ಮಕ್ಕಳ ಜೀವನ ರೂಪಿಸುಲು ಪಾಲಕರ ಪಾತ್ರ ಮುಖ್ಯ

Hanakunti Guruvandana Programmee
ಹನಕುಂಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
Published on

ಅಳವಂಡಿ: ಜೀವನ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿ ಗುರುಗಳ ಪಾತ್ರ ಬಹಳ ಮುಖ್ಯ. ಅವರ ಮಾರ್ಗದರ್ಶನದಿಂದ ಮಾತ್ರ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯ ಎಂದು ಸಿಆರ್‌ಪಿ ಬಸವರಾಜ ತಿಳಿಸಿದರು.

ಸಮೀಪದ ಹನಕುಂಟಿ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಬುಧವಾರ ಮಾತನಾಡಿದರು.

ಜೀವನ ರೂಪಿಸುವಲ್ಲಿ ಪಾಲಕರ ಪಾತ್ರ ಬಹಳ ಮುಖ್ಯ. ಮಾರ್ಗದರ್ಶನ ನೀಡುವ ಗುರುಗಳು ಹಾಗೂ ಜೀವ ನೀಡಿದ ತಂದೆ-ತಾಯಿಗಳನ್ನು ಮರೆಯಬಾರದು. ಗುರು, ಪಾಲಕರ ಆಶೀರ್ವಾದವಿಲ್ಲದೆ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಗುರಿಯೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.

ಶಿಕ್ಷಕ ಜಗದೀಶ ಮಾತನಾಡಿ, ಯುವಕರು ದುಶ್ಚಟಗಳಿಗೆ ದಾಸರಾಗಿ ಜೀವನದ ಬದುಕಿನ ಅಮೂಲ್ಯ ಕ್ಷಣಗಳನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಅಲ್ಲದೆ ಆರೋಗ್ಯ ಕೂಡ ಹಾಳಾಗುತ್ತದೆ. ಕಾರಣ ಯುವಕರು ದುಶ್ಚಟಗಳಿಂದ ದೂರ ಉಳಿದು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು ಎಂದರು.

ಶಿಕ್ಷಕ ಶಿರಸಪ್ಪ ಗಡಾದ ಮಾತನಾಡಿದರು. ಇದಕ್ಕೂ ಮೊದಲು ಶಿಕ್ಷಕರನ್ನು ವಾದ್ಯ ಮೇಳ ಹಾಗೂ ಹೂ ಮಳೆಗೆರೆದು ಸಂಭ್ರಮದಿಂದ ಸ್ವಾಗತಿಸಲಾಯಿತು. ನಂತರ ಶಿಕ್ಷಕರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ಶಿವಪುತ್ರಪ್ಪ ನರೇಗಲ್, ಈರಣ್ಣ ಕಮ್ಮಾರ, ಶಿರಸಪ್ಪ ಗಡಾದ, ಅಶೋಕ ಬಾರಕೇರ, ಕೃಷ್ಣಪ್ಪ ಬಣ್ಣದ, ನಿಂಗಪ್ಪ ಅಗಸಿಮುಂದಿನ, ಸಿದ್ದಲಿಂಗೇಶ ಆನಂದಿ, ರವಿನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಸಿಆರ್‌ಪಿ ವೀರೇಶ ಕೌಟಿ, ಮುಖ್ಯ ಶಿಕ್ಷಕ ರಾಮಚಂದ್ರಪ್ಪ ಬಾರಕೇರ, ಶಿಕ್ಷಕರಾದ ಈರಣ್ಣ, ಗವಿಸಿದ್ದಪ್ಪ, ಜಗದೀಶ, ಮಹಾಲಕ್ಷ್ಮೀ, ರಮೇಶ, ಹುಲಿಗೆಮ್ಮ, ಪಕೀರಮ್ಮ, ರೇಣುಕಾ, ಸಾವಿತ್ರಿ, ಪ್ರಮುಖರಾದ ಕನಕರಾಜ ಹೊಸಗೇರಿ, ಹನುಮಂತಪ್ಪ ಚಿಲವಾಡಗಿ, ಬಸಪ್ಪ ಅಳವಂಡಿ, ಮಾರುತಿ ತಳವಾರ, ರಾಮಣ್ಣ ಹೊಸಗೇರಿ, ಕೋಟೇಶ, ಹನುಮಪ್ಪ ಲಕ್ಕುಂಡಿ, ದುರಗಪ್ಪ ಹರಿಜನ, ಕುಬೇರಪ್ಪ, ಅಶೋಕ, ಸುಬಾಸ, ಕನಕರಾಜ, ಹಾಲಪ್ಪ, ಮಹಾಂತೇಶ, ನಾಗರಾಜ, ಶಿವು, ವೀರೇಶ, ರಮೇಶ, ಮಾರುತಿ, ಲಿಂಗರಾಜ, ಮಾಲಾ, ವೀರಣ್ಣ, ವೆಂಕಟೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net