ಮಕ್ಕಳ ಆಹಾರ ಶುಚಿರುಚಿಯಾಗಿರಲಿ

23cbp1
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿಯಲ್ಲಿ ಕೂಸಿನ ಮನೆ ನಿರ್ವಹಣೆಯನ್ನು ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ ಪರಿಶೀಲಿಸಿದರು. ನರೇಗಾ ಸಹಾಯಕ ನಿರ್ದೇಶಕ ರಫೀಕ್, ಜಿ.ಪಂ.ಎಡಿಪಿಸಿ ಹರೀಶ್ ಮತ್ತಿತರರು ಇದ್ದರು.
Published on

ಕೂಸಿನಮನೆ ಆರೈಕೆದಾರರಿಗೆ ಜಿಪಂ ಸಿಇಒ ಸೂಚನೆ

ಚಿಕ್ಕಬಳ್ಳಾಪುರ: ತಾಲೂಕಿನ ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕಾರ್ಮಿಕರಿಗಾಗಿ ನಿರ್ಮಿಸಿರುವ ಕೂಸಿನ ಮನೆ ನಿರ್ವಹಣೆ ಸೇರಿ ವಿವಿಧೆಡೆ ಕಾಮಗಾರಿಗಳನ್ನು ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ ಶುಕ್ರವಾರ ಪರಿಶೀಲಿಸಿದರು.

ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ಕೂಸಿನ ಮನೆಯಲ್ಲಿರಬೇಕು. ಇಲ್ಲಿ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ ಪಾಲನೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಡ್ಡಾಯವಾಗಿ ಶುಚಿರುಚಿಯಾದ ಉಪಾಹಾರ ನೀಡಬೇಕು ಎಂದು ಆರೈಕೆದಾರರಿಗೆ ಸೂಚಿಸಿದರು. ಚಿಕ್ಕಬಳ್ಳಾಪುರ ತಾಲೂಕಿನ 20 ಗ್ರಾಪಂಗಳಲ್ಲಿ ಕೂಸಿನ ಮನೆ ನಿರ್ಮಿಸಿದ್ದು ಕೆಲವೆಡೆ ಮಕ್ಕಳು ದಾಖಲಾಗದ ಕಾರಣ ಪ್ರಾರಂಭವಾಗಿಲ್ಲ. ತಿಪ್ಪೇನಹಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಇದೇ ವೇಳೆ ಬೋದಗಾನಹಳ್ಳಿಯ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆಕೋಣೆ ಮತ್ತು ಚರಂಡಿ ಕಾಮಗಾರಿ, ಅವಲಗುರ್ಕಿ ಗ್ರಾಪಂ ವ್ಯಾಪ್ತಿಯ ಹೊನ್ನೇನಹಳ್ಳಿ ಅಂಗನವಾಡಿ ಕಟ್ಟಡ, ಹಾರೋಬಂಡೆ ಗ್ರಾಪಂ ಸಿ.ಸಿ. ರಸ್ತೆ, ದ್ರಾಕ್ಷಿ ನಾಟಿ ಕಾಮಗಾರಿಗಳನ್ನು ವೀಕ್ಷಿಸಿದರು.

ನರೇಗಾ ಸಹಾಯಕ ನಿರ್ದೇಶಕ ರಫೀಕ್, ಜಿಪಂ ಎಡಿಪಿಸಿ ಹರೀಶ್, ತಿಪ್ಪೇನಹಳ್ಳಿ ಪಿಡಿಒ ಮುನಿರಾಜು, ಹಾರೋಬಂಡೆ ಪಿಡಿಒ ನಾರಾಯಣಸ್ವಾಮಿ, ತಾಲೂಕು ತಾಂತ್ರಿಕ ಸಂಯೋಜಕ ಮಂಜುನಾಥ, ಐಇಸಿ ಸಂಯೋಜಕಿ ಪವಿತ್ರಾ, ಇಂಜಿನಿಯರ್‌ಗಳಾದ ನಳಿನಾ, ಅಭಿಲಾಷ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net