

ಬೆಂಗಳೂರು: ಸಂಪ್ ತೆರೆದು ಟ್ಯಾಂಕರ್ನಿಂದ ನೀರು ತುಂಬಿಸುವಾಗ ಹತ್ತಿರದಲ್ಲೇ ನಡೆದು ಹೋಗುತ್ತಿದ್ದ ಮಗು ಸಂಪ್ ಒಳಗೆ ಬಿದ್ದಿರುವ ಆತಂಕಕಾರಿ ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ನಡೆದಿದೆ.
ಸೋಮವಾರ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ಯಾಂಕರ್ ಮೂಲಕ ರಸ್ತೆ ಪಕ್ಕದಲ್ಲಿದ್ದ ಹೋಟೆಲ್ ಒಂದರ ಸಂಪಿಗೆ ನೀರನ್ನು ತುಂಬಿಸಲಾಗುತ್ತಿತ್ತು. ಅಕ್ಕಪಕ್ಕದಲ್ಲಿ ಜನ ಓಡಾಡುತ್ತಿದ್ದರೂ ಮಗು ಸಂಪಿನೊಳಗೆ ಬಿದ್ದಿರುವುದು ಯಾರಿಗೂ ಗೊತ್ತಾಗಿರಲಿಲ್ಲ.
ಕೆಲ ಹೊತ್ತಿನ ನಂತರ ಹೊರಬಂದ ಮಗುವಿನ ತಂದೆ ಸಂಪ್ನಲ್ಲಿ ಮಗು ಬಿದ್ದಿರುವುದನ್ನು ಗಮನಿಸಿ ತಕ್ಷಣ ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ದುರಂತ ಘಟನೆಯಲ್ಲಿ ಮಗು ಬದುಕುಳಿದಿದೆ. (ದಿಗ್ವಿಜಯ ನ್ಯೂಸ್)