ಇದಕ್ಕಾಗಿ ಕಳೆದ ೬ ತಿಂಗಳಿAದ ನಿರಂತರ ಸಿದ್ಧತೆಗಳಾಗಿವೆ. ೨೦೦೨ರ ಮತ ಪಟ್ಟಿ ಮಾನದಂಡವಾಗಿಟ್ಟುಕೊAಡು, ೨೦೨೫ರ ಮತ ಪಟ್ಟಿ ಜತೆ ಹೋಲಿಕೆ ಹಾಗೂ ಮ್ಯಾಪಿಂಗ್ ನಡೆಸಲಾಗಿದೆ. ೨೦೨೫ರ ಜಿಲ್ಲೆಯ ಮತ ಪಟ್ಟಿ ಪ್ರಕಾರ ೧೪,೪೦,೩೧೬ ಅರ್ಹ ಮತದಾರರಿದ್ದು, ಈ ಪೈಕಿ ೧೩,೯೬,೨೮೪ ಮತದಾರರನ್ನು ಬಿಎಲ್‌ಒಗಳು ಮನೆ, ಮನೆ ಭೇಟಿ ನೀಡಿ ಪರಿಶೀಲಿಸಿ ಮ್ಯಾಪಿಂಗ್ ಮಾಡಿದ್ದಾರೆ ಎಂದರು.