

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಮುಂದಿನ ನವರಾತ್ರಿ ಕಾರ್ಯಕ್ರಮವು ದೇವಸ್ಥಾನದ ಸ್ವಂತ ಕಟ್ಟಡದಲ್ಲೇ ನಡೆಯಬೇಕು. ಇದಕ್ಕೆ ಭಕ್ತರ ಸಹಕಾರ ಅಗತ್ಯ. ಮಕ್ಕಳಿಗೆ ಧಾರ್ಮಿಕ ಕಾರ್ಯಕ್ರಮಗಳತ್ತ ಒಲವು ಮೂಡಿಸಿ. ಅಂಕಗಳಿಕೆ ಮಾನದಂಡವಲ್ಲ ಎಂದು ಕೊಕ್ಕರ್ಣೆ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಶರನ್ನವರಾತ್ರಿ ಉತ್ಸವ ಸಮಿತಿ ಗೌರವಾಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಹೇಳಿದರು.
ಕ್ಷೇತ್ರದಲ್ಲಿ ನಡೆದ 32ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಹಾಗೂ ತೃತೀಯ ವರ್ಷದ ಕೊಕ್ಕರ್ಣೆ ದಸರಾ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಡುಬಿದಿರೆ ಎಸ್‌ಕೆಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್ಯ ಉದ್ಘಾಟಿಸಿದರು. ಶಾಸಕ ಯಶ್‌ಪಾಲ್ ಎ.ಸುವರ್ಣ, ಅಭಿಜಿತ್ ಸೂರಾಲು ಅರಮನೆ, ಬಿ. ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಪ್ರತಾಪ್ ಹೆಗ್ಡೆ ಮಾರಾಳಿ, ನಿತ್ಯಾನಂದ ಒಳಕಾಡು, ಉಮೇಶ್ ಪೂಜಾರಿ ಹುಬ್ಬಳ್ಳಿ, ಪ್ರಸನ್ನ ಶೆಟ್ಟಿ ಹಳ್ಳಿ, ಡಾ.ಸುನೀತಾ ಡಿ.ಶೆಟ್ಟಿ, ಲಾವಣ್ಯ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ ಶ್ಯಾನುಭಾಗ್ ಸ್ವಾಗತಿಸಿದರು. ಮಹೇಶ್ ಆಚಾರ್ಯ ಚೆಗ್ರಿಬೆಟ್ಟು ವಂದಿಸಿದರು. ರಮೇಶ ನಾಯ್ಕ ನಿರೂಪಿಸಿದರು. ಚಂದ್ರಹಾಸ ಮೊಗವೀರಪೇಟೆ ಮತ್ತು ಗಣೇಶ್ ನಾಯ್ಕ ಸಹಕರಿಸಿದರು. ಚಂಡಿಕಾ ಹೋಮ, ಶಾರದಾ ವಿಗ್ರಹ ಪ್ರತಿಷ್ಠಾಪನೆ, ಅಕ್ಷರಭ್ಯಾಸ, ಚಂಡಿಕಾ ಹೋಮ ಪೂರ್ಣಾಹುತಿ, ಅನ್ನಸಂತರ್ಪಣೆ ಸಹಿತ ವಿವಿಧ ಕಾರ್ಯಕ್ರಮ ನಡೆಯಿತು.
ದೇವರನ್ನು ಆರಾಧಿಸುವುದರ ಜತೆಗೆ ಪ್ರಕೃತಿ ಆರಾಧಿಸಿ. ಪರಿಸರ ಮಾತ್ರ ಮಲಿನಗೊಳಿಸಬಾರದು. ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು. ನವರಾತ್ರಿಯಲ್ಲಿ ದೇವಿ ಆರಾಧನೆಯಿಂದ ಸಕಲ ದುಷ್ಟ ಶಕ್ತಿ ನಾಶವಾಗುವುದರ ಜತೆಗೆ ಎಲ್ಲ ಕಾರ್ಯಗಳಲ್ಲೂ ಶುಭವಾಗುತ್ತದೆ. -ಡಾ.ರಾಮಕೃಷ್ಣ ಆಚಾರ್ಯ, ಎಸ್‌ಕೆಎಫ್ ವ್ಯವಸ್ಥಾಪಕ ನಿರ್ದೇಶಕ
-ಡಾ.ರಾಮಕೃಷ್ಣ ಆಚಾರ್ಯ, ಎಸ್‌ಕೆಎಫ್ ವ್ಯವಸ್ಥಾಪಕ ನಿರ್ದೇಶಕ