ಬುದ್ಧ, ಬಸವ, ಅಕ್ಕಮಹಾದೇವಿ, ಡಾ.ಬಿ.ಆರ್.ಅಂಬೇಡ್ಕರ್, ಅಬ್ದುಲ್‌ಕಲಾಂ, ಅಟಲ್ ಬಿಹಾರಿವಾಜಪೇಯಿ ಮತ್ತಿತರ ದಾರ್ಶ ನಿಕರ ಬದುಕು ಎಲ್ಲರಿಗೂ ಆದರ್ಶವಾಗಬೇಕು. ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿದರೆ ಸಾಲದು, ಜೀವನದಲ್ಲಿ ಸಂಸ್ಕಾರ ಕಲಿ ಯಬೇಕು. ಗುರು, ಹಿರಿಯರು, ಪಾಲಕರನ್ನು ಗೌರವಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಆತ್ಮವಿಶ್ವಾಸ ಸಾಧನೆಗೆ ಸಹಕಾರಿ ಎಂದರು.