ಶತಮಾನೋತ್ಸವ ಸವಿನೆನಪಿಗೆ ಹೈಟೆಕ್ ಸಹಕಾರ ಭವನ

ಚಿತ್ರದುರ್ಗ ಟೌನ್ ಕೋ ಆಪರೇಟಿವ್ ಸೊಸೈಟಿಯಿಂದ ಶುಕ್ರವಾರ ಹೈಟೆಕ್ ಸಹಕಾರ ಭವನಕ್ಕೆ ಶುಕ್ರವಾರ ಭೂಮಿ ಪೂಜೆ ನೆರ ವೇರಿಸಲಾಯಿತು. ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ, ಉಪಾಧ್ಯಕ್ಷೆ ಎನ್.ಎಂ. ಪುಷ್ಪವಲ್ಲಿ, ನಿರ್ದೇಶಕರು ಇದ್ದರು.
ಚಿತ್ರದುರ್ಗ ಟೌನ್ ಕೋ ಆಪರೇಟಿವ್ ಸೊಸೈಟಿಯಿಂದ ಶುಕ್ರವಾರ ಹೈಟೆಕ್ ಸಹಕಾರ ಭವನಕ್ಕೆ ಶುಕ್ರವಾರ ಭೂಮಿ ಪೂಜೆ ನೆರ ವೇರಿಸಲಾಯಿತು. ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ, ಉಪಾಧ್ಯಕ್ಷೆ ಎನ್.ಎಂ. ಪುಷ್ಪವಲ್ಲಿ, ನಿರ್ದೇಶಕರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರದುರ್ಗ ಟೌನ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷರ ಹೇಳಿಕೆ
  • ಅಂದಾಜು ೩ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಕ್ಕೆ ಭೂಮಿ ಪೂಜೆ
  • ಶತಮಾನೋತ್ಸವ

ಚಿತ್ರದುರ್ಗ:

ಚಿತ್ರದುರ್ಗ ಟೌನ್ ಕೋಆಪರೇಟಿವ್ ಸೊಸೈಟಿಯ ಶತಮಾನೋತ್ಸವದ ನೆನಪಿಗಾಗಿ ನಗರದಲ್ಲಿ ಹೈಟೆಕ್ ಸಹಕಾರ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ಹೇಳಿದರು.

ಸೊಸೈಟಿ ಆವರಣದಲ್ಲಿ ಶುಕ್ರವಾರ ಹೈಟೆಕ್ ಸಹಕಾರ ಭವನಕ್ಕೆ ಶುಕ್ರವಾರ ಭೂಮಿ ಪೂಜೆ ನೆರ ವೇರಿಸಿ ಮಾತನಾಡಿ, ೧೯೧೨ ರಲ್ಲಿ ಪ್ರಾರಂಭವಾದ ಸೊಸೈಟಿ ನೂರು ವರ್ಷಗಳನ್ನು ಪೂರೈಸಿದೆ. ಇದರ ಸವಿನೆನಪಿಗಾಗಿ ೧೯೫/೩೩ ಚದರಡಿ ನಿವೇಶನದಲ್ಲಿ ಅಂದಾಜು ೩ ಕೋಟಿ ರೂ.ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ನಮ್ಮ ಸೊಸೈಟಿ ರಾಜ್ಯದಲ್ಲೇ ೨ನೇ ಹಳೆಯ ಸೊಸೈಟಿಯಾಗಿದೆ ಎಂದರು.
ಸಚಿವ ಟಿ.ರಘುಮೂರ್ತಿ, ಶಾಸಕ ಕೆ.ಸಿ.ವಿರೇಂದ್ರಪಪ್ಪಿ, ಬಿ.ಜಿ. ಗೋವಿಂದಪ್ಪ, ಡಿಸಿಸಿ ಬ್ಯಾಂಕ್ ಎಂಡಿ ಇಲಿಯಾಸ್ ಉಲ್ಲಾ ಷರೀ-ï ಅವರ ಸಹಕಾರದೊಂದಿಗೆ ಭವನ ನಿರ್ಮಿಸಲಾಗುತ್ತಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ೨ ಕೋಟಿ ರೂ.ಸಾಲವನ್ನೂ ಪಡೆಯಲಾಗಿದೆ ಎಂದರು.
ಸೊಸೈಟಿ ಉಪಾಧ್ಯಕ್ಷೆ ಎನ್.ಎಂ. ಪುಷ್ಪವಲ್ಲಿ, ನಿರ್ದೇಶಕರಾದ ಸಿ.ಎಚ್. ಸೂರ್ಯಪ್ರಕಾಶ್, ಬಿ.ವಿ. ಶ್ರೀನಿವಾಸಮೂರ್ತಿ, ಲಿಯಾ ಕತ್ ಆಲಿಖಾನ್, ಸಾಽಕ್‌ಬಾಷ, ಸುರೇಶ್‌ಕುಮಾರ್ ಬಾ-Á್ನ, ಜೆ.ಆರ್. ಹರೀಶ್, ಜೆ. ನಿಶಾನಿ ಧಶರಥ್, ಒ. ತಿಪ್ಪೇಸ್ವಾಮಿ, ಆರ್. ಚಂದ್ರಪ್ಪ, ಎ. ಚಂಪಕಾ, ಪಿ. ಷಬ್ಬೀರ್, ಕೆ. ದೊರೆಸ್ವಾಮಿ, ಸಿ.ಕೆ. ಸತ್ಯಮೂರ್ತಿ,ಆರ್ಥಿಕ ಸಲಹೆಗಾರ ಮೊಹಮ್ಮದ್ ನಯೀಮ್, ಪ್ರಭಾರ ಕಾರ್ಯದರ್ಶಿ ಮಂಜುನಾಥ್‌ಗೌಡ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net