ಮಕ್ಕಳಿಗೆ ಸಿಹಿ ನೀಡಿ ಸ್ವಾಗತ

ಮಕ್ಕಳಿಗೆ ಸಿಹಿ ನೀಡಿ ಸ್ವಾಗತ
Published on

ಹೊಳೆನರಸೀಪುರ: ತಾಲೂಕಿನ ಜೋಡಿಗುಬ್ಬಿ ಪ್ರೌಢಶಾಲೆಯಲ್ಲಿ ತರಗತಿಗಳು ಪುನರಾರಂಭವಾದ ಹಿನ್ನೆಲೆ ಮಕ್ಕಳಿಗೆ ಸಿಹಿ, ಪುಸ್ತಕ, ಸಮವಸ್ತ್ರ ನೀಡಿ ಶಿಕ್ಷಕರು ಸ್ವಾಗತಿಸಿದರು.

ಮುಖ್ಯಶಿಕ್ಷಕ ಮಧುಕೇಶ್ವರ್ ಮಾತನಾಡಿ, ನಮ್ಮ ಶಾಲೆಗೆ 10ನೇ ತರಗತಿಯಲ್ಲಿ ಶೇ. 100 ಫಲಿತಾಂಶ ದೊರೆತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲು ಮಾಡುವಂತೆ ಕೋರಿದರು.

ಶಾಲೆಯಲ್ಲಿ ಬಿಸಿಯೂಟ, ಶೈಕ್ಷಣಿಕ ಪ್ರವಾಸ, ಅತ್ಯುತ್ತಮ ಬೋಧನೆ, ಪಠ್ಯೇತರ ಚಟುವಟಿಕೆ, ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅತ್ಯುತ್ತಮ ಅವಕಾಶಗಳಿದ್ದು, ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ಮಧ್ಯಾಹ್ನ ಎಲ್ಲ ವಿದ್ಯಾರ್ಥಿಗಳಿಗೆ ಪಾಯಸದ ಊಟ ನೀಡಲಾಯಿತು. ಶಿಕ್ಷಕ ಯು.ಸಿ.ದರ್ಶನ್, ನಳಿನಾಕ್ಷಿ, ಪಿ.ಎಸ್. ದಿನೇಶ್, ಸೋಮಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net