ಬೈಲೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಮಕ್ಕಳು ಭೇಟಿ

ashrama bheti
ಬೈಲೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಮಕ್ಕಳು ಭೇಟಿ ನೀಡಿದ ಸಂದರ್ಭ ಆಶ್ರಮದ ಪೂಜ್ಯಯತಿ ಸ್ವಾಮಿ ವಿನಾಯಕಾನಂದ ಮಹಾರಾಜ್ ಅವರನ್ನು ಗೌರವಿಸಲಾಯಿತು.
Published on

ಕಾರ್ಕಳ: ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನ ಭಾರತ್-ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ವಿಹಾರಾರ್ಥವಾಗಿ ಬೈಲೂರಿನ ಶ್ರೀ ರಾಮಕೃಷ್ಣಾಶ್ರಮಕ್ಕೆ ಮಕ್ಕಳು ಭೇಟಿ ನೀಡಿದರು. ಆಶ್ರಮದ ಪೂಜ್ಯ ಯತಿ ಸ್ವಾಮಿ ವಿನಾಯಕಾನಂದ ಮಹಾರಾಜ್ ಆಶೀರ್ವಚನ ನೀಡಿದರು.

ಗಣೇಶ್ ಜಾಲ್ಸೂರು ಮಾತನಾಡಿ, ಜ್ಞಾನಭಾರತ್-ಬಾಲ ಸಂಸ್ಕಾರ ವೃಂದದ ಮುಖೇನ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಸುಧಾಕಾರ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.

ಆಶ್ರಮದ ಪೂಜ್ಯಯತಿ ಸ್ವಾಮಿ ವಿನಾಯಕಾನಂದ ಮಹಾರಾಜ್ ಅವರನ್ನು ವೃಂದದ ವತಿಯಿಂದ ಗೌರವಿಸಲಾಯಿತು. ಹಿರಿಯ-ಕಿರಿಯ ಬ್ರಹ್ಮಚಾರಿಗಳು, ಸ್ವಯಂ ಸೇವಕರು ಸಹಕರಿಸಿದರು. ವೃಂದದ ಕಾರ್ಯದರ್ಶಿ ಸಂಗೀತಾ ಕುಲಾಲ್, ಸದಸ್ಯರಾದ ದೀಪಕ್ ಕೆ.ಎಸ್, ಗಾಯತ್ರಿ ನಾಗೇಶ್, ಚೇತನಾ ಸಂದೀಪ್, ರಶ್ಮಿ ಭಟ್, ಸಂತೋಷ್ ನೆಲ್ಲಿಕಾರು, ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net