ಮಕ್ಕಳ ಗ್ರಾಮ ಸಭೆ, ಕ್ರೀಡಾಕೂಟ ಬಹುಮಾನ ವಿತರಣೆ

mm
Published on

ಬೈಂದೂರು: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಉಪ್ಪುಂದ ಗ್ರಾಪಂ ಮಕ್ಕಳ ಗ್ರಾಮಸಭೆ ಮತ್ತು ಶಾಲಾ ಮಕ್ಕಳ ಗ್ರಾಮೀಣ ಕ್ರೀಡಾಕೂಟದ ಬಹುಮಾನ ವಿತರಣೆ ನಡೆಯಿತು.

ಗ್ರಾಪಂ ಅಧ್ಯಕ್ಷ ಮೋಹನಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಎಲ್ಲ ಶಾಲೆಗಳ ಆಯ್ದ ಮಕ್ಕಳು ಸಮಸ್ಯೆ ತಿಳಿಸಿದರು. ಮಕ್ಕಳಿಂದ ಬೇಡಿಕೆ ಪಟ್ಟಿ ಸ್ವೀಕರಿಸಿ, ಸಭೆಯಲ್ಲಿ ಸಲಹೆ ನೀಡಲಾಯಿತು.

ಗ್ರಾಪಂ ಮಾರ್ಗದರ್ಶಿ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ.ನಾಯ್ಕ, ಪಿಡಿಒ ಸುದರ್ಶನ ಎಸ್., ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಸದಸ್ಯರಾದ ಜಗನ್ನಾಥ ಮೊಗವೀರ, ಶೇಖರ ಪೂಜಾರಿ, ಪ್ರಕಾಶ ಆಚಾರ್, ಬಾಬು ದೇವಾಡಿಗ, ವೀಣಾ, ಬಾರಿನ ಗಿರಿಜಾ, ಸಮಿತ್ರಾ ಗಾಣಿಗ, ವಿನೋದರಾಜ್, ನಾಗರಾಜ ಖಾರ್ವಿ, ಲಕ್ಷ್ಮೀ, ಪೂರ್ಣಿಮಾ, ಸುಪ್ರೀತಾ ಶೆಟ್ಟಿ, ಪ್ರೇಮಾ ದೇವಾಡಿಗ, ರೇಷ್ಮಾ ಸಂದೇಶ್ ಭಟ್, ನಮ್ಮ ಭೂಮಿ ಸಂಸ್ಥೆ ಶ್ರೀನಿವಾಸ ಗಾಣಿಗ, ಕೃಪಾ, ಆಶಾ, ಅನಿತಾ, ಗಣೇಶ, ಶಾಲಾ ಶಿಕ್ಷಕ ವೃಂದ, ಅಂಗನವಾಡಿ ಮತ್ತು ಅಶಾ ಕಾರ್ಯಕರ್ತೆಯರು, ಸಂಜೀವಿನಿ ಸ್ವಸಹಯ ಸಂಘ ಸದಸ್ಯರು ಮತ್ತು ಎಸ್‌ಎಲ್‌ಆರ್‌ಎಂ ಸಿಬ್ಬಂದಿ ಇದ್ದರು. ಪಂಚಾಯಿತಿ ಕಾರ್ಯದರ್ಶಿ ಗಿರಿಜಾ ಸ್ವಾಗತಿಸಿದರು. ಮುಖ್ಯ ಬರಹಗಾರರಾದ ರೇಖಾ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net