More

    ವೈಜ್ಞಾನಿಕ ವಿಚಾರ ನಂಬಿಕೆ ಆಧಾರದಲ್ಲಿದೆ

    ಬಾಳೆಹೊನ್ನೂರು: ಮನುಕುಲದ ಒಳಿತಿಗಾಗಿ ನಮ್ಮ ಪೂರ್ವಜರು ಅನೇಕ ವೈಜ್ಞಾನಿಕ, ವೈಚಾರಿಕ ವಿಚಾರಗಳನ್ನು ನಂಬಿಕೆಗಳ ಆಧಾರದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಶಿಕ್ಷಕ ಎಚ್.ಎನ್.ವಿಶ್ವನಾಥ್ ಹೇಳಿದರು.

    ಸಮೀಪದ ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಆರ್.ಪುರ ತಾಲೂಕು ಕಸಾಪ ಶನಿವಾರ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಭಾರತೀಯ ಸಂಪ್ರದಾಯ ಮತ್ತು ವೈಜ್ಞಾನಿಕ ಹಿನ್ನೆಲೆ ಕುರಿತು ಅವರು ಉಪನ್ಯಾಸ ನೀಡಿದರು.
    ಮುಂಜಾನೆ ಏಳುವುದರಿಂದ ಹಿಡಿದು ರಾತ್ರಿ ಮಲಗುವ ತನಕ ಪ್ರತಿಯೊಂದು ಕ್ರಿಯೆಯು ವೈಜ್ಞಾನಿಕವಾಗಿ ನಿರೂಪಿತವಾಗಿದೆ. ಅಲ್ಲದೆ ವೇಷಭೂಷಣ, ಧರಿಸುವ ಆಭರಣಗಳು ಕೂಡ ಅಷ್ಟೇ ವೈಜ್ಞಾನಿಕ ಕಾರಣ ಹೊಂದಿವೆ ಎಂದರು.
    ಬೆಳ್ಳಿಯ ಕಾಲುಂಗುರ ಮಣ್ಣಿನಲ್ಲಿ ಇರುವ ಜಿಯೋ ಥರ್ಮಿಕಲ್ ಅಂಶ ದೇಹವನ್ನು ತಲುಪುವಂತೆ ಮಾಡುತ್ತದೆ. ಮನೆ ಮುಂದೆ ನೆಡುವ ತುಳಸಿ ಅನೇಕ ಕಾಯಿಲೆಗೆ ರಾಮಬಾಣ. ಅದನ್ನು ಪೂಜಿಸುವ ಪರಂಪರೆ ಉಳಿದು ಬೆಳೆದು ಬಂದಿದೆ. ಆಹಾರ ಪದ್ಧತಿ ಕೂಡ ಆರೋಗ್ಯಕ್ಕೆ ಪೂರಕ. ಆಹಾರ ತೆಗೆದುಕೊಳ್ಳುವ ಕ್ರಮ ಕೂಡ ವೈಜ್ಞಾನಿಕವಾದದ್ದು ಎಂದರು.
    ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಸಾಹಿತ್ಯ ಪರಿಷತ್ ಭಾರತೀಯ ಸಂಸ್ಕೃತಿಯ ಅನೇಕ ಮಜಲುಗಳನ್ನು ಹಳ್ಳಿಯ ಮೂಲೆ ಮೂಲೆಗಳಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದೆ. ತಾಲೂಕು, ಹೋಬಳಿ ಘಟಕಗಳು ಸೇರಿಕೊಂಡು ವಿನೂತನ ಕಾರ್ಯಕ್ರಮ ನಡೆಸುತ್ತಿದೆ ಎಂದರು.
    ಭಾರತೀಯ ಹಬ್ಬ ಹರಿದಿನಗಳು ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ಕಸಾಪ ಹೋಬಳಿ ಅಧ್ಯಕ್ಷ ರತ್ನಾಕರ್ ಗಡಿಗೇಶ್ವರ, ಮುಖ್ಯಶಿಕ್ಷಕ ರಮೇಶ್, ತಾಲೂಕು ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ್, ಹೋಬಳಿ ಕಾರ್ಯದರ್ಶಿ ಕೆ.ಎಂ.ರಾಘವೇಂದ್ರ, ಶ್ರೀಚೇತನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts