

ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ರ‌್ಯಾಲಿ ವೇಳೆ ಕೆಲವು ಮಕ್ಕಳು ಸೈಕಲ್‌ಗೆ ಕಾಂಗ್ರೆಸ್ ಪಕ್ಷದ ಬಾವುಟ ಕಟ್ಟಿಕೊಂಡು ಓಡಾಡುತ್ತಿದ್ದು ಗಮನಸೆಳೆಯಿತು.
ನಗರದ ಟೌನ್‌ಹಾಲ್ ವೃತ್ತದ ಬಳಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ನಾಮಪತ್ರ ಸಲ್ಲಿಸುವ ಹಿನ್ನೆಲೆ ಗುರುವಾರ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಗೃಹ ಸಚಿವ ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೇರಿ ಹಲವು ಮುಖಂಡರು ಮಾತನಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಯಾವುದೇ ವಾಹನಗಳ ಓಡಾಟವಿಲ್ಲದ್ದರಿಂದ ಸೈಕಲ್‌ಗೆ ಬಾವುಟ ಕಟ್ಟಿಕೊಂಡು ಮಕ್ಕಳು ಕಾಂಗ್ರೆಸ್‌ಗೆ ಜೈಕಾರ ಕೂಗುತ್ತಾ ಸುತ್ತಾಡುತ್ತಿದ್ದದು ಕಂಡುಬಂತು. ಇದು ಕೈ ಪಕ್ಷದ ಮುಖಂಡರಿಗೆ, ಚುನಾವಣಾ ಸಿಬ್ಬಂದಿಗೂ ತಲೆಬಿಸಿ ತಂದಿದೆ.
ಪ್ರಚಾರಕ್ಕೆ ಮಕ್ಕಳು ಬಳುಸುವಂತಿಲ್ಲ: ಚುನಾವಣಾ ಸಮಾವೇಶಗಳು, ಪ್ರಚಾರ ಕಾರ್ಯಕ್ರಮಗಳಲ್ಲಿ ಮಕ್ಕಳು ಯಾವುದೇ ಪಕ್ಷದ ಬಾವುಟ, ಬಟ್ಟೆ ತೊಟ್ಟು ಪಾಲ್ಗೊಂಡಿದ್ದರೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕ್ರಮ ವಹಿಸಲಿದ್ದು ಪೋಷಕರು ಇಂತಹ ರ‌್ಯಾಲಿಗಳಿಗೆ ಮಕ್ಕಳನ್ನು ಕರೆತರಬಾರದು. ಈ ಬಗ್ಗೆ ಪಕ್ಷದ ಪದಾಧಿಕಾರಿಗಳು ರ‌್ಯಾಲಿಗೆ ಜನ ಕರೆತರುವ ಮುನ್ನ ಮಕ್ಕಳ ಜತೆಯಲ್ಲಿ ಕರೆದುಕೊಂಡು ಬಾರದಂತೆ ತಿಳಿಸಬೇಕಿದೆ.