ಬಸ್​​ನಲ್ಲಿದ್ದ ಪ್ರಯಾಣಿಕರ ಕಣ್ಣಲ್ಲಿ ಬಿತ್ತು ಖಾರದ ಪುಡಿ..!

Yadagiri Bus
Published on

ಯಾದಗಿರಿ: ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕಣ್ಣಿಗೆ ಏಕಾಏಕಿ ಖಾರದಪುಡಿ ಬಿದ್ದಿದ್ದರಿಂದ ಕೆಲಕಾಲ ಬಸ್​ ನಿಲ್ಲಿಸುವಂತಾಯತು. ಅರೆ ಬಸ್ಸಿನಲ್ಲಿ ಖಾರದ ಪುಡಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಮೂಡುವುದಂತೂ ನಿಜ. ಅದಕ್ಕೂ ಕಾರಣ ಇಲ್ಲಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್​ ಯಾದಗಿರಿಯಿಂದ ಗುರುಮಠಕಲ್​ ಕಡೆ ತೆರಳುತ್ತಿತ್ತು. ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಲಗೇಜ್​ ಇಡುವ ಜಾಗದಲ್ಲಿ ಖಾರದ ಪುಡಿ ಚೀಲವನ್ನು ಇಟ್ಟಿದ್ದ. ಈ ವೇಳೆ ಖಾರದ ಪುಡಿ ಚೀಲ ಹೊಡೆದಿದೆ. ಇದರಿಂದ ಬಸ್​ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು.

ಮಕ್ಕಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕಣ್ಣಿಗೆ ಬಿದ್ದಿದೆ. ಖಾರದ ಪುಡಿ ಕಣ್ಣಿಗೆ ಬಿದ್ದು, ಎಲ್ಲರ ಕಣ್ಣಲ್ಲೂ ನೀರು ಹರಿಯಿತು. ಇನ್ನು ಖಾರದಪುಡಿ ಮೂಟೆ ಚೀಲ ತಂದಿದ್ದ ಮಹಾಶಯನಿಗೆ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net