ಆಚಾರ್ಯ ಪಾಠಶಾಲೆಯ ಟಾಪರ್‌ ಲಿಸ್ಟ್​ಗೆ ಸೇರಿದ ಬಾಲ ನಟ ಓಂ

Master OM
Published on

ಬೆಂಗಳೂರು: ಸಿನಿಮಾ ಹಾಗೂ ಫ್ಯಾಷನ್‌ ಕ್ಷೇತ್ರದಲ್ಲಿ ಸಖತ್‌ ಬ್ಯುಸಿಯಾಗಿದ್ದ ಬಾಲ ನಟ ಓಂ, 10 ನೇ ತರಗತಿಯ ಬೋರ್ಡ್‌ ಎಕ್ಸಾಂ ( ಐಸಿಎಸ್‌ಇ ಸಿಲಬಸ್)ನಲ್ಲಿ 97 % ಗಳಿಸುವ ಮೂಲಕ ಆಚಾರ್ಯ ಪಾಠಶಾಲೆಯ ಟಾಪರ್‌ಗಳಲ್ಲಿ ಒಬ್ಬನಾಗಿದ್ದಾನೆ.

Master OM

ಕನ್ನಡ ವಿಷಯದಲ್ಲೂ ಅತಿ ಹೆಚ್ಚು ಅಂಕ: ಐಸಿಎಸ್‌ಸಿ ಸಿಲಬಸ್‌ನಲ್ಲಿ ಓದುವವರು ಕನ್ನಡದಲ್ಲಿ ವೀಕ್‌ ಅಲ್ಲ, ಎಂಬುದನ್ನು 100 ಕ್ಕೆ 97 ಅಂಕಗಳನ್ನು ಗಳಿಸುವ ಮೂಲಕ ಪ್ರೂವ್‌ ಮಾಡಿರುವ ಓಂ, ಗಣಿತದಲ್ಲಿ, ಇತಿಹಾಸದಲ್ಲಿ 100ಕ್ಕೆ 99 ಮಾರ್ಕ್ಸ್‌ ಗಳಿಸಿದ್ದಾನೆ. ಇನ್ನುಳಿದ ವಿಷಯಗಳೆಲ್ಲದರಲ್ಲೂ ಕ್ರಮವಾಗಿ 95, 96, 97 ಹೀಗೆ ಪಡೆದು ಶಾಲೆಯ ಟಾಪರ್‌ ಲಿಸ್ಟ್​ಗೆ ಸೇರಿದ್ದಾನೆ.

ಬಸವನಗುಡಿಯ ಆಚಾರ್ಯ ಪಾಠಶಾಲೆಯ ವಿದ್ಯಾರ್ಥಿಯಾಗಿರುವ ಓಂ, ಲೀ, ವೇಷಧಾರಿ, ಕಾಳಿದಾಸ ಕನ್ನಡ ಮೇಷ್ಟ್ರು ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾ ಹಾಗೂ 35ಕ್ಕೂ ಜಾಹೀರಾತುಗಳಲ್ಲಿ ನಟಿಸಿದ್ದು, ಇದರ ಜೊತೆಜೊತೆಗೆ ಓದನ್ನು ಕೂಡ ಬ್ಯಾಲೆನ್ಸ್‌ ಮಾಡಿದ್ದಾರೆ. ವೀಕೆಂಡ್‌ಗಳಲ್ಲಿ ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದ ಚತುರ ಈತ.

ಬೋರ್ಡ್‌ ಎಕ್ಸಾಂನಲ್ಲಿ ಟಾಪರ್‌: ಈ ಸಾಲಿನ ಬೋರ್ಡ್‌ ಎಕ್ಸಾಂನಲ್ಲಿ ( ಐಸಿಎಸ್‌ಇ ಸಿಲಬಸ್‌) ಅತ್ಯಧಿಕ ಅಂಕಗಳನ್ನು ಗಳಿಸಿರುವ ಓಂ, ವ್ಯಾಸಂಗದ ಜೊತೆಜೊತೆಗೆ ಶಾಲೆಯ ಕ್ಯಾಪ್ಟನ್‌ಶಿಪ್‌ ಜವಾಬ್ದಾರಿ, ಎಪಿಎಸ್‌ ಕೌನ್ಸಿಲ್‌ನ ಜವಾಬ್ದಾರಿ ಕೂಡ ವಹಿಸಿಕೊಂಡು ಎಪಿಎಸ್‌ ಶಾಲೆಯ ಕಲ್ಚರಲ್‌ ಹಾಗೂ ಸಾಮಾಜಿಕ ಕಾಯಕ್ರಮಗಳಲ್ಲೂ ಭಾಗವಹಿಸಿರುವುದಲ್ಲದೇ, ಬೆಂಗಳೂರು ಸೌತ್‌ ಸ್ಕೂಲ್‌ ಲೀಡರ್ಸ್‌ ಸಮಾವೇಶದಲ್ಲೂ ಶಾಲೆಯ ಪ್ರತಿನಿಧಿಯಾಗಿ ಪಾಲ್ಗೊಂಡ ಹೆಗ್ಗಳಿಕೆ ಓಂನದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net