ಶಿಕ್ಷಕರಿಗೆ ಮಕ್ಕಳೇ ನಿಜವಾದ ಆಸ್ತಿ

hbr
Published on

ಹೆಬ್ರಿ: ಶಿಕ್ಷಕರಿಗೆ ಮಕ್ಕಳೇ ನಿಜವಾದ ಆಸ್ತಿ. ಮಕ್ಕಳು ಪ್ರಾವಾಣಿಕವಾಗಿ ಕಲಿತು ಉತ್ತಮ ಉದ್ಯೋಗವನ್ನು ಪಡೆದು ಸಂಸ್ಕಾರಯುತ ಜೀವನವನ್ನು ನಡೆಸುತ್ತಾ ದೇಶಸೇವೆಯಲ್ಲಿ ತೊಡಗಿಸಿಕೊಂಡರೆ ಅದೇ ಮಕ್ಕಳು ಶಿಕ್ಷಕರಿಗೆ ನೀಡುವ ದೊಡ್ಡ ಗೌರವ. ವ್ಯಕ್ತಿಯ ಸಾಧನೆ ಹಿಂದೆ ಗುರುವಿನ ಪಾತ್ರ ಮಹತ್ತರವಾದದ್ದು ಎಂದು ಮುದ್ರಾಡಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದರು.

ಮುದ್ರಾಡಿ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಶಿಕ್ಷಕರಿಗೆ ಶುಭಾಶಯ ಪತ್ರ, ಪೆನ್ನು ಮತ್ತು ಗುಲಾಬಿ ಹೂವು ನೀಡಿ ಗೌರವಿಸಿದರು. ವಿದ್ಯಾರ್ಥಿ ನಾಯಕ ಕಾರ್ತಿಕ್ ಸ್ವಾಗತಿಸಿ, ಪ್ರತೀಕ್ಷಾ ಕುಲಾಲ್ ವಂದಿಸಿದರು. ಅಂಜಲಿ, ಆಯುಷಾ, ರೇಷ್ಮಾ, ತನಿಯಾ, ಸಿಂಚನಾ ಹಾಡಿನ ಮೂಲಕ ಶಿಕ್ಷಕರ ಗುಣಗಾನ ವಾಡಿದರು. ವಿದ್ಯಾರ್ಥಿನಿ ಸ್ನೇಹಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net