ಸಂಚಾರ ನಿಯಮ ಉಲ್ಲಂಘನೆಯ ದಂಡಕ್ಕೆ ಶೇ.೫೦ ರಿಯಾಯಿತಿ

ಡಿ.ಜೆ.ಸುದೀನ್‌ಕುಮಾರ್
ಡಿ.ಜೆ.ಸುದೀನ್‌ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ೨೧ರಿಂದ ಜುಲೈ ೧೦ರವರೆಗೆ ಅವಕಾಶ
  • ಪ್ರತಿ ಠಾಣೆಯಲ್ಲೂ ವಿಶೇಷ ಬೂತ್
  • ನ್ಯಾಯಾಽÃಶ ಡಿ.ಜೆ. ಸುದೀನ್‌ಕುಮಾರ್ ಮಾಹಿತಿ
ಚಿತ್ರದುರ್ಗ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ವಿಽಸಿರುವ ದಂಡದ ಮೊತ್ತದಲ್ಲಿ ಶೇ.೫೦ ರಿಯಾಯಿತಿ ನೀಡಿ ಪ್ರಕರ ಣಗಳ ಇತ್ಯರ್ಥಕ್ಕಾಗಿ ಜೂ. ೨೧ರಿಂದ ಜುಲೈ೧೦ರವರೆಗೆ ಮೋಟಾರು ವಾಹನ ಸವಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಽÃಶ ಡಿ.ಜೆ. ಸುದೀನ್ ಕುಮಾರ್ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಸಂಚಾರ ನಿಯಮ ಉಲ್ಲಂಘನೆ ಸಂಭವಿಸುತ್ತವೆ. ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡದು ಮಾಡುವ ಬದಲು, ರಾಜ್ಯ ಸರ್ಕಾರ ದ ಜತೆ ಚರ್ಚಿಸಿ ರಿಯಾಯಿತಿ ವ್ಯವಸ್ಥೆ ಜಾರಿಗೆ ತರಲಾಗಿದೆ.
ಮೇ ೨೦೨೬ಕ್ಕಿಂತ ಮೊದಲು ಪೊಲೀಸ್ ಇಲಾಖೆ ಸಂಚಾರಿ ಇ-ಚಲನ್‌ಗಳಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊ ತ್ತಕ್ಕೆ ಹಾಗೂ ಸಾರಿಗೆ ಇಲಾಖೆಯಲ್ಲಿ ೧೯೯೧ರಿಂದ ೨೦೨೨ರವರೆಗೆ ದಾಖಲಾಗಿರುವ ಪ್ರಕರಣಗಳಿಗೆ ಶೇ.೫೦ ರಿಯಾಯಿತಿ ಅನ್ವಯವಾಗಲಿದೆ. ಇದು ಜನಸಾಮಾನ್ಯರ ಹಿತದÊಷ್ಟಿಯಿಂದ ಸೇವಾ ಪ್ರಾಽಕಾರ ಹಮ್ಮಿಕೊಂಡಿರುವ ಜನಸ್ನೇಹಿ ಕಾರ್ಯಕ್ರಮ ವಾಗಿದೆ.
ಪ್ರತಿ ಪೋಲೀಸ್ ಠಾಣೆಯಲ್ಲೂ ವಿಶೇಷ ಬೂತ್: ಈ ರಿಯಾಯಿತಿ ದಂಡ ವಸೂಲಿಗೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅದರಲ್ಲೂ ವಿಶೇಷವಾಗಿ ಹೆಚ್ಚು ಜನಸಂದಣಿ ಮತ್ತು ಸಂಚಾರ ಇರುವ ಸ್ಥಳಗಳಲ್ಲಿ ವಿಶೇಷ ಬೂತ್‌ಗಳನ್ನು ಸ್ಥಾಪಿಸಲು ಸೂಚಿಸ ಲಾಗಿದೆ. ಠಾಣಾಽಕಾರಿ ಅಥವಾ ತತ್ಸಮಾನ ಅಽಕಾರಿ ನೇಮಿಸಿ ದಂಡ ವಸೂಲಿ ಮಾಡಿ, ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊ ಳ್ಳಲಾಗುವುದು ಎಂದರು.
ಈ ರಿಯಾಯಿತಿ ಕೇವಲ ಪ್ರಕರಣಗಳ ವಿಲೇವಾರಿಗೆ ಅಲ್ಲ, ಸಾರ್ವಜನಿಕರಲ್ಲಿ ಶಿಸ್ತು ಮೂಡಿಸುವುದೂ ಆಗಿದೆ. ಸಂಚಾರ ಅಪರಾಧ ಗಳಾಗದಂತೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು. ಸಂಚಾರ ನಿಯಮಗಳು ಕೇವಲ ಕಾನೂನಿಗಾಗಿ ಅಲ್ಲ, ಅದು ನಮ್ಮ ವೈಯ ಕ್ತಿಕ ಜೀವನ, ದೇಹ ಹಾಗೂ ಕುಟುಂಬ ರಕ್ಷಣೆಗೆ ಇರುವಂತದ್ದು.
ಜೀವ ರಕ್ಷಣೆ ಮುಖ್ಯ. ವಾಹನ ಸವಾರರು ಜವಾಬ್ದಾರಿಯಿಂದ ನಿಯಮ ಪಾಲಿಸದಿದ್ದರೆ, ಇಡೀ ಕುಟುಂಬ ಮತ್ತು ಸಮಾಜ ತೊಂದ ರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ, ಅರಣ್ಯ ಬೆಳೆಸುವುದು ಹಾಗೂ ಕೆರೆಗಳ ಪುನರುಜ್ಜೀವನಕ್ಕೆ ಮತ್ತು ಸಂರಕ್ಷಣೆಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಪ್ರಾಽಕಾರದಿಂದ ಸ್ಥಳ ಪರಿಶೀಲನೆ ನಡೆಸಲಾಗುವುದು. ಕೆರೆಗಳ ಸಂರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net