ಜನರ ಆಶೋತ್ತರಗಳಿಗೆ ಪೂರಕ ಬಜೆಟ್

 ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಽಗಳು ಹಾಗೂ ಅಽಕಾರಿಗಳೊಂದಿಗೆ ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಡಿ.ಆರ್. ಪಾಟೀಲ್ ಉದ್ಘಾಟಿಸಿದರು. ಟಿ. ವೆಂಕಟೇಶ್, ಡಾ. ಆಕಾಶ್, ಡಿ.ಎನ್. ಮೈಲಾರಪ್ಪ ಇತರರಿದ್ದರು.
ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಽಗಳು ಹಾಗೂ ಅಽಕಾರಿಗಳೊಂದಿಗೆ ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಡಿ.ಆರ್. ಪಾಟೀಲ್ ಉದ್ಘಾಟಿಸಿದರು. ಟಿ. ವೆಂಕಟೇಶ್, ಡಾ. ಆಕಾಶ್, ಡಿ.ಎನ್. ಮೈಲಾರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿ.ಆರ್. ಪಾಟೀಲï ವಿಶ್ವಾಸ
  • ಸ್ಥಳೀಯ ಸಂಸ್ಥೆಗಳ ಜನಪ್ರತಿನಿಽಗಳು, ಅಽಕಾರಿಗಳೊಂದಿಗೆ ಸಂವಾದ
  • ಜನರ ಅಗತ್ಯಗಳಿಗೆ ತಕ್ಕಂತೆ ಆಡಳಿತ ನಡೆಸುವ ಉದ್ದೇಶ
ಚಿತ್ರದುರ್ಗ: ಜನರ ಆಶೋತ್ತರಗಳಿಗೆ ಪೂರಕವಾಗಿ ಈ ಬಾರಿಯ ರಾಜ್ಯ ಬಜೆಟ್ ರೂಪಿತವಾಗಿದೆ ಎಂದು ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲï ಹೇಳಿದರು.
ತಳಮಟ್ಟದಿಂದ ಯೋಜನೆ ರೂಪಿಸುವ ಕುರಿತು ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ, ತಾಲೂಕು, ಜಿ¯್ಲೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಽಗಳು ಹಾಗೂ ಅಽಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈವರೆಗೂ ಯೋಜನೆಗಳು ಬೆಂಗಳೂರು ಅಥವಾ ದೆಹಲಿ ಮಟ್ಟದಲ್ಲಿ ಸಿದ್ಧವಾಗುತ್ತಿದ್ದವು. ತಳಮಟ್ಟದಿಂದಲೇ ರೂಪಿಸಬೇಕೆಂಬ ಆಶಯ ಸಿಎಂ ಸಿದ್ದರಾಮಯ್ಯ ಅವರದ್ದಾಗಿದೆ. ಶಾಸಕರು ಮಾತ್ರ ಬಜೆಟ್ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಬದಲಾವಣೆ ತರುವ ಮೂಲಕ ಜನರ ಅಗತ್ಯಗಳಿಗೆ ತಕ್ಕಂತೆ ಆಡಳಿತ ನಡೆಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದರು.
ಮಹತ್ಮಾ ಗಾಂಽÃಜಿ ಅವರ `ಗ್ರಾಮ ಸ್ವರಾಜ್ಯ'ದ ಕನಸು ನನಸು ಮಾಡಲು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಂವಿಧಾನ ಬದ್ಧವಾಗಿ ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಅಽಕಾರ ವಿಕೇಂದ್ರೀಕರಣದ ಮೂಲ ಉದ್ದೇಶ ಈಡೇರಿಸಲು ನಾವೆಲ್ಲರೂ ಬದ್ಧರಾಗಬೇಕಿದೆ. ಪಂಚಾಯತ್ ರಾಜ್ ಕೇವಲ ಆಡಳಿತಾತ್ಮಕ ವ್ಯವಸ್ಥೆಯಾಗದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಯಾಗಬೇಕೆಂದು ಸಲಹೆ ನೀಡಿದರು.
ಜ.೨೬ರ ಗಣರಾಜ್ಯೋತ್ಸವದೊಳಗೆ ಗ್ರಾಮಸಭೆ, ವಾರ್ಡ್ಸಭೆಗಳ ಜವಾಬ್ದಾರಿ ಹಾಗೂ ಅಽಕಾರಗಳ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ಪ್ರತಿ ಮನೆಗೆ ತಲುಪಿಸಬೇಕು. ಜನರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸಿದರೆ ಮಾತ್ರ ಸ-Àಲತೆ ಕಾಣಲು ಸಾಧ್ಯ. ಈ ವಿಷಯದಲ್ಲಿ ಚಿತ್ರದುರ್ಗ ಜಿ¯್ಲÉ ರಾಜ್ಯಕ್ಕೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾಽಕಾರಿ ಟಿ. ವೆಂಕಟೇಶ್ ಮಾತನಾಡಿ, ಬರಗಾಲದಿಂದ ನರಳುತ್ತಿರುವ ಜಿ¯್ಲÉಯ ಸಮಗ್ರ ಬದಲಾವಣೆಗೆ ಜಿ¯್ಲÁಡಳಿದಿಂದ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಮುಂದಿನ ೩-೪ ತಿಂಗಳಲ್ಲಿ ಜಿ¯್ಲÉಗೆ ನೀರು ಬರುವ ನಿರೀಕ್ಷೆಯಿದೆ. ಇದರಿಂದ ಕೃಷಿ ವಲಯದಲ್ಲಿ ಹೊಸ ಕ್ರಾಂತಿ ಉಂಟಾಗಲಿದೆ ಎಂದು ತಿಳಿಸಿದರು.
ಮ್ಯಾಂಗನೀಸ್, ಕಬ್ಬಿಣದ ಅದಿರು ಹಾಗೂ ಸುಣ್ಣದ ಕಲ್ಲಿನ ಗಣಿಗಾರಿಕೆಯಿಂದ ಬರುವ ರಾಯಧನವನ್ನು ಜಿ¯್ಲÉಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು. ೩೭೫ ಹೊಸ ಗ್ರಾಮಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ತಳಮಟ್ಟದ ಅಗತ್ಯತೆಗಳನ್ನು ಆಧರಿಸಿ ಸಿದ್ಧಪಡಿಸಲಾದ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಸಂಬAಽತ ಯೋಜನೆ: ರೈತರ ಬೇಡಿಕೆಗಳಿಗೆ ಅನುಗುಣವಾಗಿ ಗ್ರಾಪಂ ಮಟ್ಟದಲ್ಲಿ ಕೃಷಿ ಅಽಕಾರಿಗಳು ಮತ್ತು ತಾಲೂಕು ಅಽಕಾರಿಗಳೊಂದಿಗೆ ಕೃಷಿಗೆ ಸಂಬAಽಸಿದ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಸಭೆಯಲ್ಲಿ ಹೇಳಿದರು.
ಜಿ¯್ಲÉಯ ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ಅಲ್ಪಸಂಖ್ಯಾತರು ವಾಸಿಸುವ ಕಾಲನಿಗಳ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಜಿ¯್ಲÁ ಅಲ್ಪಸಂಖ್ಯಾತರ ಕಲ್ಯಾಣಾಽಕಾರಿ ಜಿ. ರೇಖಾ ತಿಳಿಸಿದರು.
ಇದರೊಟ್ಟಿಗೆ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಸತಿನಿಲಯ, ಮುಂದಿನ ವರ್ಷಕ್ಕೆ ಅಗತ್ಯವಿರುವ ವಿದ್ಯಾರ್ಥಿ ವೇತನದ ಅನುದಾನ ನೀಡುವಂತೆ ಯೋಜನೆಯಲ್ಲಿ ಕೋರಲಾಗಿದೆ ಎಂದರು. ಗ್ರಾಪAಗಳಿAದ ವಸೂಲಿ ಮಾಡುವ ತೆರಿಗೆ ಪಾಲಿನಲ್ಲಿ ಶೇ. ೨೪ ರಷ್ಟನ್ನು ಗ್ರಂಥಾಲಯ, ಆರೋಗ್ಯ ಮುಂತಾದ ಸೆಸ್‌ಗಳ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಬೇಕಿದೆ.
ಇದರೊಂದಿಗೆ ಶೇ. ೨೫ರಷ್ಟು ಎಸ್ಸಿ, ಎಸ್ಟಿ ನಿಽಯನ್ನು ಕೇವಲ ವೈಯಕ್ತಿಕ -Àಲಾನುಭವಿ ಆಧಾರಿತ ಸೌಲಭ್ಯಗಳಿಗೆ ಬಳಸಬೇಕಿದೆ. ಆ ಕಾಲನಿಗಳ ರಸ್ತೆ ಅಥವಾ ಮೂಲಸೌಕರ್ಯಗಳಿಗೆ ಬಳಸಲು ಅವಕಾಶ ಇಲ್ಲದಿರುವುದು ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಮೆದೇಹಳ್ಳಿ ಗ್ರಾಪಂ ಪಿಡಿಒ ಪಾತಣ್ಣ ಹೇಳಿದರು.
ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಮುಖ್ಯ ಯೋಜನಾಽಕಾರಿ ಸಿ.ಎಸ್. ಗಾಯತ್ರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಜಿ¯್ಲÁಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಇತರರಿದ್ದರು.
* ಜಿಲ್ಲೆಯ ಅಭಿವೃದ್ಧಿಗೆ ೬,೦೮೫ ಕೋಟಿ ರೂ.
ಜಿ¯್ಲÉಯ ಸಮಗ್ರ ಅಭಿವೃದ್ಧಿಗೆ ಜಿಪಂ ೨೦೨೬-೨೭ನೇ ಸಾಲಿನಲ್ಲಿ ಒಟ್ಟು ೬,೦೮೫ ಕೋಟಿ ರೂ. ಬೃಹತ್ ಅನುದಾನದ ಬೇಡಿಕೆ ಸಿದ್ಧಪಡಿಸಲಾಗಿದೆ. ಈ ಅಂತಿಮ ವರದಿಯನ್ನು -É.೧೨ ರಂದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಿಇಒ ಡಾ. ಆಕಾಶ್ ತಿಳಿಸಿದರು.
ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನಸಂಖ್ಯೆ ಆಧಾರಿತ ಎಸ್ಸಿಇಪಿ (೨,೫೬೭ ಕೋಟಿ ರೂ.) ಮತ್ತು ಟಿಎಸ್‌ಪಿ (೧,೧೦೨ ಕೋಟಿ ರೂ.)ಯೋಜನೆಗಳ ಪಾಲು ಶೇ. ೫೦ಕ್ಕಿಂತ ಹೆಚ್ಚಿದೆ. ಶಿಕ್ಷಣ ಕ್ಷೇತ್ರಕ್ಕೆ ಸಿಂಹಪಾಲು ಅನುದಾನ ಮೀಸಲಿಡಲಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ ೫೫೦ ಕೋಟಿ ರೂ. ಅನುದಾನ ಬಿಡುಗಡೆಗೆ ಬೇಡಿಕೆ ಇಡಲಾಗಿದೆ. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಿದ್ಧಪಡಿಸಿದ ಈ ವರದಿ ಜಿ¯್ಲÉಯ ಆರ್ಥಿಕ ಮತ್ತು ಭೌತಿಕ ಪ್ರಗತಿಗೆ ವೇಗ ನೀಡುವ ನಿರೀಕ್ಷೆಯಿದೆ ಎಂದರು.
ನಿರ್ಣಯ ಬದಲಿಸುವ ಶಕ್ತಿ ಪಿಎಂಗೂ ಇಲ್ಲ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಸಭೆಗಳೇ ಅತ್ಯಂತ ಪ್ರಬಲವಾಗಿದ್ದು, ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಬದಲಿಸುವ ಅಽಕಾರ ಸಿಎಂಗಾಗಲೀ, ಪಿಎಂಗಾಗಲಿ ಇಲ್ಲವೆಂದು ಡಿ.ಆರ್. ಪಾಟೀಲ್ ಪ್ರತಿಪಾದಿಸಿದರು.
ಸ್ಥಳೀಯ ಸಂಸ್ಥೆಗಳೇ ನಿಜವಾದ ಸರ್ಕಾರಗಳು. ಸಂವಿಧಾನದ ಆಶಯದಂತೆ ಗ್ರಾಪಂಗಳು ಕೇವಲ ಅಭಿವೃದ್ಧಿ ಸಂಸ್ಥೆಗಳಲ್ಲ. ಅವು `ಗ್ರಾಮ ಸರ್ಕಾರ'ಗಳಾಗಿ ಕೆಲಸ ಮಾಡಬೇಕು. ಅದೇ ರೀತಿ ತಾಪಂ, ಜಿಪಂ ಕೂಡ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿ ಹೊಂದಿವೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net