

ಮುನವಳ್ಳಿ: ಸರ್ಕಾರಿ ಶಾಲೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿವೆ. ಅದರ ಪ್ರಯೋಜನ ಪಡೆದು ಗುರಿ ಮುಟ್ಟಬೇಕು ಎಂದು ಸವದತ್ತಿ ಬಿಇಒ ಮೋಹನ ದಂಡೀನ ಹೇಳಿದರು.
ಸಮೀಪದ ತೆಗ್ಗಿಹಾಳ ಗ್ರಾಮದಲ್ಲಿ ಈಚೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ವಿಜಯಪುರದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಯಲ್ಲರಾಜ ಸಿಂಗಣ್ಣವರ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿ ಇರಬೇಕು. ಅದನ್ನು ಸಾಧಿಸಲು ನಿರಂತರ ಕಲಿಕೆ, ಶ್ರಮ ಹಾಗೂ ಪ್ರಯತ್ನ ಪಡಬೇಕು ಎಂದರು.
ಸರ್ಕಾರಿ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಥಳಿಯ ಮಹನಿಯರಿಗೆ ಸನ್ಮಾನಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಗ್ರಾಪಂ ಅಧ್ಯ ಹಣಮಂತ ಸಿಂಗನ್ನವರ ಅಧ್ಯತೆ ವಹಿಸಿದ್ದರು. ಅತಿಥಿಗಳಾಗಿ ಶಿಣ ಸಂಯೋಜಕ ಸುಧೀರ ವಾಗೇರಿ, ಸಿಆರ್ಪಿ ಜಿ.ಎಸ್. ಚಿಪ್ಪಲಕಟ್ಟಿ, ಗ್ರಾಪಂ ಉಪಾಧ್ಯೆ ಮಹಾದೇವಿ ಕರಿಗಾರ, ಸದಸ್ಯರಾದ ಅಶೋಕ ಕಂಕಣವಾಡಿ, ಪಂಚವ್ವ ಸುಂಕದ, ಶೋಭಾ ಹಿರೂರ, ಪ್ರಧಾನ ಗುರುಮಾತೆ ರೂಪಾದೇವಿ ಮಾದರ, ರಾಜು ಪಾಟೀಲ, ಶಿಕರಾದ ಬಿ.ಎಚ್.ಖೊಂದುನಾಯ್ಕ, ಪ್ರಭುಕುಮಾರ ಹನಸಿ, ಪ್ರಕಾಶ ತಂಗೋಜಿ, ರೂಪಾ ಸೂರ್ಯವಂಶಿ, ಪ್ರವಿಣ ನಲವಡೆ, ರೇಣುಕಾ ಹುಡೇದ, ತಾರಾ ಗೋಡಿ, ನಿಂಗಮ್ಮ ಕೋಟಿ ಇತರರು ಇದ್ದರು. ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು.