ಹೋಲಿ ರೋಜರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

children
ಕುಂದಾಪುರದ ಹೋಲಿ ರೋಜರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಶಿಕ್ಷಕಿ ತೆರೆಸ್ ಶಾಂತಿ ಎ.ಸಿ., ಸಹಶಿಕ್ಷಕಿ ನಿಖಿತಾ ಶೆಟ್ಟಿ, ಅಂಕಿತಾ ಮತ್ತಿತರರಿದ್ದರು.
Published on

ಕುಂದಾಪುರ: ಇಲ್ಲಿನ ಹೋಲಿ ರೋಜರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಗುರುವಾರ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ತೆರೆಸ್ ಶಾಂತಿ ಎ.ಸಿ. ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರರಿಗೆ ಬಹುಮಾನ ವಿತರಿಸಲಾಯಿತು. ಸಹಶಿಕ್ಷಕಿ ನಿಖಿತಾ ಶೆಟ್ಟಿ ಮಕ್ಕಳ ದಿನಾಚರಣೆ ಕುರಿತು ತಿಳಿಸಿದರು. ಸಹಶಿಕ್ಷಕಿ ಅಂಕಿತಾ ಸ್ವಾಗತಿಸಿದರು. ಶಾಲಾ ಸಿಬ್ಬಂದಿ ನಿಮಿಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net