ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಪಿಎಚ್‌ಸಿ ಕೇಂದ್ರದಲ್ಲಿ ಭಾನುವಾರ ಬೂತ್‌ಮಟ್ಟದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಮಗುವಿಗೆ ಲಸಿಕೆ ಹಾಕಲಾಯಿತು. ಆಡಳಿತ ವೈದ್ಯಾಽಕಾರಿ ಡಾ.ಟಿ.ಆರ್. ಮೇಘನಾ, ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾದ್ಯಂತ ೧,೨೮,೮೨೬ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ
ಹೈರಿಸ್ಕ್ ಏರಿಯಾಗಳಲ್ಲಿ ಮೊಬೈಲ್ ಟೀಂ
ಜುಲೈ ೧ರವರೆಗೆ ಮನೆ-ಮನೆ ಭೇಟಿ
ಚಿತ್ರದುರ್ಗ: ರಾಷ್ಟಿçÃಯ ಪಲ್ಸ್ ಪೋಲಿಯೋ ಅಭಿಯಾನ ಅಂಗವಾಗಿ ಜಿಲ್ಲಾದ್ಯಂತ ಐದು ವರ್ಷದೊಳಗಿನ ೧,೪೨,೮೫೧ ಮಕ್ಕ ಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಭಾನುವಾರ ಮೊದಲ ದಿನ ೧,೦೮೫ ಬೂತ್‌ಗಳಲ್ಲಿ ೧,೨೮,೮೨೬ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ. ೯೦.೧೮ ಗುರಿ ಸಾಽಸಲಾಗಿದೆ.
ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳಿಗೆ ಬೆಳಗ್ಗೆಯಿಂದಲೇ ಮಕ್ಕಳನ್ನು ಕರೆದೊಯ್ದು ಪಾಲಕರು ಪೋಲಿ ಯೊ ಲಸಿಕೆ ಹಾಕಿಸಲು ಮುಂದಾದರು.
ಜಿ¯್ಲೆಯಲ್ಲಿ ಪ್ರಸಕ್ತ ಸಾಲಿನ ಪಲ್ಸ್ ಪೋಲಿಯೊ ಕ್ರಿಯಾ ಯೋಜನೆಯಂತೆ ಅನುಷ್ಠಾನಕ್ಕಾಗಿ ೧,೧೬೨ ಲಸಿಕಾ ತಂಡಗಳು, ೨೩೫ ಮೇಲ್ವಿಚಾರಕರನ್ನು ನಿಯೋಜಿಸಿದ್ದು, ೨,೩೨೪ ಲಸಿಕಾಕಾರರು ಮಕ್ಕಳಿಗೆ ಲಸಿಕೆ ಹಾಕಿದರು.
ಪಲ್ಸï ಪೋಲಿಯೋ ಹಾಕಿಸದ ಮಕ್ಕಳನ್ನು ಗುರುತಿಸಿ ಜೂ. ೨೯ರಿಂದ ಜುಲೈ ೧ರವರೆಗೆ ಮನೆ-ಮನೆ ಭೇಟಿ ನೀಡಿ ಲಸಿಕೆ ಹಾ ಕಲು ಶುಶ್ರೂಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ.
ಹೈರಿ¸್ಕï ಏರಿಯಾಗಳಲ್ಲಿ ಪೋಲಿಯೊ ಹನಿ ಹಾಕಲು ೧೫ ಮೊಬೈಲï ತಂಡಗಳನ್ನು ರಚಿಸಲಾಗಿದೆ. ಬಸ್, ರೈಲ್ವೆ ನಿಲ್ದಾಣ, ಸಂ ತೆ, ಜಾತ್ರೆ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಲಸಿಕೆ ನೀಡಲು ೬೩ ಟ್ರಸಿಟ್ ತಂಡಗಳು ಕಾರ್ಯಪ್ರವೃತ್ತವಾಗಲಿವೆ.
ಈ ಅವಽಯಲ್ಲಿ ಜಿ¯್ಲÁ ಮಟ್ಟದಲ್ಲಿ ಡಿಎಚ್‌ಒ, ತಾಲೂಕು ಮಟ್ಟದಲ್ಲಿ ಟಿಎಚ್‌ಒ ಅಧ್ಯಕ್ಷತೆಯಲ್ಲಿ ನಿತ್ಯ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ.
ಜಿ¯್ಲÁಡಳಿತ, ಜಿಪಂ, ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿ¯್ಲÁಸ್ಪತ್ರೆ, ತಾಲೂಕು ಆಡಳಿತ, ತಾಪಂನಿAದ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಲಸಿಕೆ ಕುರಿತ ಜಿಲ್ಲಾ ಅಂಕಿ-ಅAಶ
ತಾಲೂಕು, ಗುರಿ, ಲಸಿಕೀಕರಣ, ಶೇಕಡವಾರು ಪ್ರಗತಿ
ಚಿತ್ರದುರ್ಗ - ೪೦೦೯೯ - ೩೪೦೬೯ -೮೪.೯೬
ಚಳ್ಳಕೆರೆ- ೩೧೦೫೩ -೨೭೨೦೨ -೮೭.೬೦
ಹಿರಿಯೂರು -೨೩೬೫೮ -೨೩೦೬೭ -೯೭.೫೦
ಹೊಳಲ್ಕೆರೆ -೧೪೩೯೬- ೧೩೪೦೧ -೯೩.೦೯
ಹೊಸದುರ್ಗ -೧೫೮೧೮ -೧೫೪೧೩ -೯೭.೪೪
ಮೊಳಕಾಲ್ಮೂರು- ೧೭೮೨೭ - ೧೫೬೭೪ -೮೭.೯೨
ಒಟ್ಟು- ೧೪೨೮೫೧ -೧೨೮೮೨೬ -೯೦.೧೮
ಲಸಿಕೆ ಪಡೆದ ಪ್ರತಿ ಮಗುವಿನ ಕಿರು ಬೆರಳಿಗೆ ಶಾಹಿ ಹಾಕಲಾಗುತ್ತದೆ. ಮನೆ-ಮನೆ ಭೇಟಿ ವೇಳೆ ಶಾಹಿ ಕಂಡು ಬರದ, ಪಾಲಕರು ತಿಳಿಸುವ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕಲಾಗುವುದು.