ವಸತಿ ರಹಿತರ ಪಟ್ಟಿಗೆ ಹೆಸರು ಸೇರಿಸಲು 15ಕೊನೇ ದಿನ

ಮನೆ
ಮನೆ
Published on

ಪ್ರಮುಖ ಮುಖ್ಯಾಂಶಗಳು

  • ರಾಜೀವ್‌ಗಾಂಽ ವಸತಿ ನಿಗಮದ ನಿರ್ದೇಶನ
  • ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)
  • ಸಮೀಕ್ಷಾ ಪಟ್ಟಿ
ಚಿತ್ರದುರ್ಗ: ಸಮೀಕ್ಷೆ-೨೦೧೮ರಲ್ಲಿ ಕೈ ಬಿಟ್ಟು ಹೋಗಿರುವ ಅರ್ಹ ವಸತಿ ಮತ್ತು ನಿವೇಶನ ರಹಿತ -Àಲಾನುಭವಿಗಳನ್ನು ಗುರುತಿ ಸಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆಯನ್ನು ಮೇ ೧೫ ರೊಳಗೆ ಪೂರ್ಣಗೊಳಿಸುವಂತೆ ಚಿತ್ರದುರ್ಗ ತಾಪಂ ಕಾರ್ಯಾಲಯ ಸಂಬಂಽಸಿ ದ ಅಽಕಾರಿಗಳಿಗೆ ಸೂಚಿಸಿದೆ.
ರಾಜೀವ್‌ಗಾಂಽ ವಸತಿ ನಿಗಮದ ನಿರ್ದೇಶನದಂತೆ ೨೦೧೮ರಲ್ಲಿ ನಡೆಸಿದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಸಮೀಕ್ಷಾ ಪಟ್ಟಿ ಪರಿಷ್ಕರಿಸಲು ಸರ್ಕಾರ ಅನುಮತಿ ನೀಡಿದೆ.
ಆ ಸಂದರ್ಭದಲ್ಲಿ ಅರ್ಹತೆ ಇದ್ದರೂ ತಾಂತ್ರಿಕ ಕಾರಣಗಳಿಂದ ಅಥವಾ ಇತರೆ ಅಡೆತಡೆಗಳಿಂದ ಪಟ್ಟಿಯಿಂದ ಹೊರಗುಳಿದವರನ್ನು ಪತ್ತೆಹಚ್ಚಿ ಗ್ರಾಮ ಸಭೆಗಳ ಮೂಲಕ ಅವರ ಅರ್ಹತೆ ಮರುಪರಿಶೀಲಿಸಿ ಪಟ್ಟಿಗೆ ಸೇರಿಸಲು ಸೂಚಿಸಲಾಗಿದೆ. ೨೦೨೬-೨೭ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಒಂದು ಲಕ್ಷ ಮನೆಗಳ ಹಂಚಿಕೆ ಗುರಿ ಹೊಂದಲಾಗಿದೆ. ಇದ ಕ್ಕಾಗಿ ಅರ್ಹ -Àಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
-Àಲಾನುಭವಿಗಳನ್ನು ಆನ್‌ಲೈನ್ ಲಾಟರಿ ಮೂಲಕ ಗ್ರಾಮ ಸಭೆಗಳಲ್ಲಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು. ಒಂದು ವೇಳೆ ಅರ್ಹ ವಸತಿ ರಹಿತರ ಹೆಸರಿನ್ನೂ ಪಟ್ಟಿಗೆ ಸೇರ್ಪಡೆಯಾಗದಿದ್ದಲ್ಲಿ, ಸಂಬಂಽಸಿದ ಗ್ರಾಪಂ ಮಟ್ಟದಲ್ಲಿ ಕೂಡಲೇ ಕ್ರಮ ವಹಿಸಬೇಕು.

ನಿಗದಿಪಡಿಸಿದ ಕಾಲಾವಕಾಶದ ನಂತರ ಹೊಸ ಸೇರ್ಪಡೆಗೆ ಅವಕಾಶ ಇರುವುದಿಲ್ಲವೆಂದು ಚಿತ್ರದುರ್ಗ ತಾಪಂ ಇಒ ಕಚೇರಿ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net