

ರಾಮನಗರ
ಈಜಲು ತೆರಳಿದ್ದ ಮೂವರು ಶಾಲಾ ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ರಾಮನಗರದ ಅಚಲು ಗ್ರಾಮದ ಬೆಟ್ಟದ ಸಮೀಪ ನಡೆದಿದೆ.
ಸಬಾದ್ (14), ಸುಲ್ತಾನ್ (13) , ರಿಯಾಜ್ ಖಾನ್ (15) ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇವರು ರಾಮನಗರದ ಮೆಹಬೂಬ್ ನಗರದ ನಿವಾಸಿಗಳಾಗಿದ್ದಾರೆ.
ಶಾಲೆಗೆ ರಜೆ ಇದ್ದ ಕಾರಣ 8 ಮಂದಿ ಸಹಪಾಠಿಗಳೊಂದಿಗೆ ಅಚ್ಚಲು ಗ್ರಾಮದ ಬಳಿಯ ಬೆಟ್ಟಕ್ಕೆ ಬಂದಿದ್ದಾರೆ. ಈ ಬೆಟ್ಟದಲ್ಲಿ ಸುಮಾರು 10 ಅಡಿ ಆಳದ ನೀರಿನ ಹೊಂಡ ಇದ್ದು, ಇದರಲ್ಲಿ ಮೂವರು ವಿದ್ಯಾರ್ಥಿಗಳು ಈಜಲು ಇಳಿದಿದ್ದಾರೆ. ಈ ಸಂದರ್ಭದಲ್ಲಿ ಈಜು ಬಾರದೆ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರ ಶವವನ್ನ ಅಗ್ನಿಶಾಮಕ ಸಿಬ್ಬಂದಿಗಳು ಮೇಲಕ್ಕೆ ಎತ್ತಿದ್ದಾರೆ.
ರಾಮನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.