ಮಕ್ಕಳನ್ನು ಧರ್ಮದಡಿ ಸಂಸ್ಕಾರ ನೀಡಿ

4-SanduruP1
ಸಂಡೂರಿನ ಶ್ರೀರಾಘವೇಂದ್ರ ಮಠದಲ್ಲಿ ಶ್ರೀಗಳ ಪ್ರವಚನ ನೀಡಿದರು. ಬದ್ರಿ ನಾರಾಯಣ ಆಚಾರ್, ಬೊಮ್ಮಘಟ್ಟ ಹಯವದನಾಚಾರ್, ಸುಬ್ಬರಾವ್ ಶರಾಫ್, ಡಾ.ಸಿ.ಆರ್.ಗೋಪಾಲ್, ಡಾ.ಎಸ್.ಜೆ.ಗೋಪಾಲ ಕೃಷ್ಣ ಇದ್ದರು.
Published on

ಸಂಡೂರು: ಪಟ್ಟಣದ ಶಿವಪುರ ದೇವಸ್ಥಾನ, ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಶಿವಮೊಗ್ಗ ಜಿಲ್ಲೆಯ ಬಾಳಗಾರು ಮಠದ ಶ್ರೀಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದಂಗಳವರು ಬೇಟಿ ನೀಡಿ ಸಂಸ್ಥಾನ ಪೂಜೆ ಸೋಮವಾರ ನೆರವೇರಿಸಿದರು.

ಶ್ರೀಗಳು ಮಾತನಾಡಿ, ಎಲ್ಲ ಸಮಾಜದವರೊಂದಿಗೆ ಬೆರೆತು ಬಾಳಬೇಕು. ಎಲ್ಲ ಸಮಾಜದವರು ಮಕ್ಕಳನ್ನು ಧರ್ಮಗಳ ಹಿನ್ನೆಲೆಯಲ್ಲಿ ಸಂಸ್ಕಾರ ಬೆಳೆಸಬೇಕು. ಅಲೌಕಿಕ ಸಾಧನೆಯ ಜತೆಗೆ ಲೌಕಿಕ ಸಾಧನೆಯನ್ನು ಮಾಡಿ. ಧರ್ಮ ಮಾರ್ಗದಲ್ಲಿ ಹಣವನ್ನು ಗಳಿಸಿ, ಉಳಿಸಿ, ಬೆಳೆಸಿ, ಬಳಸಬೇಕು.

ಗಳಿಸಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೆ ಸದ್ವಿನಿಯೋಗ ಮಾಡಬೇಕು. ಅದರಲ್ಲೂ ಹಸಿದವರ ದಿನ ದಲಿತರು, ಅನಾಥರು ಹಾಗೂ ಅನಾರೋಗ್ಯ ಪೀಡಿತರಿಗೆ ಯಾವ ಪ್ರತಿ ಫಲಾಪೇಕ್ಷೆ ಇಲ್ಲದೆಯೇ ದಾನಮಾಡಿ ಎಂದರು.

ಬ್ರಾಹ್ಮಣ ಸಮಾಜದ ಮುಖಂಡರಾದ ಬದ್ರಿ ನಾರಾಯಣ ಆಚಾರ್, ಬೊಮ್ಮಘಟ್ಟ ಹಯವದನಾಚಾರ್, ಸುಬ್ಬರಾವ್ ಶರಾಫ್, ಡಾ.ಸಿ.ಆರ್.ಗೋಪಾಲ್, ಡಾ.ಎಸ್.ಜೆ.ಗೋಪಾಲಕೃಷ್ಣ, ನಾರಾಯಣಚಾರ್, ಬದ್ರಿ ನಾರಾಯಣ, ವಿಷ್ಣುತೀರ್ಥ ಆಚಾರ್ ಬಾಗೋಡಿ, ವಾಜೇಂದ್ರಾಚಾರ್ ಬಾಗೋಡಿ,

ವಿಜೇಂದ್ರರಾವ್, ಪಾಂಡುರಂಗರಾವ್, ಎಸ್.ಪಿ.ಗುರುರಾಜ ಶರಾಫ್, ಔದುಂಬರ್ ಭಟ್, ಪ್ರಾಣೇಶ್ ಆಚಾರ್ ಮುತ್ತಿಕಿ, ಪ್ರಾಣೇಶ್ ಆಚಾರ್ ಬಲುಕುಂದಿ, ವೆಂಕಟೇಶ್ ತಾಂಬ್ರಪರ್ಣಿ, ಗುರುರಾಜ ತತ್ರಿ, ಸುರೇಶ್ ಆಚಾರ್, ಎಚ್.ಕೆ.ರಘು, ಶ್ರೀನಾಥ ಶಾನಭೋಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net