ಚಿತ್ರದುರ್ಗದಲ್ಲಿ ಭಾನುವಾರ ಡಾ. ಚಾಂದಿನಿ ಖಲೀದ್ ಅವರ ಒಂದು ಬೊಗಸೆ ಪ್ರೀತಿ ಕವನ ಸಂಕಲನವನ್ನು ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಬಿಡುಗಡೆಗೊಳಿಸಿದರು. ಡಾ.ಬಿ. ರಾಜಶೇಖರಪ್ಪ, ಬಿ.ಕೆ. ರಹಮತ್‌ವುಲ್ಲಾ, ಶಾರದಾ ಜೈರಾಮï, ನಟರಾಜ್, ಸುನಿತಾ ಮಲ್ಲಿಕಾರ್ಜುನ್ ಇತರರಿದ್ದರು.
ಚಿತ್ರದುರ್ಗ : ಆರೋಗ್ಯಕರ ಕೃತಿಯನ್ನು ಸಮಾಜಕ್ಕೆ ಕೊಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕವಿ, ಸಾಹಿತಿಗಳದ್ದಾಗಿದೆ ಎಂದು ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಅಭಿಪ್ರಾಯಪಟ್ಟರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಅವನಿ ಕಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ, ಸುರಭಿ ಮೆಲೋಡಿಸ್‌ನಿಂದ ಪತ್ರಿಕಾ ಭವ ನದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಚಾಂದಿನಿ ಖಲೀದ್ ಅವರ ಒಂದು ಬೊಗಸೆ ಪ್ರೀತಿ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತಿ, ಕವಿಗಳಾದವರು ಅನ್ಯ ಭಾಷೆಗಳ ಬರಹಗಳನ್ನೂ ಓದಬೇಕು. ಆಗ ಮಾತ್ರ ಆಲೋಚನಾ ಲಹರಿ ಬದಲಾಗಲಿದೆ. ಕನ್ನಡದ ಈ ಕವನಗಳಲ್ಲಿ ಲೇಖಕಿಯ ಪ್ರಬುದ್ಧತೆ ಎದ್ದು ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಕೀಲ ಬಿ.ಕೆ. ರಹಮತ್‌ವು¯್ಲÁ ಮಾತನಾಡಿ, ರಾಜ ಮಹರಾಜರ ಕಾಲದಿಂದಲೂ ಪ್ರೀತಿಗಾಗಿ ಯುದ್ಧಗಳಾಗಿವೆ. ಅದನ್ನು ವಿಭಿ ನ್ನವಾಗಿ ಪರಿಚಯಿಸುವ ಕೆಲಸ ಕವಯತ್ರಿ ಮಾಡಿದ್ದಾರೆ. ಕನ್ನಡದ ಕುರಿತು ಅಭಿಮಾನವಿರುವ ಕಾರಣ ಕೃತಿಗಳು ಹೊರ ಬರುತ್ತಿವೆ ಎಂದರು.
ಪ್ರೀತಿ ಎಂಬುದು ಕೇವಲ ಗಂಡು-ಹೆಣ್ಣಿಗೆ ಸೀಮಿತವಲ್ಲ. ಅಪ್ಪ, ಅಮ್ಮ, ಸಹೋದರ, ಸಹೋದರಿ, ಗೆಳೆಯ, ಗೆಳತಿ ನಡುವಿನ ಪ್ರೀತಿಗೂ ಪ್ರಾಮುಖ್ಯತೆ ಇದೆ. ಆ ಅರ್ಥದಲ್ಲಿ ಬೊಗಸೆಯಷ್ಟು ಪ್ರೀತಿ ಸಂಕಲನ ಹೊರತಂದಿದ್ದಾರೆ ಎಂದು ತಿಳಿಸಿದರು.
ಚಿಂತಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಸಾಹಿತ್ಯ, ಕಲೆಯಲ್ಲಿ ತೊಡಗಿಕೊಂಡವರು ಮಾನವೀಯ ನೆಲೆಯಲ್ಲಿ ಸಾಗಿ ದಾಗ ಶಾಂತಿ ನೆಲೆಸುತ್ತದೆ. ಆದರೆ, ಯುದ್ಧ, ದ್ವೇಷ ಅಶಾಂತಿ ಉಂಟು ಮಾಡಲಿವೆ. ಅಮಾನವೀಯ ಕೃತ್ಯಕ್ಕೂ ಕಾರಣವಾಗ ಲಿವೆ ಎಂದು ಬೇಸರಿಸಿದರು.
ವೃತ್ತಿ, ಪ್ರವೃತ್ತಿಗಳಲ್ಲಿ ವಹಿಸುವ ಪಾತ್ರ ವಿವೇಕದಿಂದ ಕೂಡಿರಬೇಕು. ಆಸ್ತಿ ಕ್ರೂಢೀಕರಣ ಇಂಗದ ದಾಹವಾಗಿ ಪರಿಣಮಿಸಿದೆ. ಆದರೆ,ದಾರ್ಶನಿಕತೆ, ಮಾನವೀಯ ಕಾಳಜಿಗೆ ಅದನ್ನು ಇಂಗಿಸುವ ಶಕ್ತಿಯಿದೆ ಎಂದು ಹೇಳಿದರು.
ಕೃತಿ ಮನಸ್ಸನ್ನು ಆಕರ್ಷಿಸುವಂತಿರಬೇಕು. ಕಥೆ, ಕವನ, ಕಾದಂಬರಿ ಬರೆಯುವುದೆಂದರೆ e್ಞÁನದ ಅಡುಗೆಯನ್ನು ಓದುಗರಿಗೆ ಬಡಿಸಿದಂತೆ. ಆ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲಿದಂತೆ ಎಂದರು.
ಡಯಟ್ ಉಪನ್ಯಾಸಕ ಸಂತೆಬೆನ್ನೂರಿನ ನಟರಾಜ್ ಮಾತನಾಡಿ, ಸಾಹಿತ್ಯದ ಅಮಲಿನಲ್ಲಿ ನೂರಾರು ಪ್ರಕಾರಗಳು ಸೃಜನಾ ತ್ಮಕವಾಗಿ ವೃದ್ಧಿಸುತ್ತವೆ. ಈ ಸಂಕಲನ ಓದುಗನ ಎದೆಯ ಅಂಗಳದಲ್ಲಿ ಹೂವಾಗಿ ಅರಳಲಿ ಎಂದು ಆಶಿಸಿದರು.
ಕವಿ ಜಬಿವು¯್ಲÁ ಎಂ. ಅಸದ್ ಅವರಿಗೆ ಬೆಳದಿಂಗಳು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವೇದಿಕೆ ಅಧ್ಯಕ್ಷೆ ಶಾರದಾ ಜೈರಾಮï, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಡಾ. ಚಾಂದಿನಿ ಖಲೀದ್ ಇತರರಿದ್ದರು.