ಜಿಲ್ಲೆಯಲ್ಲಿ ಶೇ.೯೬ ಮ್ಯಾಪಿಂಗ್ ಪೂರ್ಣ

ಚಿತ್ರದುರ್ಗದಲ್ಲಿ ಗುರುವಾರ ಎಸ್‌ಆರ್‌ಐ ಕುರಿತಂತೆ ರಾಜಕೀಯ ಪಕ್ಷಗಳ ಪ್ರತಿನಿಽಗಳೊಂದಿಗೆ ಡಿಸಿ ಟಿ. ವೆಂಕಟೇಶ್ ಸಭೆ ನಡೆಸಿದರು. ಬಿ.ಟಿ. ಕುಮಾರಸ್ವಾಮಿ, ಬಿಬೀ ಫಾತಿಮಾ, ಮಲ್ಲಿಕಾರ್ಜುನ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ಎಸ್‌ಆರ್‌ಐ ಕುರಿತಂತೆ ರಾಜಕೀಯ ಪಕ್ಷಗಳ ಪ್ರತಿನಿಽಗಳೊಂದಿಗೆ ಡಿಸಿ ಟಿ. ವೆಂಕಟೇಶ್ ಸಭೆ ನಡೆಸಿದರು. ಬಿ.ಟಿ. ಕುಮಾರಸ್ವಾಮಿ, ಬಿಬೀ ಫಾತಿಮಾ, ಮಲ್ಲಿಕಾರ್ಜುನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೂನ್ ೩೦ ರಿಂದ ಬಿಎಲ್‌ಒಗಳಿಂದ ಮನೆ, ಮನೆ ಗಣತಿ
  • ಬೂತ್‌ಮಟ್ಟದ ಏಜೆಂಟರ ನೇಮಕಕ್ಕೆ ಡಿಸಿ ಸೂಚನೆ
  • ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
ಚಿತ್ರದುರ್ಗ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಜಾರಿಯಲ್ಲಿದ್ದು, ಈಗಾಗಲೇ ಜಿಲ್ಲೆಯ ಶೇ.೯೬ ಮತದಾರರ ಮ್ಯಾಪಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಜಿಲ್ಲಾಽಕಾರಿ ಟಿ. ವೆಂಕಟೇಶ್ ಹೇಳಿದರು.
ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಎಸ್‌ಐಆರ್ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಽಗಳ ಸಭೆಯಲ್ಲಿ ಮಾತನಾಡಿದ ಅವರು, ಜೂನ್ ೩೦ರಿಂದ ಜುಲೈ ೨೯ವರೆಗೆ ಬಿಎಲ್‌ಒಗಳಿಂದ ಮನೆ, ಮನೆ ಗಣತಿ ಕಾರ್ಯ ನಡೆಯಲಿದೆ. ಈ ವೇಳೆ ಮತದಾರರಿಗೆ ಗ ಣತಿ ನಮೂನೆ ವಿತರಿಸಲಾಗುವುದು. ಆದ್ದರಿಂದ ಎಸ್‌ಐಆರ್‌ಗೆ ಅನುವಾಗುವಂತೆ ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟರನ್ನು ನೇಮಿಸಬೇಕು ಎಂದರು.
ಪಾರದರ್ಶಕತೆಯಿAದ ಕೂಡಿರುವ ಎಸ್‌ಎಸ್‌ಆರ್ ಉದ್ದೇಶ ಅರ್ಹ ಮತದಾರರನ್ನು ಮತಪಟ್ಟಿಗೆ ಸೇರಿಸುವುದು ಮತ್ತು ಅನರ್ಹ ರನ್ನು ನಿಯಮಾನುಸಾರ ಕೈಬಿಡುವುದಾಗಿದೆ. ಯಾವುದೇ ಸುಳ್ಳು ಮಾಹಿತಿ ಹಾಗೂ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಎಸ್‌ ಐಆರ್ ಅತ್ಯಂತ ಎಚ್ಚರಿಕೆಯಿಂದ ನಡೆಯುತ್ತಿದೆ.
೨೦೦೨ರಲ್ಲಿ ಮತದಾರರ ಪಟ್ಟಿಯ ಕೊನೆಯ ವಿಶೇಷ ಸಮಗ್ರ ಪರಿಷ್ಕರಣೆ ನಡೆದಿದೆ. ಈ ಪಟ್ಟಿಯನ್ನು ಆಧರಿಸಿ -Á್ಯಮಿಲಿ ಲಿಂ ಕೇಜ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಕುಟುಂಬದ ಮುಖ್ಯಸ್ಥರ ಹೆಸರು ೨೦೦೨ರ ಪಟ್ಟಿಯಲ್ಲಿದ್ದರೆ ಹೊಸದಾಗಿ ಅರ್ಹತೆ ಪಡೆ ಯುವ ಕುಟುಂಬದ ಇತರ ಸದಸ್ಯರ ಹೆಸರು ಸೇರ್ಪಡೆ ಸುಲಭವಾಗುತ್ತದೆ.
ಮದುವೆ, ವಲಸೆ ಬಂದವರ ಹೆಸರು ಹಳೆಯ ವೋಟರ್‌ಲಿಸ್ಟ್ನಲ್ಲಿ ಇಲ್ಲದಿದ್ದರೆ, ಅವರಿಗೆ -Á್ಯಮಿಲಿ ಲಿಂಕೇಜ್ ಸಿಗುವುದಿಲ್ಲ. ಈ ಹಿಂ ದೆ ಅವರು ವಾಸವಾಗಿದ್ದ ಸ್ಥಳದ ಮತದಾರರ ಪಟ್ಟಿಯಲ್ಲಿದ್ದರೆ, ಆ ಮಾಹಿತಿ ಹೆಸರು ಸೇರ್ಪಡೆಗೆ ನೀಡಬಹುದು. ಜಿಲ್ಲೆಯಲ್ಲಿ ಶೇ.೪ ಮ್ಯಾಪಿಂಗ್ ಬಾಕಿ ಉಳಿದಿದೆ. ಮ್ಯಾಪಿಂಗ್ ಆಗದೆ ಇರುವವರು ಮನೆ ಗಣತಿ -Áರಂ ಜತೆ ಆಯೋಗ ನಿಗದಿಪಡಿಸಿದ ಅಽಕೃತ ದಾ ಖಲೆಗಳಲ್ಲೊಂದನ್ನು ನೀಡಿದಲ್ಲಿ ಮತಪಟ್ಟಿಗೆ ಸೇರಿಸಲಾಗುತ್ತದೆ.
ಹೊರಗಿನಿಂದ ಬಂದು ವಾಸಿಸುತ್ತಿರುವ ಉದ್ಯೋಗಿಗಳು, ವಲಸಿಗರು ಹಾಗೂ ಮದುವೆಯಾಗಿ ಬಂದಿರುವ ಹೊಸ ಮತದಾರರ ನ್ನು ಗುರುತಿಸಿ, ಭಾರತದ ನಾಗರಿಕರೆಂದು ದೃಢೀಕರಿಸುವ ಅಽಕೃತ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪಡೆದು ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು.
ಸೂಕ್ತ ಮರಣ ಪ್ರಮಾಣ ಪತ್ರ ನೀಡದ ಹೊರತು ಯಾರ ಹೆಸರನ್ನೂ ಮತಪಟ್ಟಿಯಿಂದ ತೆಗೆದು ಹಾಕುವುದಿಲ್ಲ. ಬೂತ್‌ಮಟ್ಟದ ಏಜೆಂಟರಿಗೆ ಎಸ್‌ಐಆರ್ ಕುರಿತು ಸೂಕ್ತ ತರಬೇತಿ ನೀಡಲಾಗುವುದು ಎಂದು ಡಿಸಿ ಹೇಳಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ೨೦೨೬ರ ಮೇ ೨೦ರ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ೧೬೬೧ ಮತಗಟ್ಟೆ ಗಳು, ೧೪,೪೦,೯೨೨ ಮತದಾರರು ಇದ್ದಾರೆ. ವಿಧಾನ ಪರಿಷತ್ ಚುನಾವಣೆ ಮಾದರಿ ಈ ಬಾರಿ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ.
೨೦೨೫ರ ಜನವರಿಯಲ್ಲಿ ಅಂತಿಮಗೊAಡಿದ್ದ ಮತದಾರರ ಪಟ್ಟಿಯನ್ನೇ ಮೂಲ ಆಧಾರವಾಗಿಟ್ಟುಕೊಂಡು, ೨೦೦೨ರ ಕೊನೆಯ ಎಸ್‌ಐಆರ್ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡಲಾಗುತ್ತಿದೆ. ಬಿಎಲ್‌ಒಗಳು ಕನಿಷ್ಠ ಮೂರು ಬಾರಿ ಮನೆಗೆ ಭೇಟಿ ನೀಡಲಿದ್ದು, ಒಂ ದು ವೇಳೆ ಮತದಾರರು ಸಿಗದಿದ್ದಲ್ಲಿ ವರದಿ ನೀಡಲಿದ್ದಾರೆ. ಮತದಾರರ ಪೈಕಿ ಅವರ ಮನೆಯ ಹಿರಿಯ ನಾಗರಿಕರ ಸಹಿಗೂ ಅವಕಾಶವಿದೆ.
ಜುಲೈ ೨೯ರ ಒಳಗೆ ಮತದಾನ ಕೇಂದ್ರಗಳ ರ‍್ಯಾಷನಲೈಜೇಷನ್ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಆಗಸ್ಟ್ ೫ರಂದು ಪ್ರಕಟಿ ಸುವ ಕರಡು ಮತದಾರರ ಪಟ್ಟಿಗೆ ಸಾರ್ವಜನಿಕರು ಅಕ್ಟೋಬರ್ ೩ರ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು. ೭ರಂದು ಅಂತಿಮ ಮತಪಟ್ಟಿ ಪ್ರಕಟಿಸಲಾಗುವುದು.
೨೦೨೬ರ ಅಕ್ಟೋಬರ್ ೧ಕ್ಕೆ ಯಾರಿಗೆ ೧೮ ವರ್ಷ ತುಂಬುತ್ತದೆಯೋ ಅವರ ಹೆಸರು ಪಟ್ಟಿಗೆ ಸೇರಿಸಲು ಅವಕಾಶವಿದೆ. ಹೊಸ ಮತದಾರರು ಅಗತ್ಯ ದಾಖಲೆಗಳೊಂದಿಗೆ -Áರಂ ೬ರ ಮೂಲಕ ಹೆಸರು ಸೇರಿಸಬಹುದು. ಹೆಸರು ತೆಗೆದುಹಾಕಲು ಅಥವಾ ಆ ಕ್ಷೇಪಣೆ ಸಲ್ಲಿಸಲು -Áರಂ ೭, ಹಾಗೂ ವಿಳಾಸ, ಹೆಸರು, ವಯಸ್ಸು ಮತ್ತು ಭಾವಚಿತ್ರ ತಿದ್ದುಪಡಿಗೆ -Áರಂ ೮ಅನ್ನು ಬಳಸ ಬಹುದಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಚುನಾವಣಾ ತಹಸೀಲ್ದಾರ್ ಬಿಬೀ ಫಾತೀಮಾ, ಶಿರೇಸ್ತೆದಾರ್ ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ. ಎನ್.ಮೈಲಾರಪ್ಪ, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯ್ಕ್, ಜಿಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಯಶವಂತ್‌ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಂ. ಮಂಜುನಾಥ್, ಆಪ್ ಪಕ್ಷದ ಎಂ.ವಿ. ಲೋಕೇಶ್, ಸಿಪಿಐ(ಎಂ)ನ ಗೌಸ್‌ಪೀರ್ ಇತರರು ಇದ್ದರು.
"

ಎಸ್‌ಐಆರ್ ಪಾರದರ್ಶಕ ಪ್ರಕ್ರಿಯೆಪಾರದರ್ಶಕತೆಯಿಂದ ಕೂಡಿರುವ ಎಸ್‌ಎಸ್‌ಆರ್ ಉದ್ದೇಶ ಅರ್ಹ ಮತದಾರರನ್ನು ಮತಪಟ್ಟಿಗೆ ಸೇರಿಸುವುದು ಮತ್ತು ಅನರ್ಹರನ್ನು ನಿಯಮಾನುಸಾರ ಕೈಬಿಡುವುದಾಗಿದೆ. ಯಾವುದೇ ಸುಳ್ಳು ಮಾಹಿತಿ ಹಾಗೂ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಎಸ್‌ಐಆರ್ ಅತ್ಯಂತ ಎಚ್ಚರಿಕೆಯಿಂದ ನಡೆಯುತ್ತಿದೆ.

— ಟಿ. ವೆಂಕಟೇಶ್, ಡಿಸಿ
"

ಮ್ಯಾಪಿಂಗ್ ಆದವರ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ. ಬಿಎಲ್‌ಒಗಳ ಮನೆ, ಮನೆ ಭೇಟಿ ವೇಳೆ ಪ್ರತಿ ಮತದಾರರಿಗೆ ಮುದ್ರಿತ ದ್ವಿಪ್ರತಿಯಲ್ಲಿ ಎನ್ಯೂಮರೇಷನ್ -Áರಂ ನೀಡಲಾಗುತ್ತದೆ. ಒಂದನ್ನು ಪ್ರತಿ ಮತದಾರರಿಗೆ ನೀಡುವ ಗಣತಿದಾರರು ಮತ್ತೊಂದನ್ನು ಮತದಾರರ ಸಹಿ ಪಡೆದು ತಮ್ಮಲ್ಲಿ ಇಟ್ಟುಕೊಳ್ಳಲಿದ್ದಾರೆ. ನಂತರ ಈ ಸಹಿ ಇರುವ -Áರಂನ್ನು ಸ್ಕ್ಯಾನ್ ಮಾಡಿ ಚುನಾವಣಾ ಆಯೋಗದ ತಂತ್ರಾAಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈಗಾಗಲೇ ಮ್ಯಾಪಿಂಗ್ ಆಗಿರುವ ಮತದಾರರು ಯಾವುದೇ ರೀತಿಯ ಹೆಚ್ಚುವರಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ

— ಬಿ.ಟಿ. ಕುಮಾರಸ್ವಾಮಿ,ಎಡಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net