ಶೃಂಗೇರಿಯಲ್ಲಿ ಅಪ್ರಾಪ್ತೆ ಮೇಲೆ 30ಕ್ಕೂ ಹೆಚ್ಚು ಜನರಿಂದ ಗ್ಯಾಂಗ್​ರೇಪ್ ಪ್ರಕರಣಕ್ಕೆ ಸ್ಫೋಟಕ ತಿರುವು!

Shrungrei Girl Case
Published on

ಚಿಕ್ಕಮಗಳೂರು: ಶೃಂಗೇರಿ ಅಪ್ರಾಪ್ತ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವು ಸ್ಪೋಟಕ ತಿರುವು ಪಡೆದುಕೊಂಡಿದೆ. ಆರಂಭದಲ್ಲಿ ಚಿಕ್ಕಮ್ಮಳೇ ಪ್ರಮುಖ ಆರೋಪಿ ಎನ್ನಲಾಗಿತ್ತು. ಆದರೆ, ಆಕೆ ಸಂತ್ರಸ್ತೆಯ ಚಿಕ್ಕಮ್ಮಳಲ್ಲ, ಬದಲಾಗಿಯೇ ಆಕೆಯೇ ಹೆತ್ತ ತಾಯಿ ಎಂಬುದು ಬಹಿರಂಗವಾಗಿದೆ.

ಪ್ರಕರಣದಲ್ಲಿ ಹೆತ್ತಮ್ಮಳನೇ ಆರೋಪಿಯಾಗಿದ್ದಾಳೆ. ತಾಯಿಯಿಂದಲೇ ಅತ್ಯಾಚಾರಕ್ಕೆ ಕುಮ್ಮಕ್ಕು ಸಿಕ್ಕಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಬಂಧನವಾದಾಗ ಆರೋಪಿ ಬಾಲಕಿಯ ಚಿಕ್ಕಮ್ಮ ಎಂದು ಹೇಳಿ ಕೊಂಡಿದ್ದಳು. ಆದರೆ, ಪೊಲೀಸರ ತನಿಖೆಯಲ್ಲಿ ಚಿಕ್ಕಮ್ಮ ಅಲ್ಲ ತಾಯಿ ಅನ್ನೋದು ಬೆಳಕಿಗೆ ಬಂದಿದೆ.

ಅತ್ಯಾಚಾರ ಪ್ರಕರಣ ಸಂಬಂಧ ಶೃಂಗೇರಿ ಠಾಣೆಯಲ್ಲಿ ಜನವರಿ 30 ರಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ 32 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಿಳೆ ಉತ್ತರ ಕರ್ನಾಟಕ ಮೂಲದವಳು. ಈಕೆ ಶೃಂಗೇರಿ ಮೂಲದ ವ್ಯಕ್ತಿಗೆ ಎರಡನೇ ಮದುವೆ ಆಗಿದ್ದಳು.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಕೆಯನ್ನು ಬಂಧಿಸಲಾಗಿತ್ತು. ತನಿಖೆ ವಿಳಂಬ ಹಿನ್ನೆಲೆ ಇನ್ಸ್​ಪೆಕ್ಟರ್​ರನ್ನು ಅಮಾನತ್ತು ಮಾಡಿ, ತನಿಖೆಯ ಜವಬ್ದಾರಿಯನ್ನು ಎಎಸ್ಪಿ ಶೃತಿ ಅವ್ರಿಗೆ ನೀಡಲಾಗಿತ್ತು. ಇದೀಗ ಮಹತ್ವದ ಅಂಶ ಬೆಳಕಿಗೆ ಬಂದಿದೆ.

ಘಟನೆ ಹಿನ್ನೆಲೆ ಏನು?

ಇಡೀ ದೇಶವನ್ನೇ ಬೆಚ್ಚಿ ಬಿಳಿಸಿದ್ದ ಪೋಸ್ಕೋ ಪ್ರಕರಣವಿದು. ಶೃಂಗೇರಿಯಲ್ಲಿ ವಾಸವಿದ್ದ ಶಿಗ್ಗಾವಿ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ಗೋಚವಳ್ಳಿ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಶೃಂಗೇರಿ ಪೊಲೀಸ್​ ಠಾಣೆಯಲ್ಲಿ ಜನವರಿ 30ರಂದು ಎಫ್​ಐಆರ್​ ದಾಖಲಾಗಿದೆ. 15 ವರ್ಷದ ಬಾಲಕಿ ಮೇಲೆ ಕಿಕ್ರೆ ಸ್ಮಾಲ್​ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್​ ಆನೆಗುಂದ, ಹೊಳೆಕೊಪ್ಪದ ವಿಕಾಶ್​, ಮಣಿಕಂಠ, ಸಂಪತ್​ ನೆಮ್ಮಾರ್, ಶೃಂಗೇರಿಯ ಅಶ್ವತ್​ ಗೌಡ, ಆನೆಗುಂದದ ರಾಜೇಶ್​, ಅಮಿತ್​, ಕುರುಬಗೆರೆಯ ಸಂತೋಷ, ಹೆಗ್ಗದ್ದೆಯ ದೀಕ್ಷಿತ್​, ಹೆರೂರಿನ ಸಂತೋಷ್​, ನಿರಂಜನ್​ ಕಿಗ್ಗ, ಶೃಂಗೇರಿಯ ನಯನಗೌಡ, ಅಭಿಗೌಡ, ಖಾಂಡ್ಯದ ಯೋಗೀಶ್​ ಸೇರಿ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿ ಲೈಂಕಿಗ ದೌರ್ಜನ್ಯವೆಸಗಿದ್ದಾರೆ.

ಈ ದುಷ್ಕೃತ್ಯಕ್ಕೆ ಸಂತ್ರಸ್ತ ಬಾಲಕಿಯ ಚಿಕ್ಕಮ್ಮ ಗೀತಾಳ ಸಹಕಾರವೂ ಇದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಗೋಚವಳ್ಳಿ ಎಂ.ಜಿ.ಆರ್ ಕ್ರಷರ್ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. 2020ರ ಸೆಪ್ಟೆಂಬರ್​ 1ರಿಂದ 2021ರ ಜನವರಿ 27ರವರೆಗೆ ಬಾಲಕಿ ಮೇಲೆ ಕಾಮುಕರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಲೈಂಗಿಕ ದೌರ್ಜನ್ಯವೆಸಗಿದ 15ಕ್ಕೂ ಅಧಿಕ ಜನರ ಗುರುತು ಸಂತ್ರಸ್ತೆಗಿಲ್ಲ ಇಲ್ಲ. ಅವರನ್ನೂ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಲೈಂಗಿಕ ದೌರ್ಜನ್ಯವೆಸಗುತ್ತಾ ಆ ಕೃತ್ಯದ ದುಶ್ಯವನ್ನ ವಿಡಿಯೋ ರೆಕಾರ್ಡ್ ಮಾಡಿ ದುಷ್ಕರ್ಮಿಗಳು ಬ್ಲಾಕ್‌ಮೇಲ್ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಇಂತಹ ಹೀನ ಕೃತ್ಯ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗೋಚವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net