ ಡಿ.ಕೆ. ಶಿವಕುಮಾರ್ ಜಗಳದಲ್ಲಿ ಸಿಎಂ ಯಾರೆಂಬುದೇ ಗೊತ್ತಾಗದೇ ಈ ಸರ್ಕಾರ ಸಾಧನೆ 'ಅಲಿಬಾಬಾ ೪೦ ಮಂದಿ ಕಳ್ಳರು' ಎಂತಾಗಿದೆ ಎಂದು ಹಾವೇರಿಯ ಸಾವಿರ ದಿನಗಳ ಸಾಧನೆ ಸಮಾವೇಶದ ವಿರುದ್ಧ ಹರಿಹಾಯ್ದರು.
ಸಂಸದ ಗೋವಿಂದ ಎಂ. ಕಾರಜೋಳ, ಎಂಎಲ್‌ಸಿ ಕೆ.ಎಸ್. ನವೀನ್, ಶಾಸಕ ಡಾ.ಎಂ. ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಹನುಮಂತೇಗೌಡ, ಎನ್.ಆರ್. ಲಕ್ಷ್ಮೀಕಾಂತ್, ಡಾ. ಸಿದ್ದಾರ್ಥ ಗುಂಡಾರ್ಪಿ, ಮಾಧುರಿ ಗಿರೀಶ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net