ಚಿತ್ರದುರ್ಗದ ಮುರುಘಾಮಠದಲ್ಲಿ ಭಾನುವಾರ ಜರುಗಿದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ನವ ದಂಪತಿಗಳಿಗೆ ಡಾ. ಬಸವಕುಮಾರ ಸ್ವಾಮೀಜಿ ಆಶೀರ್ವದಿಸಿದರು. ಚಂದ್ರಶೇಖರ್, ಪುಷ್ಪಲತಾ ಸೇರಿ ಇತರರಿದ್ದರು.
ಚಿತ್ರದುರ್ಗ: ಮುರುಘಾ ಮಠದ ಸತ್ಕಾರ್ಯಗಳನ್ನು ಮುಂದಿನ ದಿನಗಳಲ್ಲೂ ಮುಂದುವರಿಸಿಕೊAಡು ಹೋಗಬೇಕಾಗಿದೆ ಎಂದು ಮಠದ ಆಡಳಿತ ಮಂಡಳಿ ಸದಸ್ಯೆ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀಮಠದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ೩೭ನೇ ವರ್ಷದ ೭ನೇ ತಿಂಗಳ ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಜಗದ್ಗುರು ಮಲ್ಲಿಕಾರ್ಜುನ ಸ್ವಾಮೀಜಿ ಅವರು ೧೯೯೦ರಲ್ಲಿ ಮಠದಿಂದ ಉಚಿತ ಸಾಮೂಹಿಕ ಕಲ್ಯಾಣ ಆರಂಭಿಸಿದರು. ಅಂದಿ ನಿAದ ಈವರೆಗೆ ಪ್ರತಿ ತಿಂಗಳು ಸುಮಾರು ೧೦ ರಿಂದ ೩೦ ಜೋಡಿ ವಿವಾಹಗಳು ನಿರಂತರವಾಗಿ ನೆರವೇರುತ್ತ ಬಂದಿವೆ ಎಂ ದರು.
ಸತಿ-ಪತಿಗಳಲ್ಲಿ ಅನುಮಾನ ಇರಬಾರದು. ಜೀವನದುದ್ದಕ್ಕೂ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು. ಆರೋಗ್ಯಪೂರ್ಣ, ಸೌಹಾರ್ದಯುತವಾಗಿ ಬದುಕಬೇಕು ಎಂದೂ ತಿಳಿಸಿದರು.
ಶಿರಸಂಗಿ ಮಠದ ಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಯುª ಸಮೂಹ ಬದುಕಿನ ಮೌಲ್ಯ, ಸತ್ಯ ಅರಿಯಬೇಕು. ಮನೆಯ ಯಜಮಾನ ಅಥವಾ ಮಾಲೀಕರು ಮಾತ್ರವಲ್ಲದೆ, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮುನ್ನಡೆದಾಗ ಜೀವನ ಸಾರ್ಥಕ ಎಂದರು.
ಮಿತಿಮೀರಿದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ದುಶ್ಚಟಗಳಿಂದ ದೂರವಿರಿ. ಕೆಟ್ಟ ಹವ್ಯಾಸಗಳನ್ನು ತ್ಯಜಿಸಿ, ಉತ್ತಮವಾಗಿ ಬದುಕು ರೂಪಿಸಿಕೊಳ್ಳಿ. ದೀರ್ಘಕಾಲದ ಆರೋಗ್ಯ ಕಾಪಾಡಿಕೊಳ್ಳಲು ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದರು.
ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿನ ದಲಿತ, ಶೋಷಿತ ಹಾಗೂ ನಿರಾಶ್ರಿತರ ಕಲ್ಯಾಣಕ್ಕಾಗಿ ಶ್ರೀಮಠ ನಿರಂತರವಾಗಿ ಶ್ರಮಿಸುತ್ತಿದೆ. ಮುರುಘಾ ಪರಂಪರೆ, ಬಸವಾದಿ ಶರಣರ ಸಂಸ್ಕೃತಿಯೊAದಿಗೆ ಅನೇಕ ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ ಎಂದು ತಿಳಿಸಿದರು.
ಬಸವಾದಿ ಶರಣರು ತೋರಿದ ಸಮಾನತೆಯ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಸ್ವಾರ್ಥದ ವ್ಯಕ್ತಿತ್ವಕ್ಕೆ ಸೀಮಿತವಾಗದೆ, ವಿಶ್ವ ಪ್ರe್ಞೆ ಮೈಗೂಡಿಸಿಕೊಳ್ಳಬೇಕು. ಸದ್ಗುಣಗಳ ಮೂಲಕ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಆಡಳಿತ ಮಂಡಳಿ ಸದಸ್ಯ ಎಸ್.ಎಸ್. ಚಂದ್ರಶೇಖರ್ ಮಾತನಾಡಿ, ಕಳೆದ ೩೭ ವರ್ಷಗಳಿಂದಲೂ ಅಮಾವಾಸ್ಯೆ, ಹುಣ್ಣಿಮೆ, ಆಷಾಢ ನೋಡದೆ ನಿರಂತರವಾಗಿ ಮಾಸಿಕ ೫ನೇ ತಾರೀಖಿನಂದು ಸಾಮೂಹಿಕ ಕಲ್ಯಾಣ ಮಹೋತ್ಸವ ನೆರವೇರಿಸುತ್ತಿರುವ ಶ್ರೀಮಠದ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಹಿAದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಽಕಾರಿ ಬಿ. ಪುಷ್ಪಲತಾ ಮಾತನಾಡಿ, ಸಂದಿಗ್ಧ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ರೈತರು, ಬಡವರು, ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟಕರ. ಹೀಗಾಗಿ ಶ್ರೀಮಠದ ಸಾಮೂಹಿಕ ಕಲ್ಯಾಣದಿಂದ ಅನೇಕರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಒಟ್ಟು ೯ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಬಸವ ಮುರುಗೇಂದ್ರ ಸ್ವಾಮೀಜಿ, ಗಿರೀಶ್ ಆಚಾರ್ಯ, ಲಂಕೇಶ್ ದೇವರು ಇತರರಿದ್ದರು.