

ಕಂಪ್ಲಿ: ಇಲ್ಲಿನ ಇಂದಿರಾನಗರದ ಜನತೆ ಹಾಗೂ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವಲ್ಲಿ ಸಕಿಪ್ರಾ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ವಿ.ವಸಂತ್ ಪ್ರಯತ್ನಶೀಲರಾಗಿದ್ದಾರೆ.
ಇದನ್ನೂ ಓದಿ: ವೈಜ್ಞಾನಿಕ ವಿಚಾರ ನಂಬಿಕೆ ಆಧಾರದಲ್ಲಿದೆ
ಎಂ.ಎಸ್ಸಿ ಬಿಎಡ್ ಪದವಿಧರರಾಗಿದು,್ದ ಶಿಕ್ಷಕ ಸೇವೆಗೆ ಸೇರಿ 17ವರ್ಷಗಳಾಗಿವೆ. ಮಕ್ಕಳಿಗೆ ಪಠ್ಯ ಜತೆಗೆ ವೈಜ್ಞಾನಿಕ, ತಾರ್ತಿಕ ಚಿಂತನೆಗಳನ್ನು ಪ್ರೇರೇಪಿಸುವ, ವಿಸ್ಮಯ, ಪವಾಡ, ನಿತ್ಯ ವಿದ್ಯಮಾನಗಳ ಅಚ್ಚರಿಗಳಲ್ಲಿ ಅಡಗಿದ ವೈಜ್ಞಾನಿಕ ಹಿನ್ನಲೆ ತಿಳಿಸಿಕೊಡುವ ಮೂಲಕ ಮಾದರಿ ಶಿಕ್ಷಕರಾಗಿದ್ದಾರೆ.
ಪವಾಡ ಸಂಶೋಧನಾ ಕೇಂದ್ರದ ರೂವಾರಿ ಹುಲಿಕಲ್ ನಟರಾಜ್ ಇವರಲ್ಲಿ ತರಬೇತಿ ಪಡೆದು ಪವಾಡ ಬಯಲು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು. ಮಾರ್ಗದರ್ಶನದಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಗ್ರಾಮೀಣ ಮಕ್ಕಳು ಭಾಗವಹಿಸಿ ಇನ್ಸ್‌ಫೈಯರ್ ಅವಾರ್ಡ್ ಪಡೆದರು.
ತಾಲೂಕಿನ ಹಂಪಾದೇವನಹಳ್ಳಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಪ್ರಾಯೋಗಾಲಯವನ್ನು ನಿರ್ಮಿಸುವ ಮೂಲಕ ಉತ್ತಮ ಮಾದರಿಯ ಗ್ರಾಮೀಣ ಪ್ರಾಯೋಗಾಲಯವೆಂದು ಜನಪ್ರಿಯಗೊಂಡಿತು.
ಹಕ್ಕಿಪಿಕ್ಕಿ ಬುಡಕಟ್ಟು ಆದಿವಾಸಿ ಮಕ್ಕಳೇ ಹೆಚ್ಚಿರುವ ಇಂದಿರಾನಗರದ ಸಕಿಪ್ರಾಶಾಲೆಯ ಪ್ರಭಾರ ಮುಖ್ಯಶಿಕ್ಷಕರಾಗಿದ್ದು, ಶಾಲೆಯಿಂದ ವಿಮುಖರಾಗಿರುವ ಈ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ನಿರತರಾಗಿದ್ದಾರೆ.
ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಒಲುವು ತೋರುವ ವಿದ್ಯಾರ್ಥಿಗಳನ್ನು ಗುರುತಿಸಿ ಬಾಲ ವಿಜ್ಞಾನಿಗಳನ್ನಾಗಿ ರೂಪಿಸುವುದು, ತಾಲೂಕು ಮಟ್ಟದ ವೈಜ್ಞಾನಿಕ ಚಿಂತನಾ ವೇದಿಕೆ ರೂಪಿಸಿ, ಮಕ್ಕಳು ಹಾಗೂ ಜನರಲ್ಲಿ ನಿತ್ಯ ಜೀವನ ವೈಜ್ಞಾನಿಕ ಮನೋಭಾವನೆ ಪ್ರೇರೇಪಿಸುವುದು, ತಾಲೂಕು ಮಟ್ಟದ ಅತ್ಯುತ್ತಮ ಮಾದರಿ ಪ್ರಾಯೋಗಾಲಯವನ್ನು ಸ್ಥಾಪಿಸುವ ಆಶಯ ಹೊಂದಿದ್ದೇನೆ.
ವಿ.ವಸಂತ್, ಪ್ರಭಾರ ಮುಖ್ಯಶಿಕ್ಷಕ,
ಇಂದಿರಾನಗರದ ಸಕಿಪ್ರಾ ಶಾಲೆ,
ಕಂಪ್ಲಿ.