ರೋಜರಿ ಚರ್ಚ್‌ನಲ್ಲಿ ಮಕ್ಕಳ ಜುಬಲಿ ಉತ್ಸವ

JUBILEE UTSAVA
ಕುಂದಾಪುರದ ರೋಜರಿ ಮಾತಾ ಚರ್ಚ್‌ನಲ್ಲಿ ಸುವಾರ್ತ ಪ್ರಸಾರ ಆಯೋಗ ಮುಂದಾಳತ್ವದಲ್ಲಿ ಮಿಷನರಿ ಮೇಳದ ಮಕ್ಕಳ ಜುಬಲಿ ಉತ್ಸವ ನಡೆಯಿತು.
Published on

ಕುಂದಾಪುರ: ಕುಂದಾಪುರದ ರೋಜರಿ ಮಾತಾ ಚರ್ಚ್‌ನಲ್ಲಿ ಸುವಾರ್ತ ಪ್ರಸಾರ ಆಯೋಗ ಮುಂದಾಳತ್ವದಲ್ಲಿ ಮಿಷನರಿ ಮೇಳದ ಮಕ್ಕಳ ಜುಬಲಿ ಉತ್ಸವ ಇತ್ತೀಚೆಗೆ ನಡೆಯಿತು.

ಮಕ್ಕಳು ಸಕ್ರಿಯವಾಗಿ ಬಲಿಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ದೇವಾಲಯದ ಸಭಾಂಗಣದಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ವಿಧಿಯನ್ನು ಸಂತ ಜೋಸೆಫರ ಕಾನ್ವೆಂಟ್‌ನ ಸುಪ್ರಿಯಾ ನೆರವೇರಿಸಿದರು. ಕುಂದಾಪುರ ಚರ್ಚ್ ಪ್ರಧಾನ ಧರ್ಮಗುರು ಪಾವ್ಲ್ ರೇಗೋ ಅಧ್ಯಕ್ಷತೆ ವಹಿಸಿದ್ದರು.

ಮಿಷನರಿ ಮೇಳ ಉಸ್ತುವಾರಿ ಜೂಲಿಯೆಟ್, ಚರ್ಚ್‌ನ 20 ಆಯೋಗದ ಸಂಯೋಜಕ ಪ್ರೇಮಾ ಡಿಕುನ್ಹಾ, ಸೇಂಟ್ ಜೋಸೆಫ್ ಕಾನ್ವೆಂಟ್ ಧರ್ಮ ಭಗಿನಿಯರು, ಶಿಕ್ಷಕರು ಉಪಸ್ಥಿತರಿದ್ದರು. ಮಕ್ಕಳಿಗೆ ಆಯೋಜಿಸಿದ ಸ್ಪರ್ಧೆಗಳ ವಿಜೆೇತರಿಗೆ ಬಹುಮಾನ ವಿತರಿಸಲಾಯಿತು. ಡೆನಿಸನ್ ಪ್ಯಾಟ್ರಿಕ್ ಬ್ರಗಾಂಜ ಸ್ವಾಗತಿಸಿದರು. ವಿನಿಷಾ ಡಿಸೋಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net