ಬಾಲ್ಯ ವಿವಾಹಗಳಿಗೆ ಕಡಿವಾಣ ಅಗತ್ಯ- ತಹಸೀಲ್ದಾರ್ ಸೂಚನೆ

Gangavati Child Marriage Meeting
ಗಂಗಾವತಿ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹ ತಡೆ ತಾಲೂಕು ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿದರು.
Published on

ಗಂಗಾವತಿ: ಬಾಲ್ಯವಿವಾಹ ಪದ್ಧತಿಗೆ ಕಡಿವಾಣ ಹಾಕಬೇಕಿದ್ದು, ಸಾಮೂಹಿಕ ವಿವಾಹ ಸಂದರ್ಭದಲ್ಲಿ ವಯಸ್ಸಿನ ದಾಖಲಾತಿ ಪರಿಶೀಲಿಸುವಂತೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಹೇಳಿದರು.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎನ್‌ಜಿಒಗಳ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಬಾಲ್ಯ ವಿವಾಹ ತಡೆಯುವ ತಾಲೂಕು ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಗ್ರಾಪಂ ಮಟ್ಟದಲ್ಲಿ ನಿರ್ವಹಿಸುವ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಸಭೆ ಆಯೋಜನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದು, ಬಾಲ್ಯ ವಿವಾಹಗಳ ಕಡಿವಾಣಕ್ಕೆ ಅಧಿಕಾರಿಗಳು ಗಮನಹರಿಸಬೇಕು. ಸಾಮೂಹಿಕ ವಿವಾಹ ಆಯೋಜಿಸುವ ಸಮಿತಿಗಳ ನೋಂದಣಿ ಆಗಿರಬೇಕಿದ್ದು, ವಯಸ್ಸಿನ ದಾಖಲಾತಿ ಕಡ್ಡಾಯ ಪಡೆಯಬೇಕಿದೆ ಎಂದರು.

ಸಭೆಯಲ್ಲಿ ಬಾಲ್ಯವಿವಾಹಗಳ ಅನುಪಾಲನೆ, ರಕ್ಷಣೆ ಕಾಲುವೆ ಸಮಿತಿ ಆಯೋಜನೆ, ದಾಖಲಾತಿ ಸಂಗ್ರಹ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಬಾಲ್ಯ ವಿವಾಹ ನಿಯಂತ್ರಣ ವಿಚಾರದಲ್ಲಿ ಕೈಗೊಂಡ ಕ್ರಮಗಳ ಕುರಿತು ಸಿಡಿಪಿಒ ಪ್ರಸನ್ನಕುಮಾರ ಮಾಹಿತಿ ನೀಡಿದರು.

ಮೇಲ್ವಿಚಾರಕಿ ಶರಣಮ್ಮ, ಶಿಕ್ಷಣ ಸಂಯೋಜಕ ಎಚ್.ಸಿ.ರಾಘವೇಂದ್ರ, ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಚೈಲ್ಡ್ ಂಡ್ ಇಂಡಿಯಾ ತಾಲೂಕು ಸಂಯೋಜಕ ಪ್ರಕಾಶ ಕಡಗದ್, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಪ್ರತಿನಿಧಿ ರವಿಕುಮಾರ ಪವಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net