ನ.18ರಿಂದ ಮಕ್ಕಳ ವಚನ ಮೇಳ; ಕಲಾಗ್ರಾಮದಲ್ಲಿ ಆಯೋಜನೆ

New Project
Published on

ಬೆಂಗಳೂರು : ಕನ್ನಡದ ಸಾಂಸ್ಕೃತಿಕ ಸಂಪತ್ತಾದ ವಚನಗಳನ್ನು ಕಳೆದ 27 ವರ್ಷಗಳಿಂದ ವಿದ್ಯಾರ್ಥಿಗಳಿಗೆ ತಲುಪಿಸುತ್ತಿರುವ ವಚನಜ್ಯೋತಿ ಬಳಗವು ಇದೇ ನ.18 ರಿಂದ 27ರವರೆಗೆ ಮಕ್ಕಳ ವಚನ ಮೇಳವನ್ನು ಆಯೋಜಿಸಿದೆ.

ನಾಗರಬಾವಿ ಸಮೀಪದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಿಶುವಿಹಾರದಿಂದ 10ನೇ ತರಗತಿಯ ವಿದ್ಯಾರ್ಥಿಗಳು ಮಕ್ಕಳ ವಚನ ಮೇಳದಲ್ಲಿ ಪಾಲ್ಗೊಳ್ಳಬಹುದು. ಸ್ಪರ್ಧೆಗಳಲ್ಲಿ 12 ಪ್ರಕಾರಗಳನ್ನು ಗುರುತಿಸಲಾಗಿದ್ದು, ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನ ಚಿತ್ರ, ವಚನ ನೃತ್ಯ, ವಚನ ಅಂತ್ಯಾಕ್ಷರಿ, ವಚನ ರಸಪ್ರಶ್ನೆ, ವಚನ ರೂಪಕ, ವಚನ ವೇಷಭೂಷಣ, ವಚನ ಕಥೆ, ವಚನ ಕಂಠಪಾಠ ಮತ್ತು ಸಮೂಹ ವಚನ ಗಾಯನ ಸ್ಪರ್ಧೆಗಳು ನಡೆಯಲಿವೆ. ಆಸಕ್ತ ವಿದ್ಯಾರ್ಥಿಗಳು ಅ.31ರೊಳಗೆ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ 9845184267 ಸಂಪರ್ಕಿಸ ಬಹುದು ಎಂದು ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net