

ಹಳಿಯಾಳ: ತಾಯಿಯ ಕೊನೆಯ ಆಸೆಯಂತೆ ಆಕೆ ಮೃತಪಟ್ಟ ನಂತರ ಮಕ್ಕಳು ಆಕೆಯ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿರುವ ಘಟನೆ ತಾಲೂಕಿನ ಸಂಕನಕೊಪ್ಪ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಂಕನಕೊಪ್ಪ ಗ್ರಾಮದ ನಿವಾಸಿಯಾದ ಯಲ್ಲವ್ವ ನಾರಾಯಣ ಬಣದೂಕರ್ (80) ಎಂಬ ವೃದ್ದೆಯ ಕಣ್ಣುಗಳನ್ನು ಧಾರವಾಡದ ಎಸ್.ಜಿ.ಎಂ. ನೇತ್ರ ಭಂಡಾರ ಸಂಸ್ಥೆಗೆ ದಾನ ಮಾಡಲಾಗಿದೆ.
ಎರಡು ವರ್ಷ ಹಿಂದೆ ಶಿಬಿರ ಒಂದರಲ್ಲಿ ನೇತ್ರದಾನ ಮಾಡಲು ಎಸ್.ಜಿ.ಎಂ.ನೇತ್ರ ಭಂಡಾರಕ್ಕೆ ಯಲ್ಲವ್ವ ಶಪಥ ಪತ್ರ ನೀಡಿದ್ದರಂತೆ. ಬಳಿಕ 8 ತಿಂಗಳ ಹಿಂದಿನಿಂದ ತನ್ನ ಕುಟುಂಬಸ್ಥರಿಗೆ ತನ್ನ ಕೊನೆ ಆಸೆಯಂತೆ ಕಣ್ಣುಗಳನ್ನು ದಾನ ಮಾಡಿ ನನ್ನ ಕಣ್ಣಿನಿಂದ ಬೇರೆಯವರಿಗೆ ಸಹಾಯವಾಗಲಿ ಎಂದು ಯಲ್ಲವ್ವ ಪದೆ ಪದೆ ಹೇಳುತ್ತಿದ್ದಳು ಎಂದು ಕುಟುಂಬಸ್ಥರು ಮಾಹಿತಿ ನೀಡಿದರು. ಗುರುವಾರದಂದು ತಾಯಿ ಹೃದಯಾಘಾತದಿಂದ ಮೃತಪಟ್ಟರು. ಅವರಿಗೆ ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಪುತ್ರ ಚಂದ್ರು ಬಣಸೂರು ನೇತ್ರ ಭಂಡಾರ ಸಂಸ್ಥೆಗೆ ಮಾಹಿತಿ ನೀಡಿ, ಕಣ್ಣುಗಳನ್ನು ದಾನ ಮಾಡಿದ್ದಾರೆ.
ಇದನ್ನೂ ಓದಿ: 32 ಗ್ರಾಮಗಳಿಗೆ ನೀರಿಲ್ಲ
ನನ್ನ ಹೆತ್ತವ್ವ ಯಲ್ಲವ್ವ ನೇತ್ರದಾನ ಮಾಡಲಾಗಿದೆ. ಆಕೆಯ ಕಣ್ಣುಗಳು ಇನ್ನೊಬ್ಬರ ದೃಷ್ಠಿಯ ಅಂಧಕಾರವನ್ನು ದೂರವಾಗಿಸಲಿವೆ. ಇದು ತಮ್ಮ ಕುಟುಂಬಕ್ಕೆ ತಾಯಿಯನ್ನು ಕಳೆದುಕೊಂಡ ದುಃಖದಲ್ಲೂ ಸಾರ್ಥಕತೆಯ ಕಾರ್ಯ ಎನಿಸಿದೆ. ಇತರರಿಗೂ ಮಾದರಿಯಾಗಲಿದೆ ಎನ್ನುವ ಹೆಮ್ಮೆ ಇದೆ. ಚಂದ್ರು ಬಣದೂಕರ ಯಲ್ಲವ್ವ ಪುತ್ರ