ಮಕ್ಕಳು ಕೀಳರಿಮೆಯಿಂದ ಮುಕ್ತರಾಗಬೇಕು

byn (1)
Published on

ಬೈಂದೂರು: ಮಕ್ಕಳ ಮುಗ್ಧತೆ ಒಂದು ಸಂಪತ್ತು. ಅದನ್ನು ಯಾವತ್ತೂ ಕಳೆದುಕೊಳ್ಳಬಾರದು. ಕೀಳರಿಮೆಯಿಂದ ಮುಕ್ತರಾಗಿ, ಕರ್ತವ್ಯ ಪ್ರಜ್ಞೆ ಬೆಳೆಸಿಕೊಂಡು, ಭವಿಷ್ಯದ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾದರೆ ಬದುಕಿನಲ್ಲಿ ಯಶಸ್ಸು ಖಚಿತ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ ಜಿ.ಬಿ. ಹೇಳಿದರು.

ಅರೆಶಿರೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಳಿಹೊಳೆ ಗ್ರಾಪಂ ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಕಪ್ಪಾಡಿ ಪ್ರಗತಿಪರ ಕೃಷಿಕ ರಾಮ ಪೂಜಾರಿ, ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಮುಖ್ಯಶಿಕ್ಷಕ ದಿನಕರ ನಾಯ್ಕ, ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ವಾಸುದೇವ ಉಡುಪ, ರಾಮ ನಾಯ್ಕ ಕೆ.ಬಿ. ಮಾತನಾಡಿದರು. ಶಿಬಿರಾರ್ಥಿಗಳಾದ ಶೇಖರ್, ಪ್ರತೀಕ್, ರಕ್ಷಿತಾ ಎಂ.ಜೆ. ಅನಿಸಿಕೆ ಹಂಚಿಕೊಂಡರು. ಘಟಕದ ನಾಯಕ ರಿತ್ವಿಕ್ ಮತ್ತು ತನುಶ್ರೀ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ನಾಗರಾಜ ಅಡಿಗ ಸ್ವಾಗತಿಸಿದರು. ಶಿಬಿರಾರ್ಥಿ ಸನಿಕಾ ಮತ್ತು ಸಂಜನಾ ನಿರೂಪಿಸಿದರು. ನಿರೂಪಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net