ಬಾಲಕಿಯ ಮೇಲೆ ಅತ್ಯಾಚಾರ  ಆಳಂದನಲ್ಲಿ ಬಿಗುವಿನ ಸ್ಥಿತಿ : ಅಘೋಷಿತ ಬಂದ್ ವಾತಾವರಣ

IMG-20230825-WA0028
Published on

ದುಷ್ಕರ್ಮಿ ಬಂಧನಕ್ಕೆ ಆಗ್ರಹಿಸಿ ರೊಚ್ಚಿಗೆದ್ದ ಜನರಿಂದ ಪೊಲೀಸ್ ಠಾಣೆಗೆ ಮುತ್ತಿಗೆ | ಸ್ಥಳಕ್ಕೆ ಎಸ್ಪಿ  ಇಶಾ ಪಂತ್ ದೌಡು


ವಿಜಯವಾಣಿ ಸುದ್ದಿಜಾಲ ಕಲಬುರಗಿ
 ಆರು ವರ್ಷದ ಬಾಲಕಿಯ ಮೇಲೆ ಕಿರಾತಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನುಷ ಘಟನೆ ನಡೆದಿದೆ. ಆಘಾತಕಾರಿ ಸುದ್ದಿ ಕೇಳಿ ಕೆರಳಿದ ಜನರು ಆಳಂದ ಪೊಲೀಸ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಆಳಂದ ಪಟ್ಟಣದಲ್ಲಿ  ಶುಕ್ರವಾರ ಬಿಗುವಿನ ನಿರ್ಮಾಣಗೊಂಡು ಅಘೋಷಿತ ಬಂದ್ ಆಗಿತ್ತು.
ಒಂದು ಧರ್ಮದ ಬಾಲಕಿಯರ ಮೇಲೆ ಅನ್ಯಕೋಮಿನ ವ್ಯಕ್ತಿ. ಇಂತಹ ದುಷ್ಕೃತ್ಯವೆಸಗಿದ್ದಾನೆ ಎಂಬ ಸುದ್ದಿ ಹರಡುತ್ತಲೇ ಆಳಂದನಲ್ಲಿ ಜನರು ಜಮಾಗೊಳ್ಳಲು ಆರಂಭಿಸಿದರು. ಕೂಡಲೇ ಆರೋಪಿತನನ್ನು ಬಂಧಿಸಬೇಕು ಎಂದು ಕೂಗು ಹಾಕಲು ಆರಂಭಿಸಿದರು. ಇದರಿಂದಾಗಿ  ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಶ್ರೀರಾಮ ಮಾರ್ಕೇಟ್, ಬಸ್ ನಿಲ್ದಾಣ ಸುತ್ತಲಿನ ಪ್ರದೇಶಗಳಲ್ಲಿನ ಅಂಗಡಿ-ಮುAಗಟ್ಟುಗಳನ್ನು ಜನರು ಸ್ವಯಂ ಪೇರಿತರಾಗಿ ಬಂದ್ ಮಾಡುವ ಮೂಲಕ ಹೋರಾಟಕ್ಕೆ ಕಾವು ನೀಡಿದರು. ರೊಚ್ಚಿಗೆದ್ದ ಜನರು  ಪೊಲೀಸ್ ಠಾಣೆಗೆ ತೆರಳಿಸಿ ಪ್ರತಿಭಟನೆ ನಡೆಸಿದರು. ಮುತ್ತಿಗೆ ಹಾಕಲು ಸಹ ಯತ್ನಿಸಿದರು. ಆರೋಪಿತರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಮಾಹಿತಿ ಅರಿಯುತ್ತಲೇ ಎಸ್ಪಿ ಇಶಾ ಪಂತ್ ಇನ್ನಿತರ ಹಿರಿಯ ಅಧಿಕಾರಿಗಳು ಆಳಂದಕ್ಕೆ ದೌಡಾಯಿಸಿದ್ದಾರೆ. ಡಿವೈಎಸ್ಪಿ,  ಸಿಪಿಐಗಳು ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿ ಬಿಡಾರಹೂವಿ ಪರಿಸ್ಥಿತಿ ನಿಯಂತ್ರಿಸಲು ಪಯತ್ನಿಸುತ್ತಿದ್ದಾರೆ. ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net